ಸ್ವಾತಂತ್ರ್ಯ ಹೋರಾಟಗಾರ, ಮಾಜಿ ಸಚಿವ ಭೀಮಣ್ಣ ಖಂಡ್ರೆಗೆ 'ಕರ್ನಾಟಕ ರತ್ನ' ಪ್ರಶಸ್ತಿ ಸಲ್ಲಬೇಕು; ಭೀಮಣ್ಣ ಖಂಡ್ರೆ ನಿಧನಕ್ಕೆ ಎ.ಕೆ.ಅನ್ಸಾಫ್ ಸಂತಾಪ

ಸ್ವಾತಂತ್ರ್ಯ ಹೋರಾಟಗಾರ, ಮಾಜಿ ಸಚಿವ ಭೀಮಣ್ಣ ಖಂಡ್ರೆಗೆ 'ಕರ್ನಾಟಕ ರತ್ನ' ಪ್ರಶಸ್ತಿ ಸಲ್ಲಬೇಕು; ಭೀಮಣ್ಣ ಖಂಡ್ರೆ ನಿಧನಕ್ಕೆ ಎ.ಕೆ.ಅನ್ಸಾಫ್ ಸಂತಾಪ

ಸ್ವಾತಂತ್ರ್ಯ ಹೋರಾಟಗಾರ,  ಬಸವಾದಿ ಶರಣರ ಹಾದಿಯಲಿ ಸಾರ್ಥಕ ಜೀವನ ಸವೆಸಿದ ಘನ ವ್ಯಕ್ಯಿತ್ವದ ಶತಾಯುಷಿ ಭೀಮಣ್ಣ ಖಂಡ್ರೆ ಅವರ ನಿಧನ ಖಂಡ್ರೆ ಪರಿವಾರದ ಅಭಿಮಾನಿಯಾಗಿ ನನಗೆ ವೈಯುಕ್ತಿಕ ಭಾರಿ ನೋವನ್ನು ತಂದಿದೆ. ಭಾರತಾಂಬೆ ತನ್ನ ಸುಪುತ್ರನನ್ನು ಕಳೆದುಕೊಂಡಿದ್ದಾಳೆ , ಇದು ದೇಶಕ್ಕೆ ಅದರಲ್ಲೂ ನಮ್ಮ ಕನ್ನಡ ನಾಡಿಗೆ ಎಂದೆಂದಿಗೂ ತುಂಬಲು ಸಾಧ್ಯವಿಲ್ಲದ ನಷ್ಟವಾಗಿದೆ ಎಂದು ಖಂಡ್ರೆ ಪರಿವಾರದ ಆಪ್ತರೂ, ಕೆಪಿಸಿಸಿ ಸಂಯೋಜಕರೂ ಹಾಗೂ ಕಡಲ ತೀರಾ ವಲಯ ನಿರ್ವಹಣಾ ಸಮಿತಿ ಸದಸ್ಯ ಎ ಕೆ ಅನ್ಸಾಫ್ ಸಂತಾಪ ಸೂಚಿಸಿದ್ದಾರೆ.

