ಫ್ರೀ ಬಸ್​ನಿಂದ ಹೆಣ್ಮಕ್ಕಳು ಎಲ್ಲೆಲ್ಲೋ ಹೋಗುತ್ತಿದ್ದಾರೆ ಎಂಬ ನಟಿ ಶ್ರುತಿ ಹೇಳಿಕೆ; ರಾಜ್ಯ ಮಹಿಳಾ ಆಯೋಗದಿಂದ ನೋಟಿಸ್ ಜಾರಿ

ಫ್ರೀ ಬಸ್​ನಿಂದ ಹೆಣ್ಮಕ್ಕಳು ಎಲ್ಲೆಲ್ಲೋ ಹೋಗುತ್ತಿದ್ದಾರೆ ಎಂಬ ನಟಿ ಶ್ರುತಿ ಹೇಳಿಕೆ; ರಾಜ್ಯ ಮಹಿಳಾ ಆಯೋಗದಿಂದ ನೋಟಿಸ್ ಜಾರಿ

ಕಾಂಗ್ರೆಸ್ ಸರ್ಕಾರ ಕೊಟ್ಟಿರುವ ಗ್ಯಾರಂಟಿ ಯೋಜನೆಯಿಂದ ಹಾಗೂ ಫ್ರೀ ಬಸ್ ಯೋಜನೆಯಿಂದ ತೀರ್ಥಯಾತ್ರೆಗೆಂದು ಹೋಗುತ್ತೇವೆ ಎಂದು ಹೇಳಿ ಹೆಣ್ಣು ಮಕ್ಕಳು ಎಲ್ಲೆಲ್ಲೂ ಹೋಗುತ್ತಿರುತ್ತಾರೆ ಅಂತಾ ನಟಿ ಶ್ರುತಿ ಮಾತನಾಡಿರೋದು ಮಾಧ್ಯಮದಲ್ಲಿ ವರದಿಯಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಕಾರಣ ಕೇಳಿ ರಾಜ್ಯ ಮಹಿಳಾ ಆಯೋಗ ಅವರಿಗೆ ನೋಟಿಸ್ ಜಾರಿ ಮಾಡಿದೆ.

ನಟಿ ಶ್ರುತಿ ನೀಡಿದ್ದ ಹೇಳಿಕೆಯನ್ನು ವಿರೋಧಿಸಿ ಸಾಮಾಜಿಕ ಕಾರ್ಯಕರ್ತ ಮನೋಹರ್ ಅವರು ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು. ದೂರಿನ ಅನ್ವಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಶ್ರುತಿಗೆ ನೋಟೀಸ್ ನೀಡಿದ್ದಾರೆ. ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡುವಂತೆ ನೋಟಿಸ್​ನಲ್ಲಿ ಸೂಚಿಸಲಾಗಿದೆ. ಶ್ರುತಿ ಅವರ ಹೇಳಿಕೆಗೆ ಸೋಶಿಯಲ್​ ಮೀಡಿಯಾದಲ್ಲಿ ಅನೇಕ ಮಹಿಳೆಯರು ಕೂಡ ವಿರೋಧ ವ್ಯಕ್ತಪಡಿಸಿದ್ದರು.

ನಟಿ ಶ್ರುತಿ ಹೇಳಿಕೆ ಏನು?

‘ಬಸ್ಸಿನ ಸೀಟಿಗೋಸ್ಕರ ಹೆಣ್ಮಕ್ಕಳು ಜುಟ್ಟು ಹಿಡಿದುಕೊಂಡು ಹೊಡೆದಾಡುವಂತೆ ಮಾಡಿದ್ದೀರಿ ನೀವು. ನನ್ನ ಹೆಂಡತಿ ಎಲ್ಲಿಗೆ ಹೋದಳೋ ಗೊತ್ತಿಲ್ಲ ಅಂತ ಎಷ್ಟೋ ಮನೆಯ ಗಂಡಸರು ಅಳುತ್ತಾ ಇದ್ದಾರೆ. ಎಷ್ಟೋ ಮನೆಯಲ್ಲಿ ಮಕ್ಕಳು ಉಪವಾಸ ಬಿದ್ದಿದ್ದಾರೆ. ಫ್ರೀ ಬಸ್​ ಕೊಟ್ಟರು ಅಂದ ತಕ್ಷಣ ಹೆಣ್ಮಳ್ಳಲು ಎಲ್ಲೆಲ್ಲೋ ಹೋಗುತ್ತಿದ್ದಾರೆ. ತೀರ್ಥಯಾತ್ರೆಗೆ ಹೋಗಬೇಕು ಎಂಬ ನೆಪದಲ್ಲಿ ಎಲ್ಲಿಗೆ ಹೋಗಬೇಕು ಎಂಬುದು ಕೂಡ ಗೊತ್ತಿಲ್ಲ. ಗೊತ್ತು-ಗುರಿ ಇಲ್ಲದಂತೆ ಮಾಡಿದ್ದಾರೆ’ ಎಂದು ಶ್ರುತಿ ಹೇಳಿದ್ದರು.

‘ಗಂಡ್ಮಕ್ಕಳು ಕಣ್ಣೀರು ಹಾಕುತ್ತಿದ್ದಾರೆ. ಆಟೋ ಓಡಿಸುವವರ ಮನೆ ನಡೆಯುತ್ತಿತ್ತು. ಫ್ರೀ ಬಸ್​ನಿಂದ ಅವರಿಗೆ ಅನ್ನ ಇಲ್ಲದಂತಾಗಿದೆ. 2 ಸಾವಿರ ರೂಪಾಯಿ ಕೊಡ್ತೀನಿ ಅಂತ ಹೇಳುತ್ತಾರೆ. ಆ ಹಣ ನಿಮ್ಮ ಕೈಯಲ್ಲಿ ಎಷ್ಟು ದಿನ ಉಳಿಯುತ್ತೆ? ಯಾವುದೇ ಯೋಜನೆಯು ಮಹಿಳೆಯ ರಕ್ಷಣೆಗೆ ಇರಬೇಕು. ಬರೀ ಆಕರ್ಷಣೆ ಆಗಿರಬಾರದು. ರಾಮಾಯಣದಲ್ಲಿ ಸೀತೆಗೆ ಲಕ್ಷ್ಮಣರೇಖೆ ಹಾಕಿದಾಗ ಆಕೆಯ ಎದುರಿಗೆ ಕಂಡಿದ್ದು ಬಂಗಾರದ ಚಿಂಕೆ. ಆದರೂ ಆಕೆ ಲಕ್ಷ್ಮಣರೇಖೆಯನ್ನು ದಾಡಿದಳು. ನಂತರ ಅವಳ ಅಪಹರಣ ಆಯಿತು. ಇಂದು ಕಾಂಗ್ರೆಸ್​ ಕೊಡುತ್ತಿರುವ ಬಿಟ್ಟಿ ಭಾಗ್ಯಗಳು ಕೂಡ ಬಂಗಾರದ ಚಿಂತೆಯ ರೀತಿ. ಅದನ್ನು ನಂಬಿಕೊಂಡು ನೀವು ಭಾರತೀಯ ಸಂಸ್ಕೃತಿ ಎಂಬ ಲಕ್ಷ್ಮಣರೇಖೆ ದಾಡಿದರೆ ಆ ಪಕ್ಷದವರು ನಿಮ್ಮನ್ನು ಅಪಹರಣ ಮಾಡುತ್ತಾರೆ’ ಎಂದು ಶ್ರುತಿ ಹೇಳಿದ್ದರು.

ಶ್ರುತಿಗೆ ಕೊಟ್ಟಿ ನೋಟಿಸಿನಲ್ಲಿ ಈ ರೀತಿ ಬಹಿರಂಗವಾಗಿ ಹೆಣ್ಣು ಮಕ್ಕಳನ್ನು ಅವಮಾನಿಸಿರೋದು ಖಂಡನೀಯ. ರಾಜ್ಯ ಮಹಿಳಾ ಆಯೋಗದ ಅಧಿನಿಯಮ 1995 ಪರಿಚಯ 10(ಎ)ಮೇರೆಗೆ ನೋಟಿಸ್ ಜಾರಿ ಮಾಡಿದೆ. ಏಳು‌ ದಿನದಲ್ಲಿ ಸ್ಪಷ್ಟೀಕರಣ ನೀಡುವಂತೆ ಸೂಚನೆ ನೀಡಲಾಗಿದೆ.

ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ನಡೆದ ಚುನಾವಣಾ ಭಾಷಣದ ಅಬ್ಬರದಲ್ಲಿ ಮಹಿಳೆಯರನ್ನು ಶ್ರುತಿ ಟೀಕಿಸಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಅವರು ಮಾಡಿದ ಭಾಷಣದ ತುಣುಕು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಕೂಡ ಆಗಿತ್ತು. ನಂತರ ಮಹಿಳಾ ಆಯೋಗ ನೋಟಿಸ್ ನೀಡಿ, ಸ್ಪಷ್ಟೀಕರಣ ಕೇಳಿದೆ.

Ads on article

Advertise in articles 1

advertising articles 2

Advertise under the article