ಮಣಿಪಾಲ: ಬೈಕ್ ಕಳವು ಪ್ರಕರಣದಲ್ಲಿ ಇಬ್ಬರು ಆರೋಪಿಗಳ ಬಂಧನ

ಮಣಿಪಾಲ: ಬೈಕ್ ಕಳವು ಪ್ರಕರಣದಲ್ಲಿ ಇಬ್ಬರು ಆರೋಪಿಗಳ ಬಂಧನ

ಮಣಿಪಾಲ, ಜ.15: ಮಣಿಪಾಲ ಕಾಯಿನ್ ಸರ್ಕಲ್ ಬಳಿ ನಿಲ್ಲಿಸಿದ್ದ ಸ್ಕೂಟರ್ ಕಳವು ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಿವಾಸಿ ಕಿರಣ್ ಬಿ.ಎನ್.(32) ಹಾಗೂ ಶಿವಮೊಗ್ಗ ದುರನಮಲ್ಲಿ ನಿವಾಸಿ ಯೋಗೇಶ ನಾಯ್ಕ ಎನ್. (22) ಬಂಧಿತ ಆರೋಪಿಗಳು.

2025ರ ಆ.30ರಂದು ನಿಲ್ಲಿಸಿದ್ದ ಹೆರ್ಗಾ ಗ್ರಾಮದ ಪ್ರದೀಪ್ ಸಾಲ್ಯಾನ್ ಎಂಬವರ 30,000 ರೂ. ಮೌಲ್ಯದ ಸ್ಕೂಟರ್‌ನ್ನು ಕಳ್ಳರು ಕಳವು ಮಾಡಿದ್ದರು. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತು ಡಿವೈಎಸ್ಪಿ ಪ್ರಭು ಡಿ.ಟಿ. ಮಾರ್ಗದರ್ಶನದಲ್ಲಿ ಮಣಿಪಾಲ ಪೊಲೀಸ್ ಠಾಣಾ ನಿರೀಕ್ಷಕ ಮಹೇಶ ಪ್ರಸಾದ ನೇತೃತ್ವದಲ್ಲಿ ಪೊಲೀಸ್ ಉಪನಿರೀಕ್ಷಕರಾದ ಅನಿಲ್ ಬಿ.ಎಂ., ಅಕ್ಷಯ ಕುಮಾರಿ ಎಸ್.ಎನ್., ಸಿಬ್ಬಂದಿಗಳಾದ ವಿಶ್ವಜಿತ್, ಚೇತನ್, ಅಜ್ಮಲ್, ರವಿರಾಜ್, ಮಂಜುನಾಥ ಅವರನ್ನು ಒಳಗೊಂಡ ತಂಡವು ಜ.7ರಂದು ಆರೋಪಿ ಗಳನ್ನು ಬಂಧಿಸಿ, ಸ್ಕೂಟರ್ ವಶಪಡಿಸಿಕೊಂಡಿದೆ. ಆರೋಪಿ ಕಿರಣ್ ಬಿ.ಎನ್. ವಿರುದ್ದ ಈ ಹಿಂದೆಯೂ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Ads on article

Advertise in articles 1

advertising articles 2

Advertise under the article