ಹಿರಿಯ ಕೃಷಿಕ ಕೆಮ್ತೂರು ನಿವಾಸಿ ಡೆನ್ನಿಸ್ ಡಿಸೋಜಾ ನಿಧನ
Friday, April 12, 2024
ಉಡುಪಿ: ಹಿರಿಯ ಕೃಷಿಕ, ಕೆಮ್ತೂರು ನಿವಾಸಿ ಡೆನ್ನಿಸ್ ಡಿಸೋಜಾ(87)ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ಮುಂಜಾನೆ ನಿಧನರಾಗಿದ್ದಾರೆ.
ಇವರು ಕೆಮ್ತೂರು- ಮಣಿಪುರ ಸಂಪರ್ಕ ಕಲ್ಪಿಸುವ ತೂಗು ಸೇತುವೆ ನಿರ್ಮಾಣಕ್ಕೆ ಸ್ಥಳದಾನ ಮಾಡಿರುತ್ತಾರೆ. ಮಾತ್ರವಲ್ಲದೆ ಅಲೆವೂರು ಗ್ರಾಮ ಪಂಚಾಯತ್ ವತಿಯಿಂದ ಕುಡಿಯುವ ನೀರಿನ ಬಾವಿ ನಿರ್ಮಾಣಕ್ಕೂ ಉಚಿತವಾಗಿ ಸ್ಥಳದಾನ ನೀಡಿರುತ್ತಾರೆ.
ಮೃತರು ಇಬ್ಬರು ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಶನಿವಾರ ಉದ್ಯಾವರ ಸೈಂಟ್ ಝೇವಿಯರ್ ಚರ್ಚ್‌ನಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.