ಮಂಗಳೂರು: ಭಾರತರತ್ನ ಡಾ.ಅಬ್ದುಲ್ ಕಲಾಂ ಸೋಶಿಯಲ್ ಡೆವಲಪ್ಮೆಂಟ್ ಫೌಂಡೇಶನ್(ರಿ) ಮಂಗಳೂರು ಇದರ ನೂತನ ಪದಾಧಿಕಾರಿಗಳ ಆಯ್ಕೆ ಶುಕ್ರವಾರ ನಗರದ ಸಾಯಿ ಪ್ಯಾಲೇಸ್ ನಲ್ಲಿ ನಡೆದ