ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದಕ್ಕೆ ನನಗೆ ನೊಬೆಲ್ ಪ್ರಶಸ್ತಿ ನೀಡುವುದಿಲ್ಲ ಎಂದ ಟ್ರಂಪ್!

ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದಕ್ಕೆ ನನಗೆ ನೊಬೆಲ್ ಪ್ರಶಸ್ತಿ ನೀಡುವುದಿಲ್ಲ ಎಂದ ಟ್ರಂಪ್!

ಭಾರತ – ಪಾಕಿಸ್ತಾನದ ನಡುವೆ ಶಾಂತಿಗಾಗಿ ಮಧ್ಯಸ್ಥಿಕೆಯನ್ನು ಮಾಡುವೆ ಎಂದು ಪದೇ ಪದೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald trump) ಹೇಳುತ್ತಿದ್ದಾರೆ. ಇದೀಗ ಮತ್ತೆ ಶುಕ್ರವಾರ (ಜೂ.20) ಅದೇ ರಾಗ ಹೇಳಿದ್ದಾರೆ. ಪಾಕಿಸ್ತಾನ – ಭಾರತ ಯುದ್ಧ ನಿಂತಿದ್ದು ನನ್ನ ಮಧ್ಯಸ್ಥಿಕೆಯಲ್ಲಿ ಎಂದು ಈ ಹಿಂದೆ ಹೇಳಿದ್ದಾರೆ. ಇದೀಗ ಎರಡು ರಾಷ್ಟ್ರಗಳ ನಡುವೆ ಶಾಂತಿ ಮಾತುಕತೆ ಮಾಡುವೆ ಎಂದು ಹೇಳಿದ್ದಾರೆ. 

ಈ ಕೆಲಸಕ್ಕೆ ನನಗೆ ಯಾರು ನೊಬೆಲ್ ಶಾಂತಿ ಪ್ರಶಸ್ತಿ ನೀಡುವುದಿಲ್ಲ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ. ಪಾಕಿಸ್ತಾನ ಮತ್ತು ಭಾರತದ ನಡುವೆ ನಡೆದ ಬಿಕ್ಕಟ್ಟಿಗೆ ಹಲವು ವಿಚಾರಗಳು ಕಾರಣವಾಗಿತ್ತು. ಭಾರತದ ನಾಗರಿಕರನ್ನು ಹತ್ಯೆ ಮಾಡಿದ ನಂತರ ಭಾರತ ಪಾಕಿಸ್ತಾನದ ಮೇಲೆ ಆಪರೇಷನ್​​ ಸಿಂಧೂರದ ಮೂಲಕ ದಾಳಿ ಮಾಡಿ ಉಗ್ರ ನೆಲೆಗಳನ್ನು ನಾಶ ಮಾಡಿತ್ತು. ಈ ಸಂಘರ್ಷ ಮುಂದುವರಿತ್ತು. ಕೊನೆಯಲ್ಲಿ ಪಾಕಿಸ್ತಾನ ಕದನ ವಿರಾಮ ಘೋಷಣೆ ಮಾಡಿತ್ತು. ಈ ವೇಳೆ ಅಮೆರಿಕದ ಸಹಾಯವನ್ನು ಕೂಡ ಪಾಕಿಸ್ತಾನ ಕೇಳಿತು. ನಂತರ ಅಮೆರಿಕ ಭಾರತಕ್ಕೆ ಮನವಿ ಮಾಡಿತ್ತು. ಆದರೆ ಭಾರತದ ಅಧಿಕಾರಿಗಳಿಗೆ ನೇರವಾಗಿ ಹೇಳುವಂತೆ ಪಾಕಿಸ್ತಾನಕ್ಕೆ ಹೇಳಿತ್ತು. ನಂತರ ಪಾಕ್​​​ ಭಾರತದ ಅಧಿಕಾರಿಗಳೊಂದಿಗೆ ಮಾತನಾಡಿದ ನಂತರ, ಕದನ ವಿರಾಮಕ್ಕೆ ಭಾರತ ಒಪ್ಪಿತ್ತು. ಆದರೆ ಇದನ್ನೇ ಅಸ್ತ್ರವಾಗಿ ಇಟ್ಟುಕೊಂಡ ಅಮೆರಿಕ ನಮ್ಮ ಮಧ್ಯಸ್ಥಿಕೆಯಲ್ಲಿ ಈ ಸಮಸ್ಯೆ ಬಗೆಹರಿದಿದೆ ಎಂದು ಹೇಳಿಕೊಂಡಿದೆ. ಇದೀಗ ಮತ್ತೆ ಅದೇ ಮಾತನ್ನು ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ.

ಇತ್ತಿಚೇಗೆ ಕೆನಡಾದಲ್ಲಿ ನಡೆದ ಜಿ7 ಶೃಂಗಸಭೆ ಬಳಿಕ ಟ್ರಂಪ್ ಆತುರಾತುರವಾಗಿ ದೇಶಕ್ಕೆ ಹಿಂದಿರುಗಿದ ಕಾರಣ ಪ್ರಧಾನಿ ಮೋದಿಗೆ ಮಾತನಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ದೂರವಾಣಿ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ. ಈ ಸಮಯದಲ್ಲಿ ಪಾಕಿಸ್ತಾನ – ಭಾರತದ ನಡುವಿನ ಸಂಘರ್ಷದ ಬಗ್ಗೆಯೂ ಮಾತನಾಡಿದ್ದಾರೆ. ಆದರೆ ಮೋದಿ ಇದಕ್ಕೆ ಸರಿಯಾಗಿ ಉತ್ತರ ಕೂಡ ನೀಡಿದ್ದಾರೆ. ಈ ವಿಚಾರದಲ್ಲಿ ಭಾರತ ಎಂದೂ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆ ಬಯಸಿಲ್ಲ ಎಂದು ಖಡಕ್​​ ಆಗಿ ಹೇಳಿದ್ದಾರೆ. ಆದರೆ ಇದೀಗ ಟ್ರಂಪ್ ಪಾಕ್​​​- ಭಾರತದ ನಡುವೆ ಶಾಂತಿಗಾಗಿ ಮಾತುಕತೆ ನಡೆಸುವುದಾಗಿ ಹೇಳಿದ್ದಾರೆ. ಆದರೆ ಈ ಹಿಂದೆ ಕದನ ವಿರಾಮ ಘೋಷಣೆಗೆ ನಾವು ಕಾರಣ ಅಲ್ಲ ಎಂದು ಹೇಳಿದ್ದಾರೆ.

Ads on article

Advertise in articles 1

advertising articles 2

Advertise under the article