ನವನಗರ - ಕೊಯಿಲ ರಸ್ತೆ ಸೇರಿ ಒಟ್ಟು ಮೂರು ರಸ್ತೆ ಅಭಿವೃದ್ದಿಗೆ 6 ಕೋಟಿ ಮಂಜೂರು: ಪುತ್ತೂರು ಶಾಸಕ ಅಶೋಕ್ ರೈ

ಪುತ್ತೂರು - ಉಪ್ಪಿನಂಗಡಿ ರಸ್ತೆಯ ಕೇಪುಳಿನಿಂದ ಪಡೀಲ್ ತನಕ ರಸ್ತೆ ಡಾಂಬರೀಕರಣಕ್ಕೆ 1 ಕೋಟಿ ಅನುದಾನ , ಪಾಣಾಜೆ ಸಂಪರ್ಕ ಕಲ್ಪಿಸುವ ಚೆಲ್ಯಡ್ಕದಿಂದ ಬೆಟ್ಟಂಪಾಡಿ ತನಕದ ರಸ್ತೆಯ ಮರು ಡಾಂಬರೀಕರಣಕ್ಕೆ 3 ಕೋಟಿ ಅನುದಾನ ಹಾಗೂ ಸುಬ್ರಮಣ್ಯ ಕ್ರಾಸ್ ನವನಗರದಿಂದ ಕೊಯಿಲ ತನಕ ರಸ್ತೆ ಅಭಿವೃದ್ದಿಗೆ 2 ಕೋಟಿ ಅನುದಾನ ಮಂಜೂರು ಮಾಡಲಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ತಿಳಿಸಿದ್ದಾರೆ.