ಕಾರ್ಕಳ ಬೈಲೂರು ಕೆಳಪೇಟೆಯಲ್ಲಿ ಶ್ರೀಮತಿ ಜಲಜ ಮತ್ತು ಶ್ರೀ ಗೋವಿಂದ ವಾಗ್ಳೆ ಸ್ಮರಣಾರ್ಥ ಪ್ರಯಾಣಿಕರ ತಂಗುದಾಣ ಉದ್ಘಾಟನೆ
ಕಾರ್ಕಳ: ಶ್ರೀಮತಿ ಜಲಜ ಮತ್ತು ಶ್ರೀ ಗೋವಿಂದ ವಾಗ್ಳೆ ಸ್ಮರಣಾರ್ಥ ಅವರ ಸುಪುತ್ರರು ಉಡುಪಿ ಗೀತಾoಜಲಿ ಸಮೂಹ ಉದ್ಯಮ ಸಂಸ್ಥೆಗಳ ಪಾಲುದಾರರಾದ, ರಾಮಕೃಷ್ಣ ವಾಗ್ಳೆ, ಲಕ್ಷ್ಮಣ ವಾಗ್ಳೆ, ರಮೇಶ್ ವಾಗ್ಳೆ, ಹರೀಶ್ ವಾಗ್ಳೆ, ಸಂತೋಷ್ ವಾಗ್ಳೆಯವರು ಕಾರ್ಕಳ ಬೈಲೂರು ಕೆಳಪೇಟೆಯಲ್ಲಿ ನಿರ್ಮಿಸಿರುವ ಪ್ರಯಾಣಿಕರ ತಂಗುದಾಣವನ್ನು ಶಾಸಕ ವಿ. ಸುನೀಲ್ ಕುಮಾರ್ ಲೋಕಾರ್ಪಣೆಗೊಳಿಸಿದರು.
ಬೈಲೂರು ಶ್ರೀ ರಾಮ ಮಂದಿರದಲ್ಲಿ ನಡೆದ ಸಭಾ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಕಾರ್ಕಳ ಶಾಸಕ ಸುನಿಲ್ ಕುಮಾರ್, ವಾಗ್ಲೆ ಕುಟುಂಬ ಬೈಲೂರ್ ಪರಿಸರದಲ್ಲಿ ನಿರಂತರ ಸೇವೆ ನೀಡುತ್ತಿರುವುದು ಪ್ರಶಂಸನೀಯ. ಉದ್ಯಮಿಗಳು ಸಮಾಜ ಸೇವೆ ಮಾಡಬೇಕೆನಿಲ್ಲ, ಆದರೆ ಈ ಕುಟುಂಬ ಕಾರ್ಕಳ ಕ್ಷೇತ್ರ ಸುಂದರವಾಗಿ ಮೂಡಿ ಬರುವಲ್ಲಿ ಸಹಾಯ ಹಸ್ತ ನೀಡುತ ಬಂದಿದೆ. ಸುಸಜ್ಜಿತವಾಗಿ ನಿರ್ಮಾಣಗೊಂಡ ತಂದೆ ತಾಯಿಯ ಹೆಸರು ಶಾಶ್ವತ ನೆನಪಿಸುವ ಕೆಲಸ ಮಾಡಿದ್ದಾರೆ. ಈ ಆದರ್ಶ ಕುಟುಂಬ ಶಾಂತಿಯ ಸಾಗರ ಹೆಸರಿಗೆ ತಕ್ಕಂತೆ ಬೆಳೆಯುತ್ತಿದೆ. ಅವರ ಉದ್ಯಮದಲ್ಲಿ ಯಶಸ್ಸು ಕಾಣಲಿ ಹಾರೈಸಿದರು.
ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ಉಡುಪಿಯಲ್ಲಿ ಉದ್ಯಮವನ್ನು ಆರಂಭಿಸಿ ಅಲ್ಲಿ ಹೆಸರುವಾಸಿಯಾಗಿದ್ದಾರೆ. ಹೋಟೆಲ್ ಉದ್ಯಮದ ಮೂಲಕ ಉತ್ತಮ ಆಹಾರವನ್ನು ಗ್ರಾಹಕರಿಗೆ ನೀಡಿ ಎಲ್ಲಾ ಉದ್ಯಮದಲ್ಲಿ ಯಶಸ್ಸನ್ನು ಕಂಡಿರುವ ವಾಗ್ಳೆ ಕುಟುಂಬಸ್ಥರು ಸಾಮಾಜಿಕ ಬದ್ಧತೆ ಇರಿಸಿಕೊಂಡು ಸಮಾಜಕ್ಕೆ ತನ್ನಿಂದಾದ ಕೊಡುಗೆ ನೀಡುತ್ತಾ ಬಂದಿದ್ದಾರೆ. ಉದ್ಯಮದ ಮೂಲಕ ಹಲವರು ಕುಟುಂಬಗಳಿಗೆ ಅನ್ನದಾತರಾಗಿಯೂ, ಇವರ ಸೇವೆ ಮಹತ್ವದ್ದು. ಇನ್ನಷ್ಟು ಸಮಾಜಮುಖಿ ಕೆಲಸಗಳು ನಡೆಯಲಿ ಎಂದು ಶುಭ ಹಾರೈಸಿದರು.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಕೆರೆಯ ನೀರು ಕೆರೆಗೆ ಚೆಲ್ಲಿದಾಗ ಆದ ಆನಂದ ಬೇರೆ ಎಲ್ಲೂ ಸಿಗಲ್ಲ. ಸಮಾಜದಲ್ಲಿ ಸಿಕ್ಕಿದ ಋಣವನ್ನು ತೀರಿಸಿಬೇಕೆಂಬ ಮಹದಾಸೆಯೊಂದಿಗೆ ಸಮಾಜಕೆ ಸಹಕಾರ ನೀಡುತ್ತಿದ್ದಾರೆ ಎಂದರು.
