ಮಣಿಪಾಲ; ಡಾ.ಶೇಖ್ ವಾಹಿದ್ ದಾವೂದ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಸ್ನೇಹ ಸಮ್ಮಿಲನ ಕಾರ್ಯಕ್ರಮ; ಸೊರಕೆ, ಗಫೂರ್ ಸೇರಿದಂತೆ ಹಲವರು ಭಾಗಿ

ಮಣಿಪಾಲ: ಮಣಿಪಾಲದ ಜೈನಬ್ ವೆಲ್ಕಮ್ ಹಾಲ್‌ನಲ್ಲಿ ರವಿವಾರ ಡಾ. ಶೇಖ್ ವಹೀದ್ ದಾವೂದ್ ಫ್ಯಾಮಿಲಿ ಟ್ರಸ್ಟ್ (ರಿ.) ವತಿಯಿಂದ ಅಧ್ಯಕ್ಷ, ಸಮಾಜ ಸೇವಕ ಡಾ. ಶೇಖ್ ವಹೀದ್ ದಾವೂದ್ ರವರ ನೇತೃತ್ವದಲ್ಲಿ ಸ್ನೇಹ ಸಮ್ಮಿಲನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದಲ್ಲಿ ಮಾಜಿ ಸಚಿವರು ಹಾಗೂ ಮಾಜಿ ಸಂಸದರಾದ ವಿನಯ್ ಕುಮಾರ್ ಸೊರಕೆ, ಕರಾವಳಿ ಪ್ರಾಧಿಕಾರ ಮಂಡಳಿಯ ಅಧ್ಯಕ್ಷ ಎಂ. ಎ. ಗಫೂರ್, ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಶರ್ಪುದ್ದೀನ್ ಶೇಖ್‌ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿ, ಡಾ. ಶೇಖ್ ವಹೀದ್ ದಾವೂದ್ ಅವರ ಸಾಮಾಜಿಕ ಸೇವೆ, ಅವರು ನಡೆಸುತ್ತಿರುವ ಚಾರಿಟಿ ಕಾರ್ಯಕ್ರಮಗಳ ಬಗ್ಗೆ, ಅಶಕ್ತರ ಬಗ್ಗೆ ತೋರಿಸುತ್ತಿರುವ ಕಾಳಜಿ ಮತ್ತು ಮಾನವೀಯ ಕಾರ್ಯಗಳ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಎಂ.ಎ.ಗಫೂರ್, ನಿತ್ಯಾನಂದ ಒಳಕಾಡು, ಮೌಲಾನಾ ಅಬ್ದುಲ್ ಹಫೀಝ್, ಶಾಂತಾರಾಮ್ ಶೆಟ್ಟಿ, ಅನ್ವರ್ ಶೇಖ್, ಅಜ್ಮಲ್ ಅಸಾದ್ ಸೇರಿದಂತೆ ಹಲವು ಸಾಧಕರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಡಾ.ಶೇಖ್ ವಹೀದ್ ದಾವೂದ್ ಅವರನ್ನು ಅವರ ಅಭಿಮಾನಿ ಬಳಗದ ವತಿಯಿಂದ ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ವಿವಿಧ ಮಸೀದಿಗಳ ಮೌಲಾನಾಗಳು, ಡಾ.ಫೈಸಲ್, ಸಂಪತ್ ರಾವ್ ಸೇರಿದಂತೆ ಅನೇಕ ಗಣ್ಯರು, ಸಮಾಜಮುಖಿ ಮುಖಂಡರು ಉಪಸ್ಥಿತರಿದ್ದರು.