ವಾತಾವರಣ ಎಷ್ಟೇ ಕಲುಷಿತ ಆಗಿರಲಿ ಸತ್ಯದ ಪಥದಲ್ಲಿ ಇದ್ದರೇ ನಾವು ಆಯ್ಕೆ ಮಾಡಿದ ಕ್ಷೇತ್ರದಲ್ಲಿ ಜಯಿಸಬಹುದು ಎಂಬುವುದಕ್ಕೆ ಖಂಡ್ರೆ ಪರಿವಾರದ ಹಿರಿಯ ನಾಯಕರೇ ನಮಗೇ ಮಾರ್ಗದರ್ಶಿ ಆಗಿದ್ದಾರೆ. ಕಲುಷಿತ ರಾಜಕೀಯ ವಾತವಾರಣದಲ್ಲೂ ಭೀಮಣ್ಣ  ಖಂಡ್ರೆ ಅವರು ತನ್ನ ನೇರ ನಡೆನುಡಿಯಿಂದ ವಿಶೇಷ ಪರಿಣಾಮ ಬೀರಿದ್ದರು. ಭೀಮಣ್ಣ ಖಂಡ್ರೆ ಅವರದ್ದು ಶಿಸ್ತು ಬದ್ದವಾದ ಮೇರು ವ್ಯಕ್ತಿತ್ವ, ಇತ್ತೀಚೆಗೆ ಬಿಡುಗಡೆಗೊಂಡ ಲೋಕನಾಯಕ ಗ್ರಂಥವನ್ನು ಅವರ ಸುಪುತ್ರರು, ನನ್ನ ಮಾರ್ಗದರ್ಶಕರೂ ಆದ ಸಚಿವ ಈಶ್ವರ್ ಖಂಡ್ರೆ ಅವರಿಂದ ಪಡೆದು ನಾನು ತನ್ನ ತಾಯ್ನಾಡು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೇವಾರಂಗದ ಪ್ರಮುಖರಿಗೆ, ವೈದ್ಯರಿಗೆ, ಅಧಿಕಾರಿಗಳಿಗೆ ಹಂಚಿದ್ದೇನೆ. ಸ್ವಾತಂತ್ರ್ಯ ಹೋರಾಟಗಾರನ ಬಗೆಗಿನ ಪುಸ್ತಕ ಅದೂ ಸಹ ಅವರ ಜೀವಿತ ಕಾಲದಲ್ಲೇ ಹಂಚಲು ಅವಕಾಶ ಆಗಿದ್ದು ನನಗೆ ದೊರಕಿದ ಸೌಭಾಗ್ಯ ಎಂದವರು ಹೇಳಿದ್ದಾರೆ.

ಭೀಮಣ್ಣ ಖಂಡ್ರೆಗೆ ಕರ್ನಾಟಕ ರತ್ನ ಸಿಗಲಿ...

ಬ್ರಿಟೀಷರ ವಿರುದ್ದ ರಣಕಹಳೆ ಊದಿದ್ದ ಭೀಮಣ್ಣರು ತದನಂತರ ನಿಜಾಮರ ಹೆಡೆಮೂರಿ ಕಟ್ಟಿ ಬೀದರಲ್ಲಿ ಕನ್ನಡದ ಕಂಪನ್ನು ಬೀರಿದ್ದರು. ಸರ್ವ ಮತಗಳ ಜನರಿಗೆ ಆಸರೆಯಾಗಿದ್ದ ಭೀಮಣ್ಣರು ಅನುಭವ ಮಂಟಪ ನಿರ್ಮಾಣ , ರೈತರ ಪರ ಆಂದೋಲಗಳನ್ನು ಮಾಡಿ ದೇಶದ ಪ್ರಮುಖರಿಂದ ಶಹಬ್ಬಾಸ್ ಗಿರಿ ಪಡೆದಂತವರು. ಶರಣರ ನಾಡಿನಲ್ಲಿ ಶಿಕ್ಷಣ ಕಂಪನ್ನು , ಅಭಿವೃದ್ದಿಯ ಅಲೆಯನ್ನು ಸೃಷ್ಠಿಸಿರುವ ಹಿರಿಯ ಚೇತನಕ್ಕೆ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು ಎಂದು ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡುತ್ತಿದ್ದೇನೆ ಎಂದಿದ್ದಾರೆ.

ತನ್ನ ನೂರಾರು ವರ್ಷಗಳ ಕಾಲದ ಸಾರ್ಥಕ ಬದುಕನ್ನು ಹೇಗೆ ಸವೆಸಿದ್ದಾರೆ ಎಂಬುವುದಕ್ಕೆ ಭೀಮಣ್ಣರು ಅನಾರೋಗ್ಯಕ್ಕೆ ಈಡಾಗಿದ್ದಾರೇ ಎಂಬ ಸುದ್ದಿ ಹರಿದಾಡಿದ ನಂತರ ಅವರನ್ನು ಕಾಣಲು ಬಂದ ಜನಸಾಗರದಲ್ಲೇ ಉತ್ತರವಿತ್ತು. ಅವರ ಅಗಲುವಿಕೆ ನಾಡಿಗೆ, ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಎ ಕೆ ಅನ್ಸಾಫ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

Ads on article

Advertise in articles 1

advertising articles 2

Advertise under the article