ಉಡುಪಿ: ಆ.28ರಂದು ಕುಮಾರಿ ಅದಿತಿ ಜಿ.ನಾಯಕ್ ಅವರಿಂದ ನೃತ್ಯಾರ್ಪಣ ಕಾರ್ಯಕ್ರಮ

ಉಡುಪಿ: ರಾಧಾಕೃಷ್ಣ ನೃತ್ಯ ನಿಕೇತನದ ಕುಮಾರಿ ಅದಿತಿ ಜಿ. ನಾಯಕ್ ಅವರ  ನೃತ್ಯಾರ್ಪಣ ಕಾರ್ಯಕ್ರಮವು ಆ. 28ರಂದು ಸಂಜೆ 5.15ಕ್ಕೆ ನಗರದ ಐವೈಸಿ ಯಕ್ಷಗಾನ ಕಲಾರಂಗ ಸಭಾಂಗಣದಲ್ಲಿ ನಡೆಯಲಿದೆ ಎಂದು ನೃತ್ಯಗುರು ವಿದುಷಿ ವೀಣಾ ಎಂ. ಸಾಮಗ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಕೌಟ್ ಆಯುಕ್ತ ಜನಾರ್ದನ್ ಕೊಡವೂರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮಂಗಳೂರಿನ ಸೌರಭ ಕಲಾ ಪರಿಷತ್ ನ ನಿರ್ದೇಶಕಿ ಡಾ. ಶ್ರೀವಿದ್ಯಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅದಿತಿ ನಾಯಕ್ ಅಂದು ಭರತನಾಟ್ಯ ಹಾಗೂ ಕೂಚುಪುಡಿ ನೃತ್ಯ ಪ್ರದರ್ಶನ ನೀಡಲಿದ್ದಾರೆ. ಅಂದಿನ ನೃತ್ಯ ಕಾರ್ಯಕ್ರಮದ ನಟುವಾಂಗ, ನೃತ್ಯ ನಿರ್ದೇಶನ, ಹಾಡುಗಾರಿಕೆ ವಿದುಷಿ ಶ್ರೀಮತಿ ವೀಣಾ ಎಂ. ಸಾಮಗ, ಮೃದಂಗದಲ್ಲಿ ಮಂಗಳೂರಿನ ವಿದ್ವಾನ್ ಮನೋಹರ್ ರಾವ್, ವಯಲಿನ್ ನಲ್ಲಿ ವಿದ್ವಾನ್ ಶ್ರೀಧರ್ ಆಚಾರ್ಯ, ಹಾಗೂ ಕೊಳಲಿನಲ್ಲಿ ಡಾ. ಬಾಲಕೃಷ್ಣ ಮಣಿಪಾಲ ಸಹಕರಿಸಲಿದ್ದಾರೆ ಎಂದರು.  ಸುದ್ದಿಗೋಷ್ಠಿಯಲ್ಲಿ ಕುಮಾರಿ ಅದಿತಿ ಜಿ. ನಾಯಕ್ ಉಪಸ್ಥಿತರಿದ್ದರು.