
ಉಡುಪಿ ಕ್ರಿಶ್ಚಿಯನ್ ಹೈಸ್ಕೂಲ್ ಹಳೆ ವಿದ್ಯಾರ್ಥಿ ಸಂಘದಿಂದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆ, ಬೆಂಚು-ಡೆಸ್ಕ್‌ಗಳ ಹಸ್ತಾಂತರ
ಉಡುಪಿ: ಉಡುಪಿ ಕ್ರಿಶ್ಚಿಯನ್ ಹೈಸ್ಕೂಲ್ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ 2023-25ನೇ ಸಾಲಿನ ಎಸ್ಎಸ್ಎಲ್ಸಿಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ಮಕ್ಕಳಿಗೆ 15ನೇ ವರ್ಷದ ಪ್ರೋತ್ಸಾಹಧನ ವಿತರಣೆ ಹಾಗೂ ಬೆಂಚು-ಡೆಸ್ಕ್‌ಗಳ ಹಸ್ತಾಂತರ ಕಾರ್ಯಕ್ರಮ ಶನಿವಾರ ಕ್ರಿಶ್ಚಿಯನ್ ಹೈಸ್ಕೂಲ್ ಒಳಾಂಗಣ ವೇದಿಕೆ ನಡೆಯಿತು.
ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ರೆ.ಹೇಮಚಂದ್ರ ಕುಮಾರ್(Bishop / Chairman CSI, KSD), ಮುಖ್ಯ ಅತಿಥಿಗಳಾಗಿ ರೆ.ಐವನ್ ಸೋನ್ಸ್(ಕೋಶಾಧಿಕಾರಿ CSI, KSD), ರೆ.ಕಿಶೋರ್ ಕುಮಾರ್ (ವಲಯಾಧ್ಯಕ್ಷರು, CSI, KSD, Udupi), ಶಂಕರ್ ಶೆಟ್ಟಿ ಕೆ. (ಶಾಲಾ ಹಳೆವಿದ್ಯಾರ್ಥಿ, ಬೆಂಗಳೂರು), ಪಿ. ಸುರೇಶ್ ನಾಯಕ್ (ಅಧ್ಯಕ್ಷರು, ಯು.ಎಸ್. ನಾಯಕ್ ಮೆಮೊರಿಯಲ್ ಚಾರಿಟೇಬಲ್ ಟ್ರಸ್ಟ್, ಉಡುಪಿ), ಡಾ.ಶೇಖ್ ವಾಹಿದ್ ದಾವೂದ್ (Director, International Peace Commission of RAGP), ಡೊನಾಲ್ಡ್ ಸಾಲಿನ್ಸ್ (ಸಂಚಾಲಕರು, ಕ್ರಿಶ್ಚಿಯನ್ ಹೈಸ್ಕೂಲ್, ಉಡುಪಿ), ರೇಖಾ (ಮುಖ್ಯೋಪಾಧ್ಯಾಯಿನಿ, ಕ್ರಿಶ್ಚಿಯನ್ ಹೈಸ್ಕೂಲ್, ಉಡುಪಿ), ಹೆಲೆನ್ ವಿಕ್ಟೋರಿಯಾ ಸಾಲಿನ್ಸ್ (ಮುಖ್ಯೋಪಾಧ್ಯಾಯಿನಿ, ಕ್ರಿಶ್ಚಿಯನ್ ಇಂಗ್ಲೀಷ್ ಮೀಡಿಯಂ ಪ್ರೈಮರಿ ಸ್ಕೂಲ್, ಉಡುಪಿ), ಶ್ವೇತಾ ಶ್ರೀನಿವಾಸ್ (ಪ್ರಾಂಶುಪಾಲರು, ಕ್ರಿಶ್ಚಿಯನ್ ಪ.ಪೂ. ಕಾಲೇಜು, ಉಡುಪಿ) ಭಾಗವಹಿಸಿದ್ದರು.
2023-24 ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಾದ ಶ್ರೀವತ್ಸ ವಿ., ಡಿಯೋನ್ ಹೆಡ್ರಿಯಲ್, ಲಾಸ್ಯ, ನಂದಿನಿ, ನಿಹಾರಿಕಾ ಸಾಲಿನ್ಸ್, ಸೈಯದ್ ಮುಸ್ತಾಜಿಬ್, ರೀನಾ ಕ್ರಿಸ್ತಬೆಲ್ ಬಂಗೇರ, ನಿಶಾಲ್ ವಿ. ಶೆಟ್ಟಿ, ದ್ದುಹ ಇನಾಯ ಮಕ್‌ದ್ ಹಾಗು 2024-25 ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಾದ ರಕ್ಷಾ ಡಿ.ಆರ್., ಬಿ. ಗಾಯತ್ರಿ ಶ್ರೀ, ಸಿಯೋನಾ ಕ್ರಿಸ್ತಿನಾ, ಅದ್ವಿತ್ ಕೆ. ಅಮಿನ್, ಗಗನ್ ಕೆ., ಮಿಲನ್, ತ್ರಿಶಾ ಎಸ್. ದೇವಾಡಿಗ, ರಿಫತ್ ಪರ್ವಿನ್, ಸಾನ್ವಿ ಗಣೇಶ್ ಪೂಜಾರಿ, ಸ್ಕಂದ ಎಚ್. ಪದ್ಮಶಾಲಿ, ರಕ್ಷಿತಾ ನಾಯಕ್, ವಿನ್ಯಾಸ್ ಕೋಟ್ಯಾನ್, ಅಶ್ವಥ್ ಎಚ್.ಸಿ., ಇಫಾ ಅಖರ್ ಮತ್ತು ವಾಲಿಬಾಲ್ ಕ್ರೀಡೆಯಲ್ಲಿ ವಿಭಾಗ ಮಟ್ಟಕ್ಕೆ ಆಯ್ಕೆಯಾದ ವಿಧ್ಯಾರ್ಥಿನಿ ಖುಷಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕ್ರಿಶ್ಚಿಯನ್ ಹೈಸ್ಕೂಲ್ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರತಾಪ್ ಕುಮಾರ್, ಕಾರ್ಯದರ್ಶಿ ಮನೋಜ್ ಎಮ್. ಹಾಗು ಕೋಶಾಧಿಕಾರಿ ಸುಷ್ಮಾ ಹಾಜರಿದ್ದರು.