ರಾಜ್ಯದಲ್ಲಿ ಕೋವಿಡ್ ಭೀ#ತಿ; ಮುಖ್ಯಮಂತ್ರಿಯಿಂದ ಇಂದು ತುರ್ತು ಸಭೆ; ಕಠಿಣ ಕ್ರಮದ ಸಾಧ್ಯತೆ

ರಾಜ್ಯದಲ್ಲಿ ಕೋವಿಡ್ ಭೀ#ತಿ; ಮುಖ್ಯಮಂತ್ರಿಯಿಂದ ಇಂದು ತುರ್ತು ಸಭೆ; ಕಠಿಣ ಕ್ರಮದ ಸಾಧ್ಯತೆ

  


ಬೆಂಗಳೂರು(Headlines Kannada): ಚೀನಾ ಸೇರಿದಂತೆ ವಿದೇಶಗಳಲ್ಲಿ ಕೊರೋನಾ ಸೋಂಕು ಉ#ಲ್ಬಣಗೊಂಡಿದ್ದು, ಈ ಬೆಳವಣಿಗೆ ರಾಜ್ಯದಲ್ಲೂ ಆ#ತಂಕವನ್ನು ಮೂಡಿಸಿದೆ.  ಈ ಭೀ#ತಿಯ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉನ್ನತ ಮಟ್ಟದ ಸಭೆ ಕರೆದಿದ್ದಾರೆ.

ಈ ಸಭೆಯ ಕುರಿತು ಮಾಹಿತಿ ನೀಡಿರುವ ಸಚಿವ ಡಾ.ಕೆ.ಸುಧಾಕರ್, ಇಂದು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ತುರ್ತು ಸಭೆ ಕರೆಯಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೂಡ ಎಲ್ಲಾ ರಾಜ್ಯಗಳ ಆರೋಗ್ಯಾಧಿಕಾರಿಗಳು ಹಾಗು ತಾಂತ್ರಿಕ ಸಮತಿ ಸದಸ್ಯರೊಂದಿಗೆ ಸಭೆ ಕರೆದಿದ್ದಾರೆ. ಅವರು ನೀಡುವ ಸಲಹೆ -ಸೂಚನೆ- ನಿರ್ದೇಶನಗಳ ಆಧಾರದ ಮೇಲೆ ನಮ್ಮ ಸರ್ಕಾರ ಎಲ್ಲಾ ಶಿಫಾರಸು ಹಾಗೂ ಮಾರ್ಗಸೂಚಿನಗಳನ್ನು ಅನುಸರಿಸುತ್ತದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಮ#ಹಾಮಾರಿ ಕೋವಿಡ್ ಸೋಂಕನ್ನು ಯಾವ ರೀತಿ ನಿಯಂತ್ರಣ ಮಾಡಬೇಕು. ರಾಜ್ಯದಲ್ಲಿ ಯಾವ ರೀತಿಯ ಟೆಸ್ಟ್ ಗಳನ್ನು ಹೆಚ್ಚಳ ಮಾಡಬೇಕು ಎನ್ನುವ ಕುರಿತು ಚರ್ಚಿಸಲು ಇಂದು ಸುವರ್ಣ ವಿಧಾನಸೌಧದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳ ಸಭೆ ಕರೆಯಲಾಗಿದೆ. ಸಭೆಯಲ್ಲಿ ರಾಜ್ಯದಲ್ಲಿ ಕೋವಿಡ್ ಸೋಂಕು ಹ#ರಡುವಿಕೆಯನ್ನು  ಜನ ತಡೆಗಟ್ಟುವ ಕ್ರಮಗಳ ಕುರಿತು ವಿಸ್ತೃತವಾಗಿ ಚರ್ಚೆ ನಡೆಸಲಾಗುತ್ತದೆ ಎಂದು ತಿಳಿಸಿದರು.

Ads on article

Advertise in articles 1

advertising articles 2

Advertise under the article