"ಇಲ್ಲ ಸಲ್ಲದ ಭಯ ಪರೀಕ್ಷೆ ಭಯ" ಕನ್ನಡ ಸಿನಿಮಾ ಜೂನ್ ತಿಂಗಳ‌ಲ್ಲಿ ರಾಜ್ಯಾದ್ಯಂತ ಬಿಡುಗಡೆ

"ಇಲ್ಲ ಸಲ್ಲದ ಭಯ ಪರೀಕ್ಷೆ ಭಯ" ಕನ್ನಡ ಸಿನಿಮಾ ಜೂನ್ ತಿಂಗಳ‌ಲ್ಲಿ ರಾಜ್ಯಾದ್ಯಂತ ಬಿಡುಗಡೆ

ಉಡುಪಿ: ಮಕ್ಕಳಲ್ಲಿ ಪರೀಕ್ಷೆಯ ಭಯ ಹೋಗಲಾಡಿಸುವ ನಿಟ್ಟಿನಲ್ಲಿ ವಿ.ಪಿ. ಡೆಸಾ ಮಣಿಪಾಲ್ ಅವರು‌ ನಿರ್ದೇಶಿಸಿ ನಿರ್ಮಿಸಿರುವ "ಇಲ್ಲ ಸಲ್ಲದ ಭಯ ಪರೀಕ್ಷೆ ಭಯ" ಎಂಬ ಕನ್ನಡ ಸಿನಿಮಾ ಜೂನ್ ತಿಂಗಳ‌ಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. 

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಚಿತ್ರದ ನಿರ್ದೇಶಕ, ನಿರ್ಮಾಪಕ ವಿ.ಪಿ. ಡೆಸಾ ಮಣಿಪಾಲ್ ಅವರು, ಈ ಚಿತ್ರವನ್ನು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದಿಲ್ಲ. ಅದರ ಬದಲು ಎಲ್ ಇಡಿ ಪರದೆ ಮೂಲಕ‌ ಸಭಾಂಗಣದಲ್ಲಿ ಸಿನಿಮಾ ತೋರಿಸಲಾಗುತ್ತದೆ.‌ ಪ್ರತಿ ಶನಿವಾರ ಮತ್ತು ಭಾನುವಾರ ಉಡುಪಿಯ ಪಿಪಿಸಿ ಆಡಿಟೋರಿಯಮ್ ನಲ್ಲಿ ಪ್ರದರ್ಶನ ಮಾಡಲಾಗುವುದು.  ಶೋ ಮುಗಿದ ಬಳಿಕ ಕೆರಿಯರ್ ಗೈಡೆನ್ಸ್ ನಡೆಯಲಿದ್ದು, ಸಂದರ್ಶನದ ಭಯ ಹಾಗೂ ಪರೀಕ್ಕೆ ಭಯದ ಬಗ್ಗೆ ಇತರ ಪ್ರಶ್ನೆಗಳೇನಾದರೂ ಇದ್ದಲ್ಲಿ ಉತ್ತರಿಸಲಾಗುವುದು. ಇಲ್ಲದಿದ್ದಲ್ಲಿ ಬೇಕಾದ ವಿದ್ಯಾರ್ಥಿಗಳಿಗೆ, ಸಿನೆಮಾದಲ್ಲಿ ಹೇಳಲಾದ ಸ್ಪಡಿ ಟೆಕ್ನಿಕ್ಸ್ ಗಳನ್ನು ಸವಿಸ್ತಾರವಾಗಿ ವಿವರಿಸಲಾಗುವುದು ಎಂದರು.

ಇದು 'ಮಕ್ಕಳು ಆತ್ಮಹತ್ಯೆ ಮಾಡುವುದು, 'ಮನೆ ಬಿಟ್ಟು ಓಡಿ ಹೋಗುವುದು ಇಂತಹ ನಾನಾ ರೀತಿಯ ಸಮಸ್ಯೆಗಳನ್ನು ತಂದೊಡ್ಡುವ ಪರೀಕ್ಷೆ ಹೆದರಿಕೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ತಯಾರಿಸಿರುವ ಶೈಕ್ಷಣಿಕ-ಸಾಮಾಜಿಕ ಚಲನಚಿತ್ರವಾಗಿದೆ. ಮನೆಯಲ್ಲಿಯೇ ಕುಳಿತು ನೋಡಲು ಅನುಕೂಲವಾಗುವಂತೆ (www.san.poornajnanaott.com) ಹಾಗೂ (sampoornajnana app) ನಲ್ಲಿ ಪ್ರದರ್ಶಿಸಲಾಗುತ್ತಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಲಾವಿದರಾದ ಅಶ್ವಿನಿ ಶೀತಲ್, ಪ್ರದೀಪ್ ಇದ್ದರು.

Ads on article

Advertise in articles 1

advertising articles 2

Advertise under the article