
ಗುಜರಾತಿನಲ್ಲಿ ಮತ್ತೆ ಗೆಲುವಿನತ್ತ BJP; ಹಿಮಾಚಲ ಪ್ರದೇಶದಲ್ಲಿ 'ಕೈ'ಗೆ ಮುನ್ನಡೆ: ಮಂಕಾದ AAP
ಗಾಂಧಿನಗರ/ಶಿಮ್ಲಾ(Headlines Kannada): ಗುಜರಾತ್ ಹಾಗು ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, ಗುಜರಾತಿನಲ್ಲಿ ಬಿಜೆಪಿ ಮತ್ತೆ ಅಧಿಕಾರದತ್ತ ಮುನ್ನುಗ್ಗುತ್ತಿದ್ದರೆ, ಹಿಮಾಚಲ ಪ್ರದೇಶದಲ್ಲಿ ಜನ ಕಾಂಗ್ರೆಸ್ಸಿನ ಕೈಹಿಡಿಯುವ ತವಕದಲ್ಲಿದ್ದಾರೆ.
ಗುಜರಾತಿನಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (BJP) ಪರ ಇದ್ದು, ಕಾಂಗ್ರೆಸ್ ನಿಂದ ಭಾರೀ ಮುನ್ನಡೆ ಕಾಯ್ದುಕೊಂಡಿದೆ. 1995 ರಿಂದ ರಾಜ್ಯದಲ್ಲಿ ಯಾವುದೇ ಚುನಾವಣೆಯಲ್ಲಿ ಬಿಜೆಪಿ ಸೋಲನ್ನು ಕಂಡಿಲ್ಲ. ಈಗ ಮತ್ತೆ ಗೆಲುವಿನತ್ತ ದಾಪುಗಾಲು ಇಡುತ್ತಿದೆ.
ಇತ್ತೀಚಿನ ಅಂಕಿಅಂಶಗಳ ಪ್ರಕಾರ ಗುಜರಾತ್‌ನ ಒಟ್ಟು 182 ಸ್ಥಾನಗಳ ಪೈಕಿ ಬಿಜೆಪಿ 154 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್ 18 ಮತ್ತು ಎಎಪಿ 6 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ಹಿಮಾಚಲ ಪ್ರದೇಶದಲ್ಲಿ ಒಟ್ಟು 68 ಸ್ಥಾನಗಳ ಪೈಕಿ ಬಿಜೆಪಿ 27 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್ 38 ಮತ್ತು ಎಎಪಿ 0, ಇತರರು 3 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.