ದುಬೈಯಲ್ಲಿ DKSCಯ ಜನಪ್ರಿಯತೆಗೆ ಸಾಕ್ಷಿಯಾದ ಅಭೂತಪೂರ್ವ ಬೃಹತ್ ಇಫ್ತಾರ್ ಕೂಟ

ದುಬೈಯಲ್ಲಿ DKSCಯ ಜನಪ್ರಿಯತೆಗೆ ಸಾಕ್ಷಿಯಾದ ಅಭೂತಪೂರ್ವ ಬೃಹತ್ ಇಫ್ತಾರ್ ಕೂಟ

ದುಬೈ: ಕರ್ನಾಟಕದ ಮೂಳೂರು ಎಂಬಲ್ಲಿ ಕಳೆದ 28 ವರ್ಷಗಳಿಂದ ಕರ್ನಾಟಕ ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗದಲ್ಲಿ ಅಭೂತ ಪೂರ್ವ ಶೈಕ್ಷಣಿಕ ಕ್ರಾಂತಿಯನ್ನು ಸಾಧಿಸಿ ನೂರಾರು ಅನಾಥ ಮತ್ತು ನಿರ್ಗತಿಕ ಮಕ್ಕಳಿಗೆ ಆಶ್ರಯ ನೀಡುವುದರ ಸಹಿತ ಸಾವಿರಾರು ಮಕ್ಕಳಿಗೆ ಪ್ರಾಥಮಿಕ ಮಟ್ಟಿಂದ  ಪದವಿ ಶಿಕ್ಷಣದ ವರೆಗೆ ನೈತಿಕ ಮತ್ತು ಧಾರ್ಮಿಕ ಅಂಶಗಳೊಂದಿಗೆ ಕೂಡಿದ ಗುಣ ಮಟ್ಟದ ನೀಡುತ್ತಾ ಸಮುದಾಯದ ಶೈಕ್ಷಣಿಕ ಸಬಲೀಕರಣದ ಮಹಾ ಕ್ರಾಂತಿಯನ್ನು ಸಾಧಿಸುತ್ತಿರುವ ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (DSC) ಇದರ ವತಿಯಿಂದ ಇತ್ತೀಚಿಗೆ ದುಬೈಯ ವುಡ್ ಲೆಮ್ ಪಾರ್ಕ್ ಸ್ಕೂಲ್ ಸಭಾಂಗಣದಲ್ಲಿ ಬೃಹತ್ ರೀತಿಯ ಇಫ್ತಾರ್ ಕೂಟ ನಡೆಯಿತು.

ಅಪಾರ ಜನಸ್ತೋಮದ ಈ ಇಫ್ತಾರಿನ ನೋಟವು UAEಯ ನಾನಾ ಭಾಗಗಳಿಂದ ತಮ್ಮ ಕುಟುಂಬ ಸಮೇತರಾಗಿ ಆಗಮಿಸಿದ ಸಾವಿರಾರು ಕನ್ನಡಿಗರ ಈ ಇಫ್ತಾರ್ ಕೂಟವು DKSCಯ ಅಪಾರ ಜನಪ್ರಿಯತೆಗೆ ಸಾಕ್ಷಿಯಾಯಿತು. 












ಇಫ್ತಾರಿಗೆ ಮೊದಲು DKSC ಇದರ ಗೌರವ ಅಧ್ಯಕ್ಷರಾದ ಬಹು ಸಯ್ಯದ್‌ ತಾಹಾ ಬಾಫಖಿ  ತಂಗಳ್ ರವರ ನೇತೃತ್ವದಲ್ಲಿ ಹಲವಾರು ಧಾರ್ಮಿಕ ಪಂಡಿತರ, ಸದಾತುಗಳ, DKSC ನೇತಾರರ ಮತ್ತು ಸದಸ್ಯರ ನೇತೃತ್ವದಲ್ಲಿ ಆಧ್ಯಾತ್ಮಿಕ ಮಜ್ಲಿಸ್ ನಡೆಯಿತು. ಆನಂತರ ಬಹು ಮೆಹಬೂಬ್‌ ಸಖಾಫಿಯವರಿಂದ ರಮದಾನ್ ತಿಂಗಳ ಮಹತ್ವವನ್ನು ವಿವರಿಸುವ ಪ್ರವಚನ ನಡೆಯಿತು. ಇಫ್ತಾರಿಗೆ ಮುಂಚಿತವಾಗಿ ಬಹು ಸಯ್ಯದ್ ತಾಹಾ ಬಾಫಖಿ  ತಂಗಳವರಿಂದ ದುವಾ ನರವೇರಿತು. ಇಫ್ತಾರ್ ಆದ ನಂತರ ನಡೆದ ಸಭಾ ಕಾರ್ಯಕ್ರಮಕ್ಕೆ ಪೂರ್ವ ಭಾವಿಯಾಗಿ DKSCಯ ಅಧೀನದಲ್ಲಿರುವ ಅಲ್ ಇಹಸಾನ್ ವಿದ್ಯಾ ಸಮುಚ್ಛಯದ ಸ್ತೂಲ ಪರಿಚಯವನ್ನು ನೀಡುವ ಆಡಿಯೋ ವಿಶು ಅಲ್ ಅನ್ನು ಪ್ರದರ್ಶಿಸಲಾಯಿತು.

ಅಧ್ಯಕ್ಷರಾದ ಜನಾಬ್ ಎಂ.ಈ. ಮೂಳೂರುರವರು DKSCಯ ಸಾಧನೆಯ ಸವಿವರವಾದ ಪರಿಚಯ ಹಾಗೂ ಮುಂಬರುವ ಯೋಜನೆಗಳ ವಿವರ ನೀಡಿದರು. ಮುಖ್ಯವಾಗಿ ಶೀಘ್ರ ಪ್ರಾರಂಭ ಮಾಡಬೇಕಾಗಿರುವ ಮಹಿಳಾ ಹಾಸ್ಟೆಲ್ ಕಟ್ಟಡದ ಬಗ್ಗೆ ವಿವರ ನೀಡಿದರು. ಸಭಾ ಕಾರ್ಯಕ್ರದಲ್ಲಿ DKSCಯ ಪ್ರಧಾನ ಕಾರ್ಯದರ್ಶಿ ಯೂಸುಫ್ ಅರ್ಲಪದವು DKSCಯ ಕಾರ್ಯವೈಖರಿಯ ಬಗ್ಗೆ ಉಲ್ಲೇಖಿಸಿದರು ಮತ್ತು ಅಥಿತಿಗಳನ್ನು ವೇದಿಕೆಗೆ ಆಹ್ವಾನಿಸಿದರು. 

ಇಫ್ತಾರ್ ಕಮಿಟಿ ಚಯರ್ಮನ್ ಲತೀಫ್ ತಿಂಗಳಾಡಿ ಇಫ್ತಾರ್ ಕಾರ್ಯಕ್ರಮಕ್ಕೆ ಸಹಕರಿಸಿದವರನ್ನು ಸ್ಮರಿಸುತ್ತಾ ಧನ್ಯವಾದವನ್ನು ಅರ್ಪಿಸಿದರು. London American University College ಜಾಂಬಿಯಾ ಇದರ Vice Chancellor ಮತ್ತು BCF ಪ್ರಧಾನ ಕಾರ್ಯದರ್ಶಿ ಡಾ.ಕಾಪು ಮೊಹಮದ್, KMCCಯ ಅಡ್ವಕೇಟ್ ಖಲೀಲ್‌, ಜಾಈದ್ ಫೌಂಡೇಶನ್ ಇದರ ಪೂರ್ವ ಫೈನಾನ್ಸಿಯಲ್ ಕಂಟ್ರೋಲರ್ ಅಬ್ದುಲ್ಲಾ ಮದುಮೂಲೆ, ನಫೀಸ್ ಗ್ರೂಪ್ ಮ್ಯಾನೇಜಿಂಗ್ ಡೈರೆಕ್ಟರ್  ಅಬೂಸಾಲಿ, ಅರೀಬ್ ಗ್ರೂಪ್ ಇದರ  ಅಬ್ದುಲ್ ರಜಾಕ್ ದೀವಾ, ತನ್ವೀರ್ ಅಬ್ದುಲ್ ರಜಾಕ್ ಗಡಿಯಾರ್ ಗ್ರೂಪ್ ಮ್ಯಾನೇಜಿಂಗ್ ಡೈರೆಕ್ಟರ್ ಇಬ್ರಾಹಿಂ ಗಡಿಯಾ‌ರ್, ಟೆಕ್ನೋ ಫಿಟ್ ಮ್ಯಾನೇಜಿಂಗ್ ಡೈರೆಕ್ಟರ್  ಸಾದಿಕ್,  ಆಸೀಫ್ ಕಣ್ಣಂಗಾರ್ ಮೊದಲಾದವರು ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದರು. 

ಕಾರ್ಯಾಧ್ಯಕ್ಷ ಜನಾಬ್ ಅಬ್ದುಲ್ ರಹಿಮಾನ್‌ ಸಚಿವ, ಕೋಶಾಧಿಕಾರಿ ಅಬ್ದುಲಾ ಪೆರುವಾಯಿ, ಉಪಾಧ್ಯಕ್ಷರಾದ ನವಾಜ್ ಕೋಟೆಕಾರ್, ಮೊಹಮ್ಮದ್ ಅಲಿ ಮೂಡುತೋಟ, ಶಬೀರ್ ಜೋಕಟ್ಟೆ, ಕಾರ್ಯದರ್ಶಿಗಳಾದ ಕಮರುದ್ದೀನ್ ಗುರುಪುರ, ಮತ್ತು ಪರೀಫ್ ಬೋಲ್ಮಾರ್, ಹಿರಿಯ ನೇತಾರರಾದ ಸುಲೇಮಾನ್ ಮೂಳೂರು, ಶುಕೂರ್ ಮನಿಲಾ, ಸಂವಹನಾ ಕಾರ್ಯದರ್ಶಿ ಶಮೀ‌ರ್ ಕೊಲ್ನಾಡ್, ಸಲಹೆಗಾರರಾದ ಲತೀಫ್ ಮುಲ್ಕಿ, ವಹಾಬ್ ಕಂಚಿಲ್ ಕುಂಜ, ಹಸನ್ ಹಳೆಯಂಗಡಿ ಮೊದಲಾದ ಪದಾಧಿಕಾರಿಗಳು ಕಾರ್ಯಕ್ರಮದ ಯಶಸ್ಸಿಗಾಗಿ ಸಕ್ರಿಯವಾಗಿ ಶ್ರಮಪಟ್ಟರು.

DKSC ಸ್ವಯಂಸೇವಕ ದಳದ ಮುಖ್ಯಸ್ಮರಾದ ಇಬ್ರಾಹಿಂ ಕಳತ್ತೂರು, ಸಮದ್‌ ಬೀರಾಲಿ, ನಜೀರ್ ಕುಪ್ಪೆಟ್ಟಿ, ಬಾಬಾ ಇಸ್ಮಾಯಿಲ್ ಮೂಳೂರು ಇವರ ನೇತೃತ್ವದಲ್ಲಿ ಸುಮಾರು 40ರಷ್ಟು ನಿಷ್ಠಾವಂತ ಯುವಕರ ಶಿಸ್ತುಬದ್ಧವಾದ  ಪರಿಶ್ರಮವು ಕಾರ್ಯಕ್ರಮದ ಯಶಸ್ಸಿಗೆ ಮುಖ್ಯ ಕಾರಣವಾಯಿತು.

Ads on article

Advertise in articles 1

advertising articles 2

Advertise under the article