ಬೆಳಗಾವಿಯಲ್ಲಿ ಬಾಲಕಿ ಮೇಲೆ 6 ಮಂದಿಯಿಂದ 2 ಬಾರಿ ಗ್ಯಾಂಗ್ ರೇಪ್; ಇಬ್ಬರ ಬಂಧನ

ಬೆಳಗಾವಿಯಲ್ಲಿ ಬಾಲಕಿ ಮೇಲೆ 6 ಮಂದಿಯಿಂದ 2 ಬಾರಿ ಗ್ಯಾಂಗ್ ರೇಪ್; ಇಬ್ಬರ ಬಂಧನ

ಬೆಳಗಾವಿ: ಅಪ್ರಾಪ್ತೆ ಮೇಲೆ 6 ಮಂದಿ ಕಾಮುಕರು ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಬೆಳಗಾವಿ ಹೊರ ವಲಯದ ಕಾಕತಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ

15 ವರ್ಷದ ಅಪ್ರಾಪ್ತೆ ಮೇಲೆ ದುರುಳರು 2 ಬಾರಿ ಗ್ಯಾಂಗ್ ರೇಪ್ ಮಾಡಿರುವ ಘಟನೆ ನಡೆದಿದೆ. 6 ತಿಂಗಳ ಹಿಂದೆ ಬಾಲಕಿಯನ್ನ ಸ್ನೇಹಿತನೊಬ್ಬ ಪುಸಲಾಯಿಸಿ ಗುಡ್ಡಕ್ಕೆ ಕರೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ಎಸಗಿ, ಅದನ್ನು ವೀಡಿಯೊ ಮಾಡಿದ್ದರು. 

ಬಳಿಕ ಅದೇ ವೀಡಿಯೊ ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿ ಅಪ್ರಾಪ್ತೆಯ ಮೇಲೆ ಮತ್ತೊಮ್ಮೆ ರೇಪ್ ಮಾಡಿದ್ದರು. ಈ ಸಂದರ್ಭದಲ್ಲೂ ಸಹ ದುರುಳರು ವೀಡಿಯೊ ಮಾಡಿಕೊಂಡಿದ್ದರು. ಅತ್ಯಾಚಾರದ ವೀಡಿಯೊ ಇಟ್ಟುಕೊಂಡು, ಈಗ ಮತ್ತೆ ಅಪ್ರಾಪ್ತ ಬಾಲಕಿಯನ್ನು ಬೆದರಿಸುತ್ತಿರುವ ಹಿನ್ನೆಲೆ ಆರೋಪಿಗಳ ವಿರುದ್ಧ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಫೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. 

ಎಫ್‌ಐಆರ್ ದಾಖಲಾದ ಒಂದೇ ದಿನದಲ್ಲಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಎ1 ಸೇರಿ ಇನ್ನುಳಿದ ಆರೋಪಿಗಳ ಪತ್ತೆಗೆ ಪೊಲೀಸರ ಶೋಧ ಕಾರ್ಯ ನಡೆಸುತ್ತಿದ್ದಾರೆ. 

ವಾರದ ಹಿಂದೆಯಷ್ಟೇ ರೆಸಾರ್ಟ್ ಒಂದರಲ್ಲಿ ಬಾಲಕಿ ಮೇಲೆ ಗ್ಯಾಂಗ್ ರೇಪ್ ಆಗಿತ್ತು. ಈ ಪ್ರಕರಣದಲ್ಲಿ ಇಬ್ಬರು ಬಾಲಾಪರಾಧಿ ಸೇರಿ ಐದು ಜನರ ಬಂಧನವಾಗಿತ್ತು. ಇದೀಗ ಜಿಲ್ಲೆಯಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ದಾಖಲಾಗಿದೆ

Ads on article

Advertise in articles 1

advertising articles 2

Advertise under the article