ಮಂಗಳೂರಿನಲ್ಲಿ ಪ್ರತಿಷ್ಠಿತ 'ಚೋಯ್ಸ್ ಗೋಲ್ಡ್ & ಡೈಮಂಡ್ಸ್'ನ ನೂತನ 'ಸಾರಾ ಡೈಮಂಡ್ಸ್' ಶುಭಾರಂಭ; ಸೆ.19ರಿಂದ ಸೆ.28ರವರೆಗೆ ಗ್ರಾಹಕರಿಗೆ ಬಿಗ್ ಆಫರ್ !

ಮಂಗಳೂರಿನಲ್ಲಿ ಪ್ರತಿಷ್ಠಿತ 'ಚೋಯ್ಸ್ ಗೋಲ್ಡ್ & ಡೈಮಂಡ್ಸ್'ನ ನೂತನ 'ಸಾರಾ ಡೈಮಂಡ್ಸ್' ಶುಭಾರಂಭ; ಸೆ.19ರಿಂದ ಸೆ.28ರವರೆಗೆ ಗ್ರಾಹಕರಿಗೆ ಬಿಗ್ ಆಫರ್ !

ಮಂಗಳೂರು: ವಿನ್ಯಾಸಭರಿತ ವಿಶೇಷ ಚಿನ್ನ ಹಾಗೂ ವಜ್ರಗಳ ಆಭರಣಗಳಿಗೆ ಹೆಸರುವಾಸಿಯಾಗಿರುವ 'ಚೋಯ್ಸ್ ಗೋಲ್ಡ್ & ಡೈಮಂಡ್ಸ್' ಇಲ್ಲಿನ ಹಂಪನಕಟ್ಟೆಯ ಆಲ್ಫಾ ಟವರ್‌ನಲ್ಲಿ ನೂತನವಾಗಿ 'ಸಾರಾ ಡೈಮಂಡ್ಸ್' ಮಳಿಗೆಯನ್ನು ಆರಂಭಿಸಿದ್ದು, ಶುಕ್ರವಾರ ಇದರ ಉದ್ಘಾಟನಾ ಕಾರ್ಯಕ್ರಮವು ನೆರವೇರಿತು.

ಮಂಗಳೂರು, ಉಡುಪಿ, ಮುಡಿಪು, ವಿಟ್ಲ, ಮಜೀರ್ಪಳ್ಳ ಹಾಗು ಸೀತಂಗೋಳಿಯಲ್ಲಿ ವಿಶಾಲವಾದ ಮಳಿಗೆಯನ್ನು ಹೊಂದಿರುವ 'ಚೋಯ್ಸ್ ಗೋಲ್ಡ್ & ಡೈಮಂಡ್ಸ್', ಈಗ ತನ್ನ ಹೊಸ ಬ್ರಾಂಡ್ 'ಸಾರಾ' ಡೈಮಂಡ್ಸ್' ಮಳಿಗೆಯನ್ನು ಲೋಕಾರ್ಪಣೆ ಗ್ರಾಹಕರಿಗಾಗಿ ಲೋಕಾರ್ಪಣೆ ಮಾಡಿದೆ. ಇದೇ ಸಂದರ್ಭ ಸೆ.28ರವರೆಗೆ ನಡೆಯಲಿರುವ 'ಚೋಯ್ಸ್ ಡೈಮಂಡ್' ಎಕ್ಸಿಬಿಷನ್(ಪ್ರದರ್ಶನ)ಗೆ ಗಣ್ಯರು ಚಾಲನೆ ನೀಡಿದರು.



ರಾಜ್ಯ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್ ನೂತನ  'ಸಾರಾ ಡೈಮಂಡ್ಸ್' ಮಳಿಗೆಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ದಿನಕಳೆದಂತೆ  ಮಂಗಳೂರು ಅಭಿವೃದ್ಧಿಯತ್ತ ಸಾಗುತ್ತಿದೆ. ಅದರಲ್ಲಿ ಯುವ ಉದ್ಯಮಿಗಳ ಪಾತ್ರ ಮಹತ್ತರವಾಗಿದೆ. ಇದೇ ರೀತಿ ಯುವ ಉದ್ಯಮಿಗಳು ನಗರದ ಅಭಿವೃದ್ಧಿಗೆ ಹೂಡಿಕೆ ಮಾಡಲು ಮುಂದಾಗಬೇಕು ಎಂದರು.

