
ಈ ವರ್ಷ ಕೇಂದ್ರ BJP ಸರಕಾರವು ದಾಖಲೆಯ 16 ಲಕ್ಷ ಕೋಟಿ ರೂ. ಸಾಲ ಮಾಡಲಿದೆ !
Wednesday, January 25, 2023
ಹೊಸದಿಲ್ಲಿ: ಕೇಂದ್ರ BJP ಸರಕಾರವು 2023-24ನೇ ಹಣಕಾಸು ವರ್ಷದಲ್ಲಿ ದಾಖಲೆಯ 16 ಲಕ್ಷ ಕೋಟಿ ರೂ. (198 ಶತಕೋಟಿ ಡಾಲರ್) ಸಾಲವನ್ನು ಮಾಡಲಿದೆ ಎಂದು ಸುದ್ದಿ ಸಂಸ್ಥೆ ರಾಯ್ಟರ್ಸ್ ಪೋಲ್‌ನಲ್ಲಿ ವಿತ್ತ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ದೇಶದ ಮೂಲಸೌಕರ್ಯ ಯೋಜನೆಗಳ ವೆಚ್ಚಕ್ಕಾಗಿ ಹಾಗು ವಿತ್ತೀಯ ಶಿಸ್ತು ಕಾಯ್ದುಕೊಳ್ಳಲು ಹೆಚ್ಚುವರಿ ಸಾಲ ಅನಿವಾರ್ಯವಾಗಲಿದ್ದು, ಇದು ಬಜೆಟ್‌ನ ಆದ್ಯತೆಯು ಆಗಲಿದೆ. ಕಳೆದ 4 ವರ್ಷಗಳಲ್ಲಿ ಇದು ಗರಿಷ್ಠ ಸಾಲವಾಗಲಿದೆ.
ದೇಶದಲ್ಲಿ ಕೊರೋನಾ ಬಿಕ್ಕಟ್ಟು ಹಾಗು ಬಡವರಿಗೆ ನೆರವಾಗುವ ಯೋಜನೆಗಳಿಗಾಗಿ ಪ್ರಧಾನಿ ನರೇಂದ್ರ ಮೋದಿ ಸರಕಾರವು ಹೆಚ್ಚಿನ ಹಣವನ್ನು ಖರ್ಚು ಮಾಡುತ್ತಿದ್ದು, ಇದು ಆರ್ಥಿಕತೆ ಮೇಲೆ ನಕಾರಾತ್ಮಕ ಪ್ರಭಾವ ಬೀರಿದೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ.