ಕಾಂಗ್ರೆಸ್ ಅಭ್ಯರ್ಥಿಯನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸುವಂತೆ ಡಿ ಆರ್ ರಾಜು ಮನವಿ

ಕಾಂಗ್ರೆಸ್ ಅಭ್ಯರ್ಥಿಯನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸುವಂತೆ ಡಿ ಆರ್ ರಾಜು ಮನವಿ

ಕಾರ್ಕಳ: ಅಕ್ಟೋಬರ್ 21ರಂದು ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿತ್ವದ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸುವಂತೆ ಡಿ ಆರ್ ರಾಜು ಮನವಿ ಮಾಡಿದ್ದಾರೆ. 

ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಾನೂ ಒಬ್ಬ ಆಕಾಂಕ್ಷಿಯಾಗಿದ್ದೆ. ಪಕ್ಷ ವರಿಷ್ಠರ ಸೂಚನೆಯಂತೆ ಪಕ್ಷಕ್ಕೆ ಅರ್ಜಿಯನ್ನೂ ಸಲ್ಲಿಸಿದ್ದೆ. ಚುನಾವಣೆಯನ್ನು ಎದುರಿಸುವ ನಿಟ್ಟಿನಲ್ಲಿ ಪೂರ್ವ ತಯಾರಿಯ ಗುರಿಯೊಂದಿಗೆ  ಪಕ್ಷದ ಸ್ಥಳೀಯ ನಾಯಕರೊಂದಿಗೆ ಹಾಗೂ  ವಿವಿಧ ಸ್ಥಳೀಯ ಸಂಸ್ಥೆಗಳನ್ನು, ಅದರ ಸದಸ್ಯರನ್ನು ಬೇಟಿಯಾಗಿ ಚರ್ಚಿಸಿದ್ದೆ‌. ಈ ಸಂದರ್ಭ ನನ್ನ ಸ್ಪರ್ಧೆಗೆ ಬಹಳಷ್ಟು ಮಂದಿ ಸಕಾರಾತ್ಮಕವಾಗಿ ಸ್ಪಂಧಿಸಿದ್ದರು. ದೂರವಾಣಿಯ ಮೂಲಕ ಮಾತಾಡಿ ನನಗೆ ಸ್ಪೂರ್ತಿ ನೀಡಿದ್ದರು. ಆಶೀರ್ವದಿಸಿ ಹರಸಿದ್ದರು. ಆದರೆ ಹೈಕಮಾಂಡ್ ನಿರ್ಣಯ ಅಂತಿಮವಾಗಿದ್ದು ಪಕ್ಷಕ್ಕೆ ಅದರದ್ದೇ ಆದ ನೀತಿ ಮತ್ತು ನಿಯಮಾವಳಿ ಪ್ರಕಾರ ಈಬಾರಿ ನನಗೆ ಸ್ಪರ್ಧಿಸುವ ಅವಕಾಶ  ಸಿಗಲಿಲ್ಲ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ರಾಜ್ಯ ಹಿಂದುಳಿದ ವರ್ಗಗಳ ಸಮಿತಿ ಉಪಾಧ್ಯಕ್ಷ ಡಿ ಆರ್ ರಾಜು ತಿಳಿಸಿದ್ದಾರೆ.

ನನಗೆ ಅವಕಾಶ ಸಿಗಲಿಲ್ಲ ಎಂದು ರಾಜಕೀಯ ಹಿತೈಷಿಗಳು ನಿರಾಶರಾಗ ಬಾರದು. ಕಾಂಗ್ರೆಸ್ ಪಕ್ಷ ಮೈದುಂಬಿ ಹರಿಯುವ ಗಂಗಾನದಿ ಇದ್ದಂತೆ. ಜನ ಸೇವೆಯ ಗುರಿಹೊಂದಿದವನಿಗೆ ಇಲ್ಲಿ ಅವಕಾಶಗಳು ಬೇಕಾದಷ್ಟಿವೆ. ಈ ನಿಟ್ಟಿನಲ್ಲಿ ನನ್ನೊಂದಿಗೆ ದುಡಿದ, ಸಹಕರಿಸಿದ, ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಹುರಿದುಂಬಿಸಿದ,   ನನ್ನೆಲ್ಲ ಅಭಿಮಾನಿ ಬಂಧುಮಿತ್ರರಿಗೆ ಹೃದಯಂತರಾಳದ ಧನ್ಯವಾದಗಳನ್ನು ಸಲ್ಲಿಸಿದರು 

ಈ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯಾಗಿ   ಸಹಕಾರಿ ಧುರೀಣ, ಜಿಲ್ಲಾ ಮಾಜಿ ಅಧ್ಯಕ್ಷ, ಪಂಚಾಯತ್ ರಾಜ್ ವ್ಯವಸ್ಥೆಯ ಒಳಹೊರಗನ್ನು ಅರಿತ ಅನುಭವಿ ರಾಜಕಾರಿಣಿ,  ರಾಜು ಪೂಜಾರಿಯವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ದಾ ಕಣಕ್ಕಿಳಿದಿದ್ದಾರೆ.  ಸ್ಥಳೀಯ ಸಂಸ್ಥೆಗಳ  ಸದಸ್ಯ ಮಿತ್ರರು, ಮತದಾರರು ಅವರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ಪಂಚಾಯತ್ ರಾಜ್ ವ್ಯವಸ್ಥೆಗೆ ಬಲ ತುಂಬ ಬೇಕೆಂದು ಅವರು ಕರೆನೀಡಿದರು.

Ads on article

Advertise in articles 1

advertising articles 2

Advertise under the article