ಮುಂದಿನ ವರ್ಷವೂ ದಸರಾ ಪುಷ್ಪಾರ್ಚನೆ ನಾನೇ ಮಾಡುತ್ತೇನೆ: ಸಿಎಂ ಸಿದ್ದರಾಮಯ್ಯ

ಮುಂದಿನ ವರ್ಷವೂ ದಸರಾ ಪುಷ್ಪಾರ್ಚನೆ ನಾನೇ ಮಾಡುತ್ತೇನೆ: ಸಿಎಂ ಸಿದ್ದರಾಮಯ್ಯ

ಮೈಸೂರು: ಮುಂದಿನ ವರ್ಷವೂ ನಾನೇ ಯಾಕೆ ಪುಷ್ಪಾರ್ಚನೆ ಮಾಡಬಾರದು? ಹೋಪ್‌ ಸೋ ನಾನು ಮಾಡಬಹುದು. ಮುಖ್ಯಮಂತ್ರಿಯಾಗಿ ಇನ್ನೂ ಎರಡೂವರೆ ವರ್ಷ ಇರುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಪುನರಾಚ್ಚರಿಸಿದ್ದಾರೆ.

ನವೆಂಬರ್‌ನಲ್ಲಿ ಕ್ರಾಂತಿ ನಡೆಯಲಿದೆ ಎಂಬ ವಿಪಕ್ಷಗಳ ಮಾತಿಗೆ ಪ್ರತಿಕ್ರಿಯಿಸಿದ ಅವರು, ಎರಡನೇ ಬಾರಿ ಸಿಎಂ‌ ಆಗಲ್ಲ ಅಂದಿದ್ದರು. ನಾನು ಸಿಎಂ ಆಗಲಿಲ್ವಾ? ಬಹಳ ಜನ ಬಹಳಷ್ಟು ಹೇಳುತ್ತಾರೆ, ಹೇಳಲಿ. ನವೆಂಬರ್‌ನಲ್ಲಿ ಸರ್ಕಾರಕ್ಕೆ ಎರಡು ವರ್ಷ ತುಂಬುವ ಕಾರಣ ಆ ರೀತಿ ಮಾತನಾಡುತ್ತಾರೆ ಎಂದರು. 

ಹೈಕಮಾಂಡ್ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರಬೇಕು ಮತ್ತು ಅವರು ಹೇಳಿದಂತೆ ಕೇಳಬೇಕು. ಬಿಜೆಪಿಗೆ ವಸ್ತು ಸ್ಥಿತಿ ಗೊತ್ತಿಲ್ಲ. ಅವರು ಹೇಳಿದ ಏನು ನಡೆಯುವುದಿಲ್ಲ. ಬಿಜೆಪಿಯವರು ಬಿಜೆಪಿ ಹೇಳಿದ್ದೆಲ್ಲಾ ಸುಳ್ಳಾಗಿದೆ ಎಂದು ಹೇಳಿದರು.

Ads on article

Advertise in articles 1

advertising articles 2

Advertise under the article