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸುಮಿತ್ ಶೆಟ್ಟಿ ಮಾತನಾಡಿ, ಕಣ್ಣಿಗೆ ಕಾಣುವ ದೇವರು ತಂದೆ ತಾಯಿಯವರನ್ನು ನೆನೆಯುವವರು ಕಡಿಮೆ ಆದರೆ ತಂದೆ ತಾಯಿಯ ಸವಿನೆನಪಿಗಾಗಿ ಸಮಾಜಮುಖಿ ಕೆಲಸ ಮಾಡುವ ಮೂಲಕ ವಾಗ್ಳೆ ಕುಟುಂಬಸ್ಥರು ಸಮಾಜಕ್ಕೆ ಮಾದರಿಯಾಗಿದ್ದಾರೆ. ವಾಗ್ಲೆ ಕುಟುಂಬ ರಾಷ್ಟ್ರೀಯ ವಿಚಾರಧಾರೆವುಳ್ಳ ಕೂಡು ಕುಟುಂಬವಾಗಿದೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ನೀರೆ ಗ್ರಾ.ಪಂ. ಅಧ್ಯಕ್ಷ ಸಚ್ಚಿದಾನಂದ ಎಸ್. ಪ್ರಭುವಹಿಸಿದ್ದರು. ವೇದಿಕೆಯಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕರಾದ ಗೋಕುಲ್‌ದಾಸ್ ನಾಯಕ್, ಸರಕಾರಿ ಪ.ಪೂ. ಕಾಲೇಜು, ಬೈಲೂರು ಪ್ರಾಂಶುಪಾಲರಾದ ಸೀತಾರಾಮ ಭಟ್, ನೀರೆ ಗ್ರಾ.ಪಂ. ಸದಸ್ಯ ಹೈದರಾಲಿ, ಪಳ್ಳಿ ಅಡಪಾಡಿ ಶ್ರೀ ಉಮಾಮಹೇಶ್ವರ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಧರ್ಮದರ್ಶಿಗಳಾದ ಪುಂಡಲೀಕ ನಾಯಕ್, ನೀರೆ ಶ್ರೀ ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ಗರಡಿಯ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ನೀರೆ ಕೃಷ್ಣ ಶೆಟ್ಟಿ, ಉಡುಪಿ ಉಜ್ವಲ್ ಡೆವಲಪರ್ಸ್‌ನ ಪುರುಷೋತ್ತಮ ಶೆಟ್ಟಿ, ಕಾರ್ಕಳ ರಾಜಾಪುರ ಸಾರಸ್ವತ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಕಡಾರಿ ರವೀಂದ್ರ ಪ್ರಭು, ಉಡುಪಿ ಹೋಟೆಲ್ ತ್ರಿವೇಣಿಯ ಗಣಪತಿ ಶೆಣೈ ನೀರೆ ಕುದುರು, ಬೈಲೂರು ಮಾರಿಯಮ್ಮ ದೇವಸ್ಥಾನದ ಅಧ್ಯಕ್ಷರಾದ ಸುಧೀರ್ ಹೆಗ್ಡೆ ನಾಯರ್ ಬೆಟ್ಟು, ಕಣಂಜಾರು ಬ್ರಹ್ಮಲಿಂಗೇಶ್ವರ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷರಾದ ವಿಕ್ರಂ ಹೆಗ್ಡೆ ಕಣಂಜಾರು, ನೀರೆ ಬೈಲೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ನೀರೆ ರವೀಂದ್ರ ನಾಯಕ್, ಉದ್ಯಮಿ ಬೈಲೂರು ಸುಧೀರ್ ಹೆಗ್ಡೆ, ಉದ್ಯಮಿ ಬೈಲೂರು ಚಂದ್ರಶೇಖರ ಮಾಡ, ರಾಕೇಶ್ ವಾಗ್ಲೆ, ಕಾರ್ತಿಕ್ ವಾಗ್ಲೆ, ನಿಶಾಂತ್ ವಾಗ್ಲೆ ಉಪಸ್ಥಿತರಿದ್ದರು.

