ಅರಣ್ಯ ಸಚಿವ ಖಂಡ್ರೆ ಅಭಿಮಾನಿಗಳಿಂದ ಯತ್ನಾಳ್ ಗೆ ತಿರುಗೇಟು! ಯತ್ನಾಳ್ ಮನೆಗೆ ಬಸವಣ್ಣನವರ ವಚನಾಮೃತದ ಪುಸ್ತಿಕೆ ರವಾನಿಸುತ್ತೇವೆ ಎಂದು ಟ್ವೀಟ್ ಮಾಡಿ ಚಾಟಿ ಬೀಸಿದ ಈಶ್ವರ್ ಖಂಡ್ರೆ ಅಭಿಮಾನಿಗಳು...
ಬೆಂಗಳೂರು: ಬಸವಣ್ಣರ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿರುವ ಹೇಳಿಕೆಗೆ ಅರಣ್ಯ ಸಚಿವ ಖಂಡ್ರೆ ಅಭಿಮಾನಿಗಳು ಗರಂ ಆಗಿದ್ದಾರೆ.
ಟ್ವೀಟ್'ನಲ್ಲಿ ಏನಿದೆ ನೋಡಿ...
ಯತ್ನಾಳ್ ಅಜ್ಙಾನದಿಂದ ನೀಡಿರುವ ಹೇಳಿಕೆಗೆ ಬಸವಣ್ಣನವರ ಅಭಿಮಾನಿಗಳು ತಲೆಕೆಡಿಸಿಕೊಳ್ಳಲಾರರೂ. ಭಕ್ತಿಭಂಡಾರಿಯ ಅಭಿಮಾನಿಗಳು ಗಲಭೆಗೆ ಆಸ್ಪದ ನೀಡುವವರಲ್ಲಾ...ಅಜ್ಙಾನದ ಪರಮಾವಧಿಯಲ್ಲಿ ಮೆರೆಯುತ್ತಿರುವ ಯತ್ನಾಳ್ ರವರ ಮನೆ ವಿಳಾಸಕ್ಕೆ ಬಸವಣ್ಣನವರ ವಚನಾಮೃತದ ಪುಸ್ತಿಕೆಯನ್ನು ರವಾನಿಸುವ ಕೆಲಸ ಮಾಡಲಿದ್ದೇವೆ ಆ ಮೂಲಕ ಅಂಧಾಕಾರದಿಂದ ಯತ್ನಾಳ್ ರನ್ನು ಹೊರತ ತರುವ ಪ್ರಯತ್ನ ಮಾಡಲಿದ್ದೇವೆ ಎಂದು ಇದೀಗ ಖಂಡ್ರೆ ಬೀದರ್ ಬಿಗ್ ಬಿ ಖಂಡ್ರೆ ಫ್ಯಾನ್ಸ್ ಎಂಬ ಎಕ್ಸ್ ಖಾತೆಯ ಮೂಲಕ ಖಂಡ್ರೆ ಅಭಿಮಾನಿಗಳು ವಿಶ್ವಗುರು , ಕರ್ನಾಟಕ ಸಾಂಸ್ಕೃತಿಕ ನಾಯಕ ಬಸವಣ್ಣನವರನ್ನು ಹಿಯಾಳಿಸಿ ಮಾತಾಡಿರುವ ಯತ್ನಾಳ್ ರಿಗೆ ಚಾಟಿ ಬೀಸಿದ್ದಾರೆ.
ಬಸವಣ್ಣನವರನ್ನು ಕರ್ನಾಟಕ ಸಾಂಸ್ಕೃತಿಕ ನಾಯಕ ಎಂದು ಕರ್ನಾಟಕ ಸರಕಾರ ಘೋಷಿಸಲು ಈಶ್ವರ್ ಖಂಡ್ರೆ ಅವರು ಅವಿರತವಾಗಿ ಶ್ರಮ ಹಾಕಿದ್ದನ್ನು ನಾವಿಲ್ಲಿ ಸ್ಮರಿಸಬಹುದು.