![ಉಡುಪಿಯ ಪ್ರತಿಷ್ಟಿತ ಚಿನ್ನಾಭರಣಗಳ ಮಳಿಗೆ 'ಚೋಯ್ಸ್ ಗೋಲ್ಡ್'ನಲ್ಲಿ ಲಕ್ಕಿ ಡ್ರಾ; ಸ್ಕೀಮ್ ಫೆಸ್ಟ್ ಲಕ್ಕಿ ಡ್ರಾದಲ್ಲಿ ವಜ್ರ, ವಾಟ್ಸ್ ಆಪ್ ಸ್ಟೇಟಸ್ ವಿನ್ನರ್'ಗೆ ಸಿಕ್ಕಿತು ಚಿನ್ನದ ಉಂಗುರ; ನೂತನ ಮಳಿಗೆಯಲ್ಲಿ ನಡೆಯುತ್ತಿದೆ ಭರ್ಜರಿ 'ಆಫರ್'ಗಳು ಉಡುಪಿಯ ಪ್ರತಿಷ್ಟಿತ ಚಿನ್ನಾಭರಣಗಳ ಮಳಿಗೆ 'ಚೋಯ್ಸ್ ಗೋಲ್ಡ್'ನಲ್ಲಿ ಲಕ್ಕಿ ಡ್ರಾ; ಸ್ಕೀಮ್ ಫೆಸ್ಟ್ ಲಕ್ಕಿ ಡ್ರಾದಲ್ಲಿ ವಜ್ರ, ವಾಟ್ಸ್ ಆಪ್ ಸ್ಟೇಟಸ್ ವಿನ್ನರ್'ಗೆ ಸಿಕ್ಕಿತು ಚಿನ್ನದ ಉಂಗುರ; ನೂತನ ಮಳಿಗೆಯಲ್ಲಿ ನಡೆಯುತ್ತಿದೆ ಭರ್ಜರಿ 'ಆಫರ್'ಗಳು](https://blogger.googleusercontent.com/img/b/R29vZ2xl/AVvXsEhAKi21T9wd4CCY6X3V08Q9FiP4PbUdFliwIs7epyODM67E1UOE_bMM1PnhdzupsPX9KuKGs2ZBCX9HaHMAjHuCVPZmN-ChtskxiE81Jq4fOpVpJgCwbrzhw6vaaWJpl4ji0v1nRvVk_-HHZGSx7ON6ssHiLODMbN4hd8WL93rDQ6dQGn0VjE74VMvnAI1L/w640-h360/1.jpg)
ಉಡುಪಿಯ ಪ್ರತಿಷ್ಟಿತ ಚಿನ್ನಾಭರಣಗಳ ಮಳಿಗೆ 'ಚೋಯ್ಸ್ ಗೋಲ್ಡ್'ನಲ್ಲಿ ಲಕ್ಕಿ ಡ್ರಾ; ಸ್ಕೀಮ್ ಫೆಸ್ಟ್ ಲಕ್ಕಿ ಡ್ರಾದಲ್ಲಿ ವಜ್ರ, ವಾಟ್ಸ್ ಆಪ್ ಸ್ಟೇಟಸ್ ವಿನ್ನರ್'ಗೆ ಸಿಕ್ಕಿತು ಚಿನ್ನದ ಉಂಗುರ; ನೂತನ ಮಳಿಗೆಯಲ್ಲಿ ನಡೆಯುತ್ತಿದೆ ಭರ್ಜರಿ 'ಆಫರ್'ಗಳು
ಉಡುಪಿ: ನಗರದ ಹೃದಯ ಭಾಗದಲ್ಲಿ ಇತ್ತೀಚಿಗೆ ನೂತನವಾಗಿ ಆರಂಭವಾಗಿರುವ ಹೆಸರಾಂತ ಚಿನ್ನದ ಮಳಿಗೆ 'ಚೋಯ್ಸ್ ಗೋಲ್ಡ್'ನಲ್ಲಿ ಬುಧವಾರ ಗ್ರಾಹಕರಿಗೆ ಲಕ್ಕಿ ಡ್ರಾ ಮೂಲಕ ಬಹುಮಾನವನ್ನು ಘೋಷಿಸಲಾಯಿತು.
