ಕಾಪು ಚಂದ್ರನಗರದ ಕ್ರೆಸೆಂಟ್ ಇಂಟರ್ನ್ಯಾಷನಲ್ ವಿದ್ಯಾಸಂಸ್ಥೆಯಲ್ಲಿ ಯೋಗ ದಿನಾಚರಣೆ

ಕಾಪು ಚಂದ್ರನಗರದ ಕ್ರೆಸೆಂಟ್ ಇಂಟರ್ನ್ಯಾಷನಲ್ ವಿದ್ಯಾಸಂಸ್ಥೆಯಲ್ಲಿ ಯೋಗ ದಿನಾಚರಣೆ

ಭಾರತದ ಪ್ರಧಾನಿ ನರೇಂದ್ರ ಮೋದಿಯವರು 2014ರಲ್ಲಿ ಯುನೈಟೆಡ್ ನೇಶನ್ಸ್ ಜನರಲ್ ಅಸೆಂಬ್ಲಿ (UNGA)ಯಲ್ಲಿ ಪ್ರಸ್ತಾಪಿಸಿದ ವಿಶ್ವ ಯೋಗ ದಿನಾಚರಣೆಗೆ ಸಂಬಂಧಿಸಿದಂತೆ ಜೂನ್ 21ನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಘೋಷಿಸಲಾಗಿದ್ದು ವಿಶ್ವದಲ್ಲೆಡೆ ಆಚರಣೆಗೆ ಒಳಪಡುವ ಯೋಗ ದಿನಾಚರಣೆಯು ಕಾಪು ಚಂದ್ರನಗರದ ಕ್ರೆಸೆಂಟ್ ಇಂಟರ್ನ್ಯಾಷನಲ್ ವಿದ್ಯಾಸಂಸ್ಥೆಯಲ್ಲಿಯೂ ವಿದ್ಯಾರ್ಥಿಗಳಿಂದ ಆಚರಿಸಲಾಯಿತು.

ನಮ್ಮ ಭೂಮಿಯ ಸಂರಕ್ಷಣೆ ಹಾಗೂ ಸೃಷ್ಟಿಯ ಸಮಗ್ರ ಆರೋಗ್ಯದ ದೃಷ್ಟಿಯಿಂದ ಒಂದು ಭೂಮಿಗೆ ಒಂದು ಆರೋಗ್ಯಕ್ಕಾಗಿ ಯೋಗ (yoga for one earth and one health)ಎಂಬ ವಿಷಯ ವಸ್ತುವಿನ ಅಡಿಯಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ಅಕ್ಷರ ಅಲಿ, ಉಪ ಪ್ರಾಂಶುಪಾಲರಾದ ಗುರುದತ್ ಹಾಗೂ ಸಮಸ್ತ ಶಿಕ್ಷಕ ವೃಂದದವರ ಸಹಾಭಾಗಿತ್ವದೊಂದಿಗೆ, ಶ್ರೀ ಲಕ್ಷ್ಮಿ ಜನಾರ್ದನ ವಿದ್ಯಾಸಂಸ್ಥೆ,ಬೆಳ್ಳಣ್ಣೆ ಇಲ್ಲಿನ ಯೋಗ ಶಿಕ್ಷಕಿ ಮಧುಶ್ರೀ ಅವರ ಮಾರ್ಗದರ್ಶನದಲ್ಲಿ ಯೋಗ ಕಾರ್ಯಕ್ರಮವು ಯಶಸ್ವಿಯಾಗಿ ಮೂಡಿಬಂತು.

Ads on article

Advertise in articles 1

advertising articles 2

Advertise under the article