ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಅಧಿಕಾರ ಹಿಡಿಯಲು ಬಯಸುತ್ತಿರುವ ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಪ್ರತಿ ತಿಂಗಳು ಮಹಿಳೆಯರಿಗೆ 3 ಸಾವಿರ ರೂ., ನಿರುದ್ಯೋಗಿ ಯುವಕರಿಗೆ ತಿಂಗಳಿಗೆ 3 ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಗುವುದು ಘೋಷಿಸಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಬಿಜೆಪಿಯ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ 15 ಭರವಸೆಗಳನ್ನು ಪ್ರಕಟಿಸಿದರು.
ಮಹಿಳೆಯರು ಮತ್ತು ಯುವಕರಿಗಾಗಿ ಕಲ್ಯಾಣ ಯೋಜನೆಗಳು, ಮಹಿಳೆಯರಿಗೆ ಆರ್ಥಿಕ ನೆರವು: ರಾಜ್ಯದ ಪ್ರತಿಯೊಬ್ಬ ಮಹಿಳೆಗೆ ಪ್ರತಿ ತಿಂಗಳು 3,000 ಸಹಾಯಧನ, ನಿರುದ್ಯೋಗಿಗಳಿಗೆ ಭತ್ಯೆ: ನಿರುದ್ಯೋಗಿ ಯುವಕರಿಗೆ ತಿಂಗಳಿಗೆ 3,000 ಪ್ರೋತ್ಸಾಹ ಧನ, ಮಹಿಳಾ ಮೀಸಲಾತಿ: ರಾಜ್ಯ ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿ,ಆರೋಗ್ಯ ಸೇವೆ: ಆಯುಷ್ಮಾನ್ ಭಾರತ್ ಯೋಜನೆಯ ವಿಸ್ತರಣೆ ಮತ್ತು ಮಹಿಳೆಯರಿಗೆ ಉಚಿತ ಕ್ಯಾನ್ಸರ್ ತಪಾಸಣೆ ಹಾಗೂ HPV ಲಸಿಕೆ
ಸರ್ಕಾರಿ ನೌಕರರು ಮತ್ತು ಉದ್ಯೋಗಕ್ಕೆ ಸಂಬಂಧಿಸಿದಂತೆ 7ನೇ ವೇತನ ಆಯೋಗ: ಬಿಜೆಪಿ ಸರ್ಕಾರ ಬಂದ 45 ದಿನಗಳೊಳಗೆ ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸುಗಳ ಜಾರಿ.
ಉದ್ಯೋಗ ಸೃಷ್ಟಿ: ಮುಂದಿನ ಐದು ವರ್ಷಗಳಲ್ಲಿ 1 ಕೋಟಿ ಹೊಸ ಉದ್ಯೋಗ ಮತ್ತು ಸ್ವಯಂ ಉದ್ಯೋಗಾವಕಾಶಗಳ ಸೃಷ್ಟಿ.
ಆಡಳಿತ ಮತ್ತು ಕಾನೂನು ಸುಧಾರಣೆಗಳು
ಏಕರೂಪ ನಾಗರಿಕ ಸಂಹಿತೆ : ಅಧಿಕಾರಕ್ಕೆ ಬಂದ 6 ತಿಂಗಳೊಳಗೆ ರಾಜ್ಯದಲ್ಲಿ ಏಕರೂಪ ನಾಗರಿಕ ನೀತಿಸಂಹಿತೆ (UCC) ಜಾರಿ.
ನುಸುಳುವಿಕೆಗೆ ತಡೆ: ಅಕ್ರಮ ನುಸುಳುವಿಕೆಯನ್ನು ಪತ್ತೆಹಚ್ಚಿ, ಡಿಲೀಟ್ ಮಾಡಿ, ಗಡಿಪಾರು ಮಾಡುವ ಕಠಿಣ ನೀತಿ.
ಸಿಂಡಿಕೇಟ್ ಮುಕ್ತ ಬಂಗಾಳ: ರಾಜ್ಯದಲ್ಲಿರುವ ‘ಸಿಂಡಿಕೇಟ್’ ಮತ್ತು ‘ಕಟ್ ಮನಿ’ ಸಂಸ್ಕೃತಿಯನ್ನು ಸಂಪೂರ್ಣವಾಗಿ ತೊಡೆದುಹಾಕುವುದು.
ಭ್ರಷ್ಟಾಚಾರದ ವಿರುದ್ಧ ತನಿಖೆ: ಕಳೆದ 15 ವರ್ಷಗಳ ಭ್ರಷ್ಟಾಚಾರ ಮತ್ತು ಅಪರಾಧ ಪ್ರಕರಣಗಳ ಮರುತನಿಖೆ ಹಾಗೂ ತಪ್ಪಿತಸ್ಥರಿಗೆ ಜೈಲು ಶಿಕ್ಷೆ.
ಶ್ವೇತಪತ್ರ ಬಿಡುಗಡೆ: ಟಿಎಂಸಿ ಆಡಳಿತದ ಅವಧಿಯಲ್ಲಿ ನಡೆದ ಭ್ರಷ್ಟಾಚಾರ ಮತ್ತು ಕಾನೂನು ಸುವ್ಯವಸ್ಥೆ ಹದಗೆಟ್ಟ ಬಗ್ಗೆ ಶ್ವೇತಪತ್ರ ಪ್ರಕಟಣೆ.
ಭಾಷೆಗಳ ಸೇರ್ಪಡೆ: ಭಾರತೀಯ ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಕುರ್ಮಾಲಿ ಮತ್ತು ರಾಜ್‌ಬೋಂಗ್‌ಶಿ ಭಾಷೆಗಳ ಸೇರ್ಪಡೆ
ಶಿಕ್ಷಣ, ಕೈಗಾರಿಕೆ ಮತ್ತು ಕೃಷಿ
ಉನ್ನತ ಶಿಕ್ಷಣ ಸಂಸ್ಥೆಗಳು: ಉತ್ತರ ಬಂಗಾಳದಲ್ಲಿ ಹೊಸ AIIMS, IIT ಮತ್ತು IIM ಸ್ಥಾಪನೆ.
ಕೈಗಾರಿಕಾ ಅಭಿವೃದ್ಧಿ: ಸಿಂಗೂರಿನಲ್ಲಿ ಬೃಹತ್ ಕೈಗಾರಿಕಾ ಪಾರ್ಕ್ ನಿರ್ಮಾಣ.
ಸಾಂಸ್ಕೃತಿಕ ಪುನರುತ್ಥಾನ: ಪ್ರಾದೇಶಿಕ ಭಾಷೆಗಳಿಗೆ ಮಾನ್ಯತೆ ಮತ್ತು ವಂದೇ ಮಾತರಂ ಮ್ಯೂಸಿಯಂ ಸ್ಥಾಪನೆ.
ಕೃಷಿ ಮತ್ತು ಮೀನುಗಾರಿಕೆ: ಆಲೂಗಡ್ಡೆ, ಭತ್ತ ಮತ್ತು ಮಾವು ಬೆಳೆಗಾರರಿಗೆ ಬೆಂಬಲ ಹಾಗೂ ಬಂಗಾಳವನ್ನು ಮೀನು ರಫ್ತು ಹಬ್ ಆಗಿ ಪರಿವರ್ತಿಸಲು ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ಜಾರಿ.
