ಹೆಸರಿಗೆ ತಕ್ಕ ಪ್ಯಾಲೇಸ್ ನಂತಿದೆ ಉಪ್ಪಿನಂಗಡಿಯ 'ನವರತ್ನ ಪ್ಯಾಲೆಸ್' ರೂಂಗಳು!
ಉಪ್ಪಿನಂಗಡಿ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಪ್ರಮುಖ ಪಟ್ಟಣವಾಗಿದೆ. ಇದು ಒಂದು ಕಡೆ ಕುಮಾರಧಾರ ನದಿ ಮತ್ತು ಇನ್ನೊಂದು ಕಡೆ ನೇತ್ರಾವತಿ ನದಿಯಿಂದ ಸುತ್ತುವರಿದಿದೆ. ಪಟ್ಟಣದ ಸುತ್ತಮುತ್ತಲಿನ ಎರಡು ನದಿಗಳು ಮಳೆಗಾಲದಲ್ಲಿ ಉಗಮಿಸಿದಾಗ ಮತ್ತು ಸಂಧಿಸಿದಾಗ ಇದನ್ನು "ಸಂಗಮ್" ಎಂದು ಕರೆಯಲಾಗುತ್ತದೆ. ಸಂಗಮವನ್ನು ವೀಕ್ಷಿಸಲು ಸುತ್ತಮುತ್ತಲಿನ ಜನರು ನದಿ ದಡದಲ್ಲಿ ಕಿಕ್ಕಿರಿದು ಸೇರುತ್ತಾರೆ.
1923 ರಲ್ಲಿ ಉಪ್ಪಿನಂಗಡಿ ಪಟ್ಟಣವು ಅತಿಯಾದ ಪ್ರವಾಹದಿಂದಾಗಿ ಕೊಚ್ಚಿಕೊಂಡುಹೋಯಿತು ಮತ್ತು ಅದರ ನ್ಯಾಯಾಲಯಗಳನ್ನು ಪುತ್ತೂರಿಗೆ ಸ್ಥಳಾಂತರಿಸಲಾಯಿತು. 1974ರಲ್ಲಿ ತೀವ್ರ ಪ್ರವಾಹವೂ ಉಂಟಾಯಿತು.
ಉಪ್ಪಿನಂಗಡಿ ಪಟ್ಟಣವು 53 ಮೀಟರ್ ಎತ್ತರದಲ್ಲಿದೆ. ಉಪ್ಪಿನಂಗಡಿಯನ್ನು "ದಕ್ಷಿಣ ಕಾಶಿ" ಎಂದೂ ಕರೆಯುತ್ತಾರೆ. ಗುಪ್ತಗಾಮಿನಿ ಎಂದು ಕರೆಯಲ್ಪಡುವ ಇತರ ಎರಡು ನದಿಗಳೊಂದಿಗೆ ಮೂರನೇ ನದಿಯ ಸಂಗಮವೂ ಇದೆ ಎಂದು ನಂಬಲಾಗಿದೆ.
ಇಲ್ಲಿನ ಸಹಸ್ರಲಿಂಗೇಶ್ವರ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ. ಮಾಲಿಕ್ ದಿನಾರ್ ಮಸೀದಿ ಹಾಗೂ ಚರ್ಚ್ ಗಳೂ ಕೂಡ ಇಲ್ಲಿದ್ದು ಸರ್ವಮತಬಾಂಧವರ ಒಗ್ಗಟ್ಟಿಗೆ ಪ್ರತೀಕದಂತಿದೆ.
ಉಪ್ಪಿನಂಗಡಿ ದಕ್ಷಿಣ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿದೆ, ಸುತ್ತಲೂ ಕಾಡುಗಳಿಂದ ಆವೃತವಾಗಿದೆ. ಉಪ್ಪಿನಂಗಡಿಯು ಮಂಗಳೂರಿನಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 75 ರಲ್ಲಿದೆ .
ಈ ಸ್ಥಳದಿಂದ ಮಂಗಳೂರು ಮತ್ತು ಅದರ ತಾಲೂಕು ಕೇಂದ್ರವಾದ ಪುತ್ತೂರಿಗೆ , ಧರ್ಮಸ್ದಳ ದೇವಸ್ದಾನಕ್ಕೆ ಮತ್ತು ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಾಗ್ಗೆ ಬಸ್ ಮತ್ತು ಟ್ಯಾಕ್ಸಿ ಸೇವೆಗಳಿವೆ. 12 ಕಿ.ಮಿ ದೂರದಲ್ಲಿರುವ ಪುತ್ತೂರು ರೈಲು ನಿಲ್ದಾಣವು ಹತ್ತಿರದ ರೈಲು ನಿಲ್ದಾಣವಾಗಿದೆ. ಹತ್ತಿರದ ವಿಮಾನ ನಿಲ್ದಾಣವೆಂದರೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ 55 ಕಿಮೀ ದೂರದಲ್ಲಿದೆ.
ಉಪ್ಪಿನಂಗಡಿ ಕೂಟೆಲ್ ಕಿರು ಸೇತುವೆ ಬಳಿ ಇರುವ ನವರತ್ನ ಪ್ಯಾಲೆಸ್ ಎಂಬ ಬೋರ್ಡಿಂಗ್ & ಲಾಡ್ಜಿಂಗ್ ನಿಜವಾಗಿಯೂ ಪ್ರವಾಸಿಗರಿಗೆ ಪೂರಕವಾದ ವಾತಾವರಣವನ್ನು ಕಲ್ಪಿಸಿಕೊಡುವ ಪ್ರಮುಖ ಲಾಡ್ಜ್ ಗಳಲ್ಲಿ ಒಂದು. ಮೆಟ್ರೊ ಪಾಲಿಟನ್ ಸಿಟಿಗಳಲ್ಲಿ ದೊರಕಬಲ್ಲಂತಹ ರೀತಿಯ ರೂಂಗಳು ಹಾಗೂ ಸರ್ವಿಸನ್ನು ಈ ನವರತ್ನ ಪ್ಯಾಲೆಸ್ ಬೋರ್ಡಿಂಗ್ & ಲಾಡ್ಜಿಂಗ್ ಸಂಸ್ಥೆಯವರು ನೀಡುತ್ತಾರೆ.
ನವರತ್ನ ಪ್ಯಾಲೆಸ್ ನ ವಿಶಾಲವಾದ ರೂಂಗಳು ಹಾಗೂ ಅಚ್ಚುಕಟ್ಟಾದ ಜೋಡಣೆ ಮಾತ್ರವಲ್ಲದೇ ಪಕ್ಕದಲ್ಲೆ ಹರಿಯುವ ನದಿಯ ಪ್ರಕೃತ್ತಿದತ್ತವಾದ ವಿಹಂಗಮ ನೋಟ ಪ್ರವಾಸದಿಂದ ಬಸವಳಿದು ಬಂದವರಿಗೆ ಕಣ್ಮನ ತಂಪಾಗಿಸುತ್ತದೆ.
ವೆಜ್ ಹಾಗೂ ನಾನ್ ವೆಜ್ ರೆಸ್ಟೊರೆಂಟ್ ವ್ಯವಸ್ಥೆಯೊಂದಿಗೆ ಇರುವ ನವರತ್ನ ಪ್ಯಾಲೆಸ್ ಕೈಗೆಟುವ ದರದಲ್ಲಿ ಸೇವೆಯನ್ನು ನೀಡುತ್ತಿದೆ.
ಉಪ್ಪಿನಂಗಡಿ ಕೂಟೆಲು ಬಳಿ ನೆಲೆಕಂಡಿರುವ ಈ ನವರತ್ನ ಪ್ಯಾಲೆಸ್ ಗೆ ಬರುವ ಅಧಿಕ ಪ್ರವಾಸಿಗರು ಧರ್ಮಸ್ತಳ ಹಾಗೂ ಕುಕ್ಕೆಗೆ ಬರುವ ಭಕ್ತರು ಎಂದು ಆಡಳಿತ ಮಂಡಳಿಯ ಮುಖ್ಯಸ್ಥರು ಹೇಳುತ್ತಾರೆ.