ಪ್ರಧಾನಿ ಮೋದಿ ಬದಲಾವಣೆಗೆ ಆರ್‌ಎಸ್‌ಎಸ್‌ ಸಭೆ ನಡೆಸಿದೆ: ಸಂತೋಷ್ ಲಾಡ್

ಪ್ರಧಾನಿ ಮೋದಿ ಬದಲಾವಣೆಗೆ ಆರ್‌ಎಸ್‌ಎಸ್‌ ಸಭೆ ನಡೆಸಿದೆ: ಸಂತೋಷ್ ಲಾಡ್

ಬೀದರ್:‌ ಪ್ರಧಾನಿ ಮೋದಿಯನ್ನು ಬದಲಾವಣೆ ಮಾಡಲು ಸಭೆ ನಡೆದಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರು ಬದಲಾಗುತ್ತಾರಾ ಎಂಬ ಪ್ರಶ್ನೆಗೆ ಬಸವಕಲ್ಯಾಣದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸಿಎಂ ಬದಲಾವಣೆ ಆಗಲ್ಲ. ಪ್ರಧಾನಿ ಮೋದಿಯನ್ನು ಬದಲಾವಣೆ ಮಾಡಬೇಕು ಎಂದು ಆರ್‌ಎಸ್‌ಎಸ್‌ (RSS) ಸಭೆ ನಡೆಸಿದೆ ಎಂದು ಹೊಸ ಬಾಂಬ್‌ ಸಿಡಿಸಿದರು. 

ಪ್ರಧಾನಿ ಮೋದಿಯನ್ನು ಬದಲಾವಣೆ ಮಾಡಬೇಕು ಹುನ್ನಾರ ಮಾಡಲಾಗುತ್ತಿದೆ. ಈ ಬಗ್ಗೆ ಬಿಜೆಪಿಯ ನಾಯಕರನ್ನು ಕೇಳಿ ಎಂದು ತಿರುಗೇಟು ನೀಡಿದರು.

ಚಾಮರಾಜನಗರದಲ್ಲಿ ಸತೀಶ್‌ ಜಾರಕಿಹೊಳಿ, ಪರಮೇಶ್ವರ್‌, ಮಹಾದೇವಪ್ಪ ನಡೆಸಿದ ಡಿನ್ನರ್‌ ಸಭೆಯ ಬಗ್ಗೆ ಪ್ರತಿಕ್ರಿಯಿಸಿ, ಎಲ್ಲಾ ಕಡೆ ಸಭೆ ನಡೆಯುವುದು ಸಾಮಾನ್ಯ ಎಂದು ತೇಪೆ ಹಚ್ಚಿ ಸಿಎಂ ಬದಲಾವಣೆಗೆ ಪಿಎಂ ಬದಲಾವಣೆ ವಿಚಾರವನ್ನು ಮುನ್ನೆಲೆಗೆ ತಂದರು.

Ads on article

Advertise in articles 1

advertising articles 2

Advertise under the article