ವಿನ್ಯಾಸಭರಿತ ವಿಶೇಷ ಚಿನ್ನ ಹಾಗೂ ವಜ್ರಗಳ ಆಭರಣಗಳಿಗೆ ಹೆಸರುವಾಸಿಯಾಗಿರುವ 'ಚೋಯ್ಸ್ ಗೋಲ್ಡ್' ಗ್ರಾಹಕರಿಗಾಗಿ ಹಲವಾರು ರೀತಿಯ ಡಿಸ್ಕೌಂಟ್(ರಿಯಾಯಿತಿ), ಆಫರ್'ಗಳನ್ನೂ ನೀಡುತ್ತಲೇ ಬರುತ್ತಿದ್ದು, ಇದರ ಭಾಗವಾಗಿ ಇಂದು ಪ್ರತ್ಯೇಕ ಎರಡು ವಿಭಾಗದ ಮೂಲಕ ಆರು ಮಂದಿಗೆ ಚಿನ್ನ ಹಾಗು ವಜ್ರದ ಆಭರಣವನ್ನು ಬಹುಮಾನವಾಗಿ ನೀಡಲಾಯಿತು.
ಸ್ಕೀಮ್ ಫೆಸ್ಟ್ ಲಕ್ಕಿ ಡ್ರಾ...
'ಚೋಯ್ಸ್ ಗೋಲ್ಡ್' ಸ್ಕೀಮ್ ಫೆಸ್ಟ್ ಲಕ್ಕಿ ಡ್ರಾದಲ್ಲಿ ಝುಬೈದಾ ಅವರಿಗೆ ಡೈಮಂಡ್ ರಿಂಗ್(ವಜ್ರದ ಉಂಗುರ), ನುಝ ಹಾಗು ಝಹುರಾ ಅವರಿಗೆ ದ್ವಿತೀಯ ಹಾಗು ತೃತೀಯ ಬಹುಮಾನವಾಗಿ ಸರ್ಪ್ರೈಸ್ ಗಿಫ್ಟ್(surprise gift ) ಬಹುಮಾನವನ್ನು ಘೋಷಿಸಲಾಯಿತು.
ವಾಟ್ಸ್ ಆಪ್ ಸ್ಟೇಟಸ್ ವಿನ್ನರ್....
ಉಡುಪಿಯಲ್ಲಿ ನೂತನ ಮಳಿಗೆ ಆರಂಭದ ಹಿನ್ನೆಲೆಯಲ್ಲಿ ಘೋಷಿಸಲಾಗಿದ್ದ ವಾಟ್ಸ್ ಆಪ್ ಸ್ಟೇಟಸ್ ವೀಡಿಯೊ ಸ್ಕ್ರೀನ್ ಶಾರ್ಟ್ ವಿನ್ನರನ್ನು ಈ ವೇಳೆ ಲಕ್ಕಿ ಡ್ರಾ ಮೂಲಕ ಘೋಷಿಸಲಾಯಿತು. ಇದರಲ್ಲಿ ನಿಯಾಜ್ ಅವರಿಗೆ ಗೋಲ್ಡ್ ರಿಂಗ್(ಚಿನ್ನದ ಉಂಗುರ) ಬಹುಮಾನವಾಗಿ ಸಿಕ್ಕಿದರೆ, ಝಬೀನಾ ಹಾಗು ಇರ್ಫಾನ್ ಅವರಿಗೆ ಸರ್ಪ್ರೈಸ್ ಗಿಫ್ಟ್(surprise gift ) ಬಹುಮಾನವಾಗಿ ಘೋಷಿಸಲಾಯಿತು.
ಈ ಲಕ್ಕಿ ಡ್ರಾ ಕಾರ್ಯಕ್ರಮದಲ್ಲಿ ರೇಶ್ಮಾ ತೋಟ, ಚಂದ್ರಶೇಖರ ಶೆಟ್ಟಿ ಹಾಗು ಅವರ ಧರ್ಮ ಪತ್ನಿ ಪುಷ್ಪಲತಾ ಶೆಟ್ಟಿ, ಶೋಭಾ ವಾಸ್, ಸುಪ್ರಭ ಭಾಗವಹಿಸಿ, ಚೀಟಿ ಎತ್ತುವ ಮೂಲಕ ವಿಜಯಿಗಳನ್ನು ಘೋಷಿಸಿದರು.
ಇದೇ ವೇಳೆ 'ಚೋಯ್ಸ್ ಗೋಲ್ಡ್' ಮಳಿಗೆ ಬಗ್ಗೆ ಮಾತನಾಡಿದ ಆಡಳಿತ ಪಾಲುದಾರರಾದ ಅಶ್ರಫ್ ಎನ್ ಹಾಗು ಶಹೀರ್ ಬಿಎಮ್, ನಮ್ಮ ಮಳಿಗೆಯಲ್ಲಿ ಬಂಗಾರ ಪ್ರಿಯರಿಗೆ ಮೇಲಿಂದ ಮೇಲೆ ಆಫರ್, ವಿವಿಧ ಬಗೆಯ ರಿಯಾಯಿತಿಗಳನ್ನು ನೀಡಲಾಗುತ್ತಿದ್ದು, ಗ್ರಾಹಕರಿಗೆ ಬೇಕಾದಂಥ ನವನವೀನ ಮಾದರಿಯ ಚಿನ್ನಾಭರಣಗಳನ್ನು, ವಜ್ರದ ಆಭರಣಗಳನ್ನು ನೀಡಲಾಗುತ್ತಿದೆ ಎಂದರು.
ಉಡುಪಿಯ ಗ್ರಾಹಕರಿಗೆ 100%ರಷ್ಟು 916 BIS-HUID ಹಾಲ್ ಮಾರ್ಕ್ ಚಿನ್ನಾಭರಣ, ಪ್ರಮಾಣೀಕೃತ ವಜ್ರಾಭರಣ, ನವನವೀನ ಬೆಳ್ಳಿಯ ಆಭರಣ, ವಿವಿಧ ಬ್ರಾಂಡಿನ ವಾಚ್'ಗಳ ವಿಶಾಲ ಸಂಗ್ರಹವಾಗಿದ್ದು, ಗ್ರಾಹಕರು ಖರೀದಿಸುವ ಎಲ್ಲ ಚಿನ್ನಗಳ ಮೇಲಿನ ಮೇಕಿಂಗ್ ಚಾರ್ಜ್(ತಯಾರಿಕಾ ಶುಲ್ಕ)ನಲ್ಲಿ 50%ರಷ್ಟು ಡಿಸ್ಕೌಂಟ್ ಸಿಗಲಿದೆ. ಡೈಮಂಡ್ ಪರ್ ಕ್ಯಾರಟ್ ಜುವೆಲ್ಲರಿ ಖರೀದಿಗೆ ಗ್ರಾಹಕರಿಗೆ ಬರೋಬರಿ 21ಸಾವಿರ ಡಿಸ್ಕೌಂಟ್ ಸಿಗಲಿದೆ ಎಂದರು.
ಚಿನ್ನಾಭರಣ ಖರೀದಿಸುವ ಒಬ್ಬ ಅದೃಷ್ಟವಂತ ಗ್ರಾಹಕನಿಗೆ ಬಂಪರ್ ಬಹುಮಾನವಾಗಿ ಡೈಮಂಡ್ ನೆಕ್ಲೆಸ್ ಗೆಲ್ಲುವ ವಿಶೇಷ ಅವಕಾಶವಿದೆ. ಫೆಬ್ರವರಿ 14 ರಂದು ಇದರ ಬಂಪರ್ ಬಹುಮಾನ ನೀಡಲಾಗುತ್ತೆ. ಜೊತೆಗೆ ಬೆಳ್ಳಿ ಆಭರಣಗಳ ಮೇಲೆ 30% ಫ್ಲಾಟ್ ಡಿಸ್ಕೌಂಟ್ ಸಿಗಲಿದೆ ಎಂದು ವಿವರ ನೀಡಿದರು.