ದುಬೈಯಲ್ಲಿ ಜನವರಿ 5ರಂದು ನಡೆಯಲಿದೆ KIC FAMILY MULAQATH
ಕೆಐಸಿ ಅಲ್ ಕೌಸರ್ ಯೂತ್ ವಿಂಗ್ ಯುಎಇ ಹಾಗು ಕೆಐಸಿ ಯುಎಇ ರಾಷ್ಟ್ರೀಯ ಸಮಿತಿ ಅಧೀನದಲ್ಲಿ ಕೆ ಐ ಸಿ ಪ್ರಚಾರಾರ್ಥ KIC FAMILY MULAQATH - 2025 ಕಾರ್ಯಕ್ರಮವನ್ನು ಜನವರಿ 5 ರಂದು ದುಬೈ ಮುಶ್ರೀಫ್ ಪಾರ್ಕ್ ಕವನೀಜ್ - ರಾಶಿದಿಯಾದಲ್ಲಿ ಹಮ್ಮಿಕೊಂಡಿದೆ.
ಈ ಕಾರ್ಯಕ್ರಮದಲ್ಲಿ ಕೆಐಸಿ ಹಿತೈಷಿಗಳು, ಪೋಷಕರು, ಅನಿವಾಸಿ ಸಹೋದರ ಸಂಘ ಸಂಸ್ಥೆಗಳ ನೇತಾರರು ಭಾಗವಹಿಸಲಿದ್ದು, ಕಾರ್ಯಕ್ರಮದಲ್ಲಿ ಧಾರ್ಮಿಕ ಚೌಕಟ್ಟಿನಲ್ಲಿ ಹಿರಿಯರು, ಕಿರಿಯರು, ಮಕ್ಕಳಿಗೆ , ಮಹಿಳೆಯರಿಗೆ ವಿವಿಧ ಮನೋರಂಜನಾ ಸ್ಪರ್ಧಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಆಮಂತ್ರನಾ ಪತ್ರ ಅನಾವರಣ ಕಾರ್ಯಕ್ರಮವು ಇತ್ತೀಚೆಗೆ ಶಾರ್ಜಾ ಕೆಐಸಿ ಸಮಾರಂಭದಲ್ಲಿ ಸಯ್ಯದ್ ಅಸ್ಕರ್ ಅಲಿ ತಂಙಳ್ ರವರ ನೇತೃತ್ವದಲ್ಲಿ ನಡೆಯಿತು. ಪ್ರಸಕ್ತ ಸಮಾರಂಭದಲ್ಲಿ ಸಿರಾಜುದ್ದೀನ್ ಫೈಝಿ ಬಂಟ್ವಾಳ , ಕೆಐಸಿ ಯುಎಇ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಷರೀಫ್ ಕೊಡಿನೀರ್ , ಶಾರ್ಜಾ ಸಮಿತಿ ಅಧ್ಯಕ್ಷರಾದ ಮೂಸಾ ಪೆರವಾಯಿ , ಕೆಐಸಿ ಅಲ್ ಕೌಸರ್ ಯೂತ್ ವಿಂಗ್ ಅಧ್ಯಕ್ಷರಾದ ಅಸೀಫ್ ಮರೀಲ್ , ಕೆಐಸಿ ಶಾರ್ಜಾ ಸಮಿತಿ ನೇತಾರರು ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಅನಿವಾಸಿ ಕೆ ಐ ಸಿ ಹಿತೈಷಿಗಳು , ಅನಿವಾಸಿ ದೀನೀ ಸ್ನೇಹಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕಾರ್ಯಕ್ರಮದ ಆಯೋಜಕರು ವಿನಂತಿಸಿಕೊಂಡಿದ್ದಾರೆ.