ಕರ್ನಾಟಕ ರಾಜ್ಯೋತ್ಸವ; ಕನ್ನಡಿಗರ ಹೆಮ್ಮೆಯ ದಿನ…

ಕರ್ನಾಟಕ ರಾಜ್ಯೋತ್ಸವ; ಕನ್ನಡಿಗರ ಹೆಮ್ಮೆಯ ದಿನ…

ಪ್ರತಿ ವರ್ಷ ನವೆಂಬರ್ 1ರಂದು ನಾವು ಆಚರಿಸುವ ಕರ್ನಾಟಕ ರಾಜ್ಯೋತ್ಸವ ಅಥವಾ ಕನ್ನಡ ರಾಜ್ಯೋತ್ಸವ ನಮ್ಮ ರಾಜ್ಯದ ಏಕತೆಯ, ಸಂಸ್ಕೃತಿಯ ಮತ್ತು ಭಾಷೆಯ ಸ್ಮಾರಕ ದಿನವಾಗಿದೆ. ಈ ದಿನ ಅಂದರೆ 1956ರ ನವೆಂಬರ್ 1ರಂದು ಭಾಷಾ ಆಧಾರಿತ ಪುನರ್‌ರಚನೆಯ ಮೂಲಕ ಕನ್ನಡ ಭಾಷಾಭಿಮಾನಿಗಳೆಲ್ಲರೂ ಒಂದೇ ರಾಜ್ಯದ ಅಡಿಯಲ್ಲಿ ಒಗ್ಗೂಡಿದರು. 

ಮೈಸೂರು ರಾಜ್ಯವೆಂಬ ಹೆಸರಿನಿಂದ ಪ್ರಾರಂಭವಾದ ಈ ಹೊಸ ರಾಜ್ಯವನ್ನು 1973ರಲ್ಲಿ “ಕರ್ನಾಟಕ” ಎಂದು ಮರುನಾಮಕರಣ ಮಾಡಲಾಯಿತು. 

ರಾಜ್ಯೋತ್ಸವದ ಹುಟ್ಟು ಹಿಂದಿನ ದಶಕಗಳಲ್ಲಿ ಕನ್ನಡಿಗರ ತ್ಯಾಗ, ಹೋರಾಟ ಹಾಗೂ ಕನ್ನಡ ಸಂಸ್ಕೃತಿಯ ಉಳಿವಿಗಾಗಿ ನಡೆದ ಚಳವಳಿಗಳ ಫಲವಾಗಿದೆ. ಕನ್ನಡಿಗರ ನಿರಂತರ ಏಕೀಕರಣ ಚಳವಳಿ, ಕನ್ನಡನಾಡಿನ ವಿಭಜಿತ ಭಾಗಗಳನ್ನು ಒಂದಾಗಿಸುವತ್ತ ಕೊಂಡೊಯ್ದಿತು.

ಇಂದು ಕರ್ನಾಟಕ ರಾಜ್ಯೋತ್ಸವ ಕೇವಲ ರಾಜ್ಯ ಹಬ್ಬವಲ್ಲ, ಅದು ನಮ್ಮ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯ ಗೌರವದ ಪ್ರತೀಕವಾಗಿದೆ. 

ಈ ದಿನ ಸರ್ಕಾರದಿಂದ “ರಾಜ್ಯೋತ್ಸವ ಪ್ರಶಸ್ತಿ” ನೀಡಲಾಗುತ್ತಿದ್ದು, ಕನ್ನಡ ನಾಡಿಗೆ ಕೊಡುಗೆ ನೀಡಿದ ವ್ಯಕ್ತಿಗಳನ್ನುಗುರುತಿಸಿ  ಸನ್ಮಾನಿಸಲಾಗುತ್ತದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಧ್ವಜಾರೋಹಣ, ಸಾಂಸ್ಕೃತಿಕ ಕಾರ್ಯಕ್ರಮಗಳು, ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಗಳು ಹಾಗೂ ಕನ್ನಡದ ಗೌರವದ ಘೋಷಣೆಗಳು ಈ ದಿನವನ್ನು ಅಲಂಕರಿಸುತ್ತವೆ.

ನಾವು ಎಲ್ಲರೂ ಈ ದಿನದಲ್ಲಿ ಕನ್ನಡದ ಸೇವೆಗೆ ತೊಡಗಿಕೊಂಡು, ನಮ್ಮ ನಾಡಿಗೆ ಮತ್ತು ಭಾಷೆಗೆ ನಿಷ್ಠೆಯಿಂದ ನಡೆಯುವುದು ನಿಜವಾದ ರಾಜ್ಯೋತ್ಸವದ ಅರ್ಥವನ್ನು ಸಾರುತ್ತದೆ.

“ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು”…

✍🏽ಡಾ. & ಎಡ್ವ. ಪಿ.ಎ.ಹಮೀದ್ ಪಡುಬಿದ್ರಿ, ಸೌದಿ ಅರೇಬಿಯಾ

Ads on article

Advertise in articles 1

advertising articles 2

Advertise under the article