ಏಪ್ರಿಲ್ 30ರಂದು ದುಬೈಯಲ್ಲಿ ನಡೆಯಲಿದೆ  ಯುಎಇ ಬಂಟ್ಸ್'ನ 46ನೇ ಕೂಡುಕಟ್ಟ್; "ಬಂಟ ವಿಭೂಷಣ ಪ್ರಶಸ್ತಿ" ಪ್ರದಾನ ಕಾರ್ಯಕ್ರಮ

ಏಪ್ರಿಲ್ 30ರಂದು ದುಬೈಯಲ್ಲಿ ನಡೆಯಲಿದೆ ಯುಎಇ ಬಂಟ್ಸ್'ನ 46ನೇ ಕೂಡುಕಟ್ಟ್; "ಬಂಟ ವಿಭೂಷಣ ಪ್ರಶಸ್ತಿ" ಪ್ರದಾನ ಕಾರ್ಯಕ್ರಮ

ದುಬೈ: ಯುಎಇ ಬಂಟ್ಸ್ ನ 46ನೇ ವರ್ಷದ ಕೂಡುಕಟ್ಟ್ ಮತ್ತು ವರ್ಷಂಪ್ರತಿ ಕೊಡಲ್ಪಡುವ 2023 ನೇ ಸಾಲಿನ "ಬಂಟ ವಿಭೂಷಣ ಪ್ರಶಸ್ತಿ" ಪ್ರದಾನ ಕಾರ್ಯಕ್ರಮವು ಏಪ್ರಿಲ್ 30ರ ರವಿವಾರದಂದು ಬೆಳಿಗ್ಗೆಯಿಂದ ಸಂಜೆಯ ವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.

ದುಬೈಯ ದೇರಾದ ಬ್ರಿಸ್ಟೊಲ್ ಹೋಟೆಲ್ (The Bristol Hotel Deira Dubai) ನಲ್ಲಿ ಜರಗುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯು.ಎ.ಇ ಬಂಟ್ಸ್ ನ ಅಧ್ಯಕ್ಷ ಸರ್ವೋತ್ತಮ ಶೆಟ್ಟಿಯವರು ವಹಿಸಿಕೊಳ್ಳಲಿದ್ದಾರೆ. ಈ ಕಾರ್ಯಕ್ರಮದ ಅತಿಥಿ ಸಮನ್ವಯಕಾರರಾಗಿ ಮುಂಬಯಿಯ ಉದ್ಯಮಿ, ಕಾರ್ಯಕ್ರಮ ಸಂಘಟಕ, ನಿರೂಪಣೆಕಾರ ಅಶೋಕ ಪಕ್ಕಳರವರು ಭಾಗವಹಿಸಲಿದ್ದಾರೆ.

ಪ್ರತಿ ವರ್ಷ ಕೊಡಲ್ಪಡುವ 'ಬಂಟ  ವಿಭೂಷಣ' ಪ್ರಶಸ್ತಿಯನ್ನು ಈ ವರ್ಷ ಆಳ್ವಾಸ್ ಶಿಕ್ಷಣ ಸಂಸ್ಥೆ ಮೂಡಬಿದ್ರೆಯ ಚೇರ್ ಮಾನ್ ಆಗಿರುವ ಡಾ. ಮೋಹನ್ ಆಳ್ವ ಅವರಿಗೆ ಗೌರವ ಪ್ರದಾನ ಮಾಡಲಾಗುವುದು.

ಯು.ಎ.ಇ.ಯಲ್ಲಿ ಇರುವ ಬಂಟ ಬಾಂಧವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಎಂದು ಯು.ಎ.ಇ. ಬಂಟ್ಸ್ ನ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ಉಪಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ದೇವೇಶ್ ಆಳ್ವ. ಕೋಶಾಧಿಕಾರಿ ಅನಿತಾ ದಯಾನಂದ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯಕುಮಾರ್ ಶೆಟ್ಟಿ ಗಾಣದಮೂಲೆ ಮಜಿಬೈಲ್ (ದುಬೈ)

Ads on article

Advertise in articles 1

advertising articles 2

Advertise under the article