ಗಲ್ಫ್ ಗೆಳೆಯರು-ಗೆಳತಿಯರಿಂದ ದುಬೈನ ಮುಶ್ರಿಫ್ ಪಾರ್ಕ್‌ನಲ್ಲಿ ನಡೆಯಿತು ಯಶಸ್ವಿ ಕೌಟುಂಬಿಕ ಕಾರ್ಯಕ್ರಮ
ದುಬೈ (Headlines Kannada): ಗಲ್ಫ್ ಗೆಳೆಯರು ಮತ್ತು ಗಲ್ಫ್ ಗೆಳತಿಯರು ರವಿವಾರ ತಮ್ಮ ಮೊದಲ ಕೌಟುಂಬಿಕ ಕಾರ್ಯಕ್ರಮವನ್ನು ದುಬೈ ನ ಮುಶ್ರಿಫ್ ಪಾರ್ಕ್‌ನಲ್ಲಿ ಯಶಸ್ವಿಯಾಗಿ ಹಮ್ಮಿಕೊಂಡಿದ್ದರು.
ಇತ್ತೀಚೆಗೆ ಬಿಡುಗಡೆಯಾದ ಕನ್ನಡ ಚಲನಚಿತ್ರ ಸಿರಿ ಲಂಬೋದರ ವಿವಾಹ (SLV) ಚಲನಚಿತ್ರ ತಂಡ ಉಪಸ್ಥಿತಿಯೊಂದಿಗೆ ಒಂದು ಉತ್ತಮ ಕಾರ್ಯಕ್ರಮವನ್ನೂ ಆಯೋಜನೆ ಮಾಡಲಾಗಿತ್ತು. ಇದರಲ್ಲಿ SLV ಚಿತ್ರದ ನಿರ್ದೇಶಕರು ಸೌರಭ್ ಹಾಗು ನಾಯಕ ನಟ ಅಂಜನ್ ಮತ್ತು ನಾಯಕಿ ದಿಶಾ ರಮೇಶ್ ರವರು ಕಾರ್ಯಕ್ರಮವನ್ನು ನೋಡಿ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡರು.
ಈ ಕಾರ್ಯಕ್ರಮದಲ್ಲಿ ಮಕ್ಕಳಿಗಾಗಿ ಮನರಂಜನೆ ಆಟಗಳಿದ್ದವು. ಎಲ್ಲಾ ಸದಸ್ಯರು ತಮ್ಮ ಮನೆಯಿಂದ ರುಚಿಕರವಾದ ಆಹಾರ ತಂದು ಎಲ್ಲರ ಮನ ಸೆಳೆದರು. ಎಲ್ಲಾ ನಮ್ಮ ಗಲ್ಫ್ ಕನ್ನಡಿಗರು ಒಟ್ಟಿಗೆ ಸೇರಿ ಒಂದೇ ಕುಟುಂಬದಂತೆ ಮನರಂಜನೆ ಆಟಗಳಲ್ಲಿ ಭಾಗವಹಿಸಿ ಸಂತೋಷ ವ್ಯಕ್ತಪಡಿಸಿದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳು ಮತ್ತು ಈ ಕಾರ್ಯಕ್ರಮ ಯಶಸ್ವಿಯಾಗಿ ನೆಡೆಸಲು ಕಾರಣರಾದ ಎಲ್ಲಾ ಸದಸ್ಯರಿಗೆ ಅಭಿನಂದನೆಗಳು.