ಡಾ.ಶೇಖ್ ವಾಹೀದ್ ಅವರಿಗೆ 'ಕರುನಾಡ ಕಲ್ಪವೃಕ್ಷ ಪ್ರಶಸ್ತಿ' ಪ್ರದಾನ

ಬೆಂಗಳೂರು: ರವೀಂದ್ರ ಕಲಾಕ್ಷೇತ್ರ ಆವರಣ ನಯನ ಸಭಾಂಗಣದಲ್ಲಿ ನಾಟ್ಯ ಮಯೂರಿ ನೃತ್ಯ ಟ್ರಸ್ಟ್‌ (ರಿ) ಸಂಸ್ಥೆಯಿಂದ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ನಾಡಿಗಾಗಿ ನಾಡಿನ ಏಳಿಗೆಗಾಗಿ ಗಣನೀಯ ಸೇವೆ ಸಲ್ಲಿಸಿದ ಸಾಧಕ ಗಣ್ಯರಿಗೆ "ಕರುನಾಡ ಕಲ್ಪವೃಕ್ಷ" ರಾಷ್ಟ್ರಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಮಾರಂಭದಲ್ಲಿ ''ಕೆಪಿಸಿಸಿ ಜನರಲ್ ಸೆಕ್ರೆಟರಿ ಹಾಗೂ ಮೈನಾರಿಟಿ ಕಮಿಟಿ ಎಲ್‌ಎನ್ ಡಾ. ಶೇಖ್ ವಾಹೀದ್ ದಾವೂದ್" ಅವರಿಗೆ "ಕರುನಾಡ ಕಲ್ಪವೃಕ್ಷ ಪ್ರಶಸ್ತಿ" ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ನ್ಯಾಯಮೂರ್ತಿ ಎನ್ ಸಂತೋಷ್ ಹೆಗ್ಡೆ, ಹಿರಿಯ ಪತ್ರಕರ್ತರಾದ ಡಾ.ಕೆಂಚನೂರು ಶಂಕರ, ಡಾ.ರವಿ ಶೆಟ್ಟಿ ಬೈಂದೂರು ಹಾಗೂ ಹಲವು ಗಣ್ಯರು ಉಪಸ್ಥಿತರಿದ್ದರು. ಆಶಯ ನುಡಿಗೈದ ವಿದುಷಿ ಪ್ರೇಮಾಂಜಲಿ ಆಚಾರ್ಯ ಅವರು ಕಾರ್ಯಕ್ರಮವನ್ನು ಆಯೋಜಿಸಿದ್ದರು.