
ಉಡುಪಿಯಲ್ಲಿ ಅಪಾಯಕಾರಿ ಕಂದಕ ಮುಚ್ಚುವಂತೆ ಸಾಹಸಿಯಂತೆ ಪ್ರತಿಭಟಿಸಿದ ನಿತ್ಯಾನಂದ ಒಳಕಾಡು!
ಉಡುಪಿ: ಜಲಾಶಯದಂತೆ ನೀರು ತುಂಬಿರುವ ಗುಂಡಿಯಲ್ಲಿ ಸಮಾಜಸೇವಕ ನಿತ್ಯಾನಂದ ಒಳಕಾಡುವರು ಕ್ರೇನ್ ಸಹಾಯದಿಂದ, ಅಪಾಯದ ಸ್ಥಿತಿಯಲ್ಲಿಯೂ ಧೈರ್ಯದಿಂದ ನೀರಿನ ಗುಂಡಿಯಲ್ಲಿ ಪ್ರತಿಭಟಿಸಿ ಅಪಾಯಕಾರಿ ಗುಂಡಿಯನ್ನು ಮುಚ್ಚುವಂತೆ ಸರಕಾರವನ್ನು ಆಗ್ರಹಿಸಿದರು.
ಕವಿ ಮುದ್ದಣ ಮಾರ್ಗ ಇಲ್ಲಿ ಈ ಮೊದಲಿದ್ದ ಹಾಜಿ ಅಬ್ದುಲ್ಲಾ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಸ್ಥಳದಲ್ಲಿ ನವನಿರ್ಮಾಣ ಕಾಮಗಾರಿಗೆಂದು ಪ್ರಪಾತದಂತೆ ಆಳದ ಗುಂಡಿ ತೋಡಿಡಲಾಗಿದೆ. ತೋಡಿಟ್ಟಿರುವ ಗುಂಡಿಯು ಹಾಗೆಯೇ ಇದ್ದು ಜಲಾಶಯದಂತೆ ಮಳೆ ನೀರು ತುಂಬಿಕೊಂಡಿದೆ. ಸುತ್ತಲು ವಾಣಿಜ್ಯ ಕಟ್ಟಡಗಳು, ವಸತಿ ಗ್ರಹಗಳು, ಮನೆಗಳು ಇದ್ದಿರುವುದರಿಂದ ಕುಸಿತದ ಭೀತಿ ಎದುರಾಗಿದೆ. ಈಗಾಗಲೇ ಅಲ್ಲಲ್ಲಿ ಮಳೆಗೆ ಮಣ್ಣುತೇವಗೊಂಡು ಗುಡ್ಡಗಳು ಕುಸಿದಿರುವ ಘಟನೆಗಳು ಕಣ್ಣಮುಂದಿವೆ. ಅದಲ್ಲದೆ ಗುಂಡಿಯು ಮಾರಕ ರೋಗವಾಹಕ ಸೊಳ್ಳೆಗಳನ್ನು ಉತ್ಪಾದಿಸುವ ಕಾರ್ಖಾನೆಯಾಗಿಯು ಮಾರ್ಪಟ್ಟಿದೆ. ಇಲ್ಲಿಯ ಅಪಾಯಕಾರಿ ಸ್ಥಳವನ್ನು ತಜ್ಞ ಅಭಿಯಂತರರ ಮೂಲಕ ಪರಿಶೀಲನೆ ನೆಡೆಸಿ ಸುವ್ಯವಸ್ಥೆಗೊಳಿಸಬೇಕೆಂದುಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡುವರು ಆಗ್ರಹಪಡಿಸಿದರು. ಹಿರಿಯ ಸಾಮಾಜಿಕ ಹೋರಾಟಗಾರ ಡಾ. ಪಿ.ವಿ ಭಂಡಾರಿ ಅವರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದು ವಿಸ್ತಾರವಾಗಿ ಭಾದಕತೆಯ ವಿವರಗಳನ್ನು ಮುಂದಿಟ್ಟರು.
ಅಪಾಯಕಾರಿ ಸಾಹಸದ ಪ್ರತಿಭಟನೆಯಾದುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಅಗ್ನಿಶಾಮಕ ದಳದವರಿಗೂ ಮೊದಲಾಗಿ ಮಾಹಿತಿ ನೀಡಿಟ್ಟಿದ್ದರು. ತುರ್ತು ಸೇವೆಗೆಂದು ಅಂಬುಲೇನ್ಸ್ ವಾಹನ, ಮುಳುಗುತಜ್ಞರು ಸ್ಥಳದಲ್ಲ ನಿಯೋಜಿಸಲಾಗಿತ್ತು. ಸಂಚಾರಿ ಪೋಲಿಸರು, ನಗರ ಠಾಣೆಯ ಪೋಲಿಸರು ಸ್ಥಳದಲ್ಲಿದ್ದರು. ಪ್ರತಿಭಟನೆಗೆ ಶ್ರೀಕಟೀಲೇಶ್ವರಿ ಕ್ರೇನಿನ ಮಾಲಿಕರ ಉಚಿತವಾಗಿ ಕ್ರೇನ್ ಉಚಿತವಾಗಿ ಪ್ರತಿಭಟನೆಗೆ ಒದಗಿಸಿದರು.