ಕಟಪಾಡಿ- ಶಿರ್ವ ಮುಖ್ಯರಸ್ತೆಯ ಪಂಜಿಮಾರು ಪಾಲಮೆ ಬಳಿ ಕಾರು-ಟೆಂಪೋ ಡಿ#ಕ್ಕಿ: ಮಹಿಳೆ ಸೇರಿದಂತೆ ಇಬ್ಬರ ಸಾ#ವು

ಕಟಪಾಡಿ- ಶಿರ್ವ ಮುಖ್ಯರಸ್ತೆಯ ಪಂಜಿಮಾರು ಪಾಲಮೆ ಬಳಿ ಕಾರು-ಟೆಂಪೋ ಡಿ#ಕ್ಕಿ: ಮಹಿಳೆ ಸೇರಿದಂತೆ ಇಬ್ಬರ ಸಾ#ವು

ಶಿರ್ವ(Headlines Kannada): ಇಲ್ಲಿನ ಕಟಪಾಡಿ- ಶಿರ್ವ ಮುಖ್ಯರಸ್ತೆಯ ಪಂಜಿಮಾರು ಪಾಲಮೆ ಬಳಿ ಕಾರು ಹಾಗು ಟೆಂಪೋ ಮಧ್ಯೆ ನಡೆದ ಅ#ಪಘಾತದಲ್ಲಿ ಕಾರಿನಲ್ಲಿದ್ದ ಮಹಿಳೆಯೋರ್ವಳು ಸ್ಥಳದಲ್ಲೇ ಸಾ#ವನ್ನಪ್ಪಿದ್ದು, ಯುವಕ ಗಂ#ಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗಮಧ್ಯೆ ಕೊ#ನೆಯುಸಿರೆಳೆದಿರುವ ಘಟನೆ ಶನಿವಾರ ಸಂಜೆ ನಡೆದಿದೆ.

ಅ#ಪಘಾತಕ್ಕೀಡಾಗಿದ್ದು ಬೆಂಗಳೂರು ಮೂಲದ ಕಾರು ಎಂದು ತಿಳಿದು ಬಂದಿದ್ದು, ಮೃ#ತರು ಬೆಂಗಳೂರಿನ ಉತ್ತರಹಳ್ಳಿಯ  ಪವನ್ ಬಿ.ಎಸ್ (27) ಹಾಗು ಸಪ್ನಾ ಶಶಿಧರ್ (42) ಎಂದು ಗುರುತಿಸಲಾಗಿದೆ.

ಮೂಡಬಿದಿರೆಯಿಂದ ಉಡುಪಿ ಕಡೆಗೆ ಬರುತ್ತಿದ್ದ ಕಾರಿಗೆ ಕಟಪಾಡಿಯಿಂದ ಶಿರ್ವ ಕಡೆಗೆ ತೆರಳುತ್ತಿದ್ದ ಟೆಂಪೋ ಡಿ#ಕ್ಕಿ ಹೊಡೆದ ಕಾರಣ ಈ ಅಪಘಾತ ಸಂಭವಿಸಿದೆ. 

Ads on article

Advertise in articles 1

advertising articles 2

Advertise under the article