ಡಿಸೆಂಬರ್ 1ರಂದು ಮಂಜೇಶ್ವರ ಮೂಡಂಬೈಲು ಸರಕಾರಿ ಪ್ರೌಡ ಶಾಲೆಯ ಶತಮಾನೋತ್ಸವ ವರ್ಷಾಚರಣೆ; ಹರೇಕಳ‌ ಹಾಜಬ್ಬರಿಂದ ಉದ್ಘಾಟನೆ

ಡಿಸೆಂಬರ್ 1ರಂದು ಮಂಜೇಶ್ವರ ಮೂಡಂಬೈಲು ಸರಕಾರಿ ಪ್ರೌಡ ಶಾಲೆಯ ಶತಮಾನೋತ್ಸವ ವರ್ಷಾಚರಣೆ; ಹರೇಕಳ‌ ಹಾಜಬ್ಬರಿಂದ ಉದ್ಘಾಟನೆ

ಮಂಜೇಶ್ವರ : ಮೂಡಂಬೈಲು ಸರಕಾರಿ ಪ್ರೌಡ ಶಾಲೆಯು 2024-25ನೇ ಸಾಲಿನಲ್ಲಿ ಶತಮಾನೋತ್ಸವ ವರ್ಷಾಚರಣೆಯನ್ನು ವರ್ಷಾಂಪೂರ್ತಿ ಆಚರಿಸಲಾಗುತ್ತಿದ್ದು, ಇದರ ಉದ್ಘಾಟನಾ ಸಮಾರಂಭವು ಡಿಸೆಂಬರ್ 1 ರಂದು ಬೆಳಿಗ್ಗೆ 10.30 ಜರಗಲಿದೆ.

ಮೀಂಜ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಂದರಿ ಆರ್ ಶೆಟ್ಟಿಯವರ ಘನ ಅಧ್ಯಕ್ಷತೆಯಲ್ಲಿ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಪದ್ಮಶ್ರೀ ಪುರಸ್ಕೃತರಾದ ಅಕ್ಷರ ಸಂತ ಹರೇಕಳ‌ ಹಾಜಬ್ಬರವರು ಶತಮಾನೋತ್ಸವ ವರ್ಷಾಚರಣೆಯನ್ನು ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಸರಕಾರಿ ಕಾಲೇಜು ಕಾಸರಗೋಡಿನ ಪ್ರಾಧ್ಯಾಪಕರಾದ ಡಾ.ರತ್ನಾಕರ ಮಲ್ಲಮೂಲೆ, ಕಾಸರಗೋಡು ಜಿ.ಪಂಚಾಯತ್ ಸದಸ್ಯೆಯಾದ ಶ್ರೀಮತಿ ಕಮಲಾಕ್ಷಿ ಕೆ.,ಮೀಂಜ ಪಂಚಾಯತ್ ನ ಉಪಾಧ್ಯಕ್ಷರಾದ ಜಯರಾಮ ಬಲ್ಲಂಗುಡೇಲು, ಮಂಜೇಶ್ವರ ಬ್ಲಾಕ್ ಪಂ.ಸದಸ್ಯೆ ಶ್ರೀಮತಿ ಅಶ್ವಿನಿ ಎಂ.ಎಲ್, ಕಾಸರಗೋಡು ಶಾಲ ಶಿಕ್ಷಣಾಧಿಕಾರಿಗಳಾದ ದಿನೇಶ್ ವಿ., ಮಂಜೇಶ್ವರ ಸಹಾಯಕ ಶಿಕ್ಷಣಾಧಿಕಾರಿಗಳಾದ ರಾಜಗೋಪಲ,ಮಂಜೇಶ್ವರ ಬ್ಲಾಕ್ ಯೋಜನ ಸಂಯೋಜಕರು ಜಾಯ್ ಜಿ., ಶಾಲಾ ಬೆಂಬಲ ಸಮಿತಿಯ ಅಧ್ಯಕ್ಷರಾದ ಶಿವರಾಮ ಪದಕಣ್ಣಾಯ ಪಾಲ್ಗೊಳ್ಳಲಿದ್ದಾರೆ. ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಅಬ್ದುಲ್ಲ ಪಜಿಂಗಾರು, ಹಳೆ ವಿಧ್ಯಾರ್ಥಿ ಸಂಘದ ಅಧ್ಯಕ್ಷ ರಾಮ್ ಪ್ರಕಾಶ್ ಆಳ್ವ, ಮಾತೆಯರ ಸಂಘದ ಅಧ್ಯಕ್ಷರಾದ ಶ್ರೀಮತಿ ಸುಮಿತಾ ಎ.ಎಸ್ ಉಪಸ್ಥಿತರಿರುವರು. ಶಾಲಾ ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾದ ನ್ಯಾ.ಎಂ.ದಾಮೋದರ ಶೆಟ್ಟಿ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ. ಶಾಲಾ  ಮುಖ್ಯೋಪಾಧ್ಯಯರಾದ ಜಾರ್ಜ್ ಕ್ರಾಸ್ತ ಸಿ.ಎಚ್ ಸ್ವಾಗತಿಸಲಿದ್ದಾರೆ  ಹಾಗೂ ಸಭಾ ಕಾರ್ಯಕ್ರಮದ ನಂತರ ಶಾಲಾ ವಿಧ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿದೆ ಎಂದು ಶತಮಾನೋತ್ಸವ ಸಮಿತಿಯ ಪದಾಧಿಕಾರಿಗಳು ಪತ್ರಿಕಾ ಪ್ರಕಾಟನೆಯಲ್ಲಿ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article