ಎಲ್ಲಾ ಧರ್ಮದವರನ್ನೂ ಜೊತೆಯಾಗಿ ಕೊಂಡೊಯ್ಯುವ ಜೊತೆಗೆ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ ಶ್ರಮಿಸುತ್ತೇನೆ: ಮತ ಯಾಚನೆಯ ವೇಳೆ ಪ್ರಸಾದ್ ರಾಜ್ ಕಾಂಚನ್
ಉಡುಪಿ: ಎಲ್ಲಾ ಧರ್ಮದವರನ್ನೂ ಜೊತೆಯಾಗಿ ಕೊಂಡೊಯ್ಯುವ ಜೊತೆಗೆ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯಾಗಿ ತನ್ನನ್ನು ಗೆಲ್ಲಿಸಿ ಎಂದು ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಮತದಾರರಲ್ಲಿ ಮನವಿ ಮಾಡಿದ್ದಾರೆ.
ವಿಧಾನಸಭಾ ಚುನಾವಣೆ ಪೂರ್ವಭಾವಿಯಾಗಿ ಕಲ್ಮಾಡಿ ವಾರ್ಡ್ ನಲ್ಲಿ ಕಾಂಗ್ರೆಸ್ ಮುಖಂಡ ಡಿಯೊನ್ ನೇತೃತ್ವದಲ್ಲಿಂದು ಮನೆ -ಮನೆ ಭೇಟಿ ಕಾರ್ಯಕ್ರಮದಲ್ಲಿ ಮತಯಾಚನೆಯ ವೇಳೆ ಮಾತನಾಡುತ್ತಿದ್ದರು. ಸಭೆಯಲ್ಲಿ ಹಿರಿಯರು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಉಡುಪಿ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ರವರ ಮುಂದಾಳತ್ವದಲ್ಲಿ ಬೈಕಾಡಿ ಶ್ರೀ ಮಾಧವ ಮಂಗಳ ಸಭಾಂಗಣದಲ್ಲಿಂದು ಮೊಗವೀರ ಸಮುದಾಯದವರ ಜೊತೆ ಸಭೆ ನಡೆಯಿತು.
ಮೊಗವೀರರ ಕಷ್ಟ, ಕಾರ್ಪಣ್ಯಗಳಿಗೆ ತಾನು ಧ್ವನಿಯಾಗುತ್ತೇನೆ
ಸಭೆಯಲ್ಲಿ ಈ ಬಾರಿಯ ಚುನಾವಣೆಯಲ್ಲಿ ನನ್ನ ಗೆಲುವಿಗೆ ಮೊಗವೀರ ಸಮುದಾಯದವರು ಶ್ರಮಿಸಬೇಕು, ಗೆದ್ದ ಬಳಿಕ ಮೊಗವೀರರ ಕಷ್ಟ, ಕಾರ್ಪಣ್ಯಗಳಿಗೆ ತಾನು ಧ್ವನಿಯಾಗುತ್ತೇನೆ ಎಂದು ಪ್ರಸಾದ್ ರಾಜ್ ಕಾಂಚನ್ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಹಾರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಭಾಕರ್ ಶೆಟ್ಟಿ,ಉದಯ ಸುವರ್ಣ, ನಾರಾಯಣ ಶ್ರೀಯಾನ್,ಸಂತೋಷ ಪೂಜಾರಿ, ರಘು ಶೆಟ್ಟಿ, ಚಂದ್ರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಕೆಮ್ಮಣ್ಣು ಗುಳಿಬೆಟ್ಟುವಿನಲ್ಲಿ ಮತಯಾಚನೆ
ನಂತರ ಕೆಮ್ಮಣ್ಣು ಗುಳಿಬೆಟ್ಟು ವಾರ್ಡ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದ ಪ್ರಸಾದ್ ರಾಜ್ ಕಾಂಚನ್ ಮನೆ - ಮನೆಗೆ ಭೇಟಿ ನೀಡಿ ಮತ ಯಾಚಿಸಿದರು.
ಕಾಂಗ್ರೆಸ್ ಮುಖಂಡೆ ವೇರೋನಿಕಾ ಕರ್ನೆಲಿಯೊ ನೇತೃತ್ವದಲ್ಲಿ ಈ ಮತಯಾಚನಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಹಿರಿಯರು ಮತ್ತು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.