ಕಾಪು: ಮೂಳೂರು ಜುಮ್ಮಾ ಮಸೀದಿ ಇದರ ಅಧೀನದ ರೌಲತುಲ್ ಉಲೂಮ್ ಮದರಸ, ಕೊಪ್ಪಲಂಗಡಿ ಪಡು ಇದರ ಹೊಸ ಸಮಿತಿಯನ್ನು ಮಂಗಳವಾರ ಮಸೀದಿ ಸಮಿತಿಯ ಮಾಸಿಕ ಸಭೆಯಲ್ಲಿ ರಚಿಸಲಾಯಿತು.
ಮಸೀದಿ ಅಧ್ಯಕ್ಷರಾದ ಮುರಾದ್ ಅಲಿ ಅವರ ಸಭಾಧ್ಯಕ್ಷತೆಯಲ್ಲಿ ನಡೆದ ಸಭೆಗೆ ಕೊಪ್ಪಲಂಗಡಿ ಪಡು ಭಾಗದ ಜಮಾತ್ ಸದಸ್ಯರಿಗೆ ವಿಶೇಷ ಆಮಂತ್ರಣ ನೀಡಲಾಗಿತ್ತು.
ವೇದಿಕೆಯಲ್ಲಿ ಉಪಾಧ್ಯಕ್ಷರಾದ ವೈಬಿಸಿ ಬಶೀರ್ ಅಲಿ, ಪ್ರಧಾನ ಕಾರ್ಯದರ್ಶಿ ಎಸ್.ಆರ್. ರಫೀಕ್, ಕಾರ್ಯದರ್ಶಿ ಹನೀಫ್ ಹಸ್ಸನ್, ಕೋಶಾಧಿಕಾರಿ ಅಬ್ದುಲ್ ಹಮೀದ್ ಯೂಸುಫ್ ಉಪಸ್ಥಿತರಿದ್ದರು.
ಖತೀಬ್ ಅಶ್ರಫ್ ಸಖಾಫಿ ಕಕ್ಕಿಂಜೆ ಅವರ ದುಆ ದೊಂದಿಗೆ ಪ್ರಾರಂಭವಾದ ಸಭೆಯನ್ನು ಉಪಾಧ್ಯಕ್ಷರು ಸ್ವಾಗತಿಸಿ, ವಿಷಯ ಮಂಡಿಸಿದರು.
ಸಭೆಯಲ್ಲಿ ಸರ್ವಾನುಮತದಿಂದ ಹೊಸ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರು: ಶರೀಫ್ ಬಾವ ಕೊಪ್ಪಲಂಗಡಿ
ಪ್ರಧಾನ ಕಾರ್ಯದರ್ಶಿ: ಅಬ್ದುಲ್ ಹಮೀದ್ ಯೂಸುಫ್
ಕೋಶಾಧಿಕಾರಿ: ಇಕ್ಬಾಲ್ ಕೊಪ್ಪಲಂಗಡಿ
ಸದಸ್ಯರು:
ವೈಬಿಸಿ ಅಹ್ಮದ್ ಬಾವ
ಅಬ್ದುಲ್ಲಾ ಅಹ್ಮದ್
ಎಂ.ಎಸ್. ಅಬ್ದುಲ್ ರಹಿಮಾನ್
ಅಶ್ರಫ್ ಫುರ್ಖಾನಿ ಉಚ್ಚಿಲ
ಹಾಜಿ ಅಬ್ಬು ಮುಹಮ್ಮದ್
ಕೊನೆಯಲ್ಲಿ ಕಾರ್ಯದರ್ಶಿ ಅಬ್ದುಲ್ ಹಮೀದ್ ಯೂಸುಫ್ ಧನ್ಯವಾದವಿತ್ತರು.