ಮಂಜೇಶ್ವರದ ಸೈಯದ್ ಪೂಕುಂಞಿ ಕೋಯ ತಂಙಳ್ ದುಆಗೈದರು. ಮಂಗಳೂರಿನ ಮಿಲಾಗ್ರಿಸ್ ಚರ್ಚ್‌ನ ಅಮಿತ್ ಪಾಯಸ್ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರನ್ನು ಸನ್ಮಾನಿಸಲಾಯಿತು. ಅತಿಥಿಯಾಗಿ ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ದೇಶಕ ಡಾ. ನುಹ್‌ಮಾನ್ ಎನ್.ಎಸ್., ದ.ಕ.ಜಿಪಂ ಮಾಜಿ ಸದಸ್ಯ ಎನ್.ಎಸ್. ಕರೀಂ ಮಂಜನಾಡಿ, ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ದೇಶಕ ಮತ್ತು ಸಿಇಒ ಡಾ. ಕಿರಾಶ್ ಪರ್ತಿಪ್ಪಾಡಿ, ಮಂಗಳೂರಿನ ಮ್ಯಾಕ್‌ ಓವರ್ ನಿಶಾಝ್, ಉದ್ಯಮಿ ಇಬ್ರಾಹೀಂ ದೋಹ ಜಲಾಲ್‌ಬಾಗ್, ಆಲ್ಫಾ ಟವರ್‌ನ ಲುತ್ಫುಲ್ಲಾ ಖಾಝಿ, ಥೀಮ್ಸ್ ಡಿಸೈನರ್ ರೇಶ್ಮಾ ತೋಟ, ಪುತ್ತೂರು ದರ್ಬೆಯ ಏಶಿಯನ್ ವುಡ್ ಆ್ಯಂಡ್ ಇಂಡಸ್ಟ್ರೀಸ್‌ನ ಇಸ್ಮಾಯೀಲ್, ಉದಯೋನ್ಮುಖ ಕಲಾವಿದೆ ತೃಪ್ತಿ ಜನಾರ್ದನ್, ಎಸ್.ಕೆ.ಖಾದರ್ ಹಾಜಿ ಮುಡಿಪು, ಡಾ. ಧೀರಜ್‌ಕುಮಾರ್ ವಿ., ಡಾ.ರಶ್ಮಿ ಶೆಟ್ಟಿ, ಬದ್ರುದ್ದೀನ್ ಪುತ್ತಿಗೆ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.














ಚಾಯ್ಸ್ ಗೋಲ್ಡ್'ನ ಆಡಳಿತ ಪಾಲುದಾರರಾದ ಶಹೀರ್‌ ಬಿಎಂ ಸ್ವಾಗತಿಸಿದರು. ಇನ್ನೋರ್ವ ಪಾಲುದಾರ ಅಶ್ರಫ್ ನಾಡಾಜೆ ವಂದಿಸಿದರು. ದಿವಾಕರ್ ಉಪ್ಪಳ ಕಾರ್ಯಕ್ರಮ ನಿರೂಪಿಸಿದರು.

ಗ್ರಾಹಕರಿಗೆ ವಿಶೇಷ ಆಫರ್....

ಶುಭಾರಂಭದ ಪ್ರಯುಕ್ತ ಪ್ರತೀ ಡೈಮಂಡ್ ಕ್ಯಾರೆಟ್ ಖರೀದಿಯ ಮೇಲೆ 20 ಸಾವಿರ ರಿಯಾಯಿತಿ ನೀಡಲಾಗುವುದು. 2 ಕ್ಯಾರೆಟ್‌ಗಿಂತ ಅಧಿಕ ಖರೀದಿ ಮಾಡಿದಲ್ಲಿ 5 ಸಾವಿರ ರೂ. ಕ್ಯಾಶ್ ಬ್ಯಾಕ್ ಪಡೆಯಬಹುದಾಗಿದೆ. ಪ್ರತೀ ಡೈಮಂಡ್ ಖರೀದಿಯೊಂದಿಗೆ ಡಿಸ್ಕೌಂಟ್ ವೋಚರ್ ನೀಡಲಾಗುವುದು. ಪ್ರತೀ ಖರೀದಿಗೆ ಉಚಿತ ಉಡುಗೊರೆ ನೀಡಲಾಗುವುದು, ಸೆ.19ರಿಂದ ಸೆ.28ರವರೆಗೆ ರಿಯಾಯಿತಿ ಕೊಡುಗೆ ಇದೆ ಎಂದು ಪ್ರಕಟನೆ ತಿಳಿಸಿದೆ.‌‌

Ads on article

Advertise in articles 1

advertising articles 2

Advertise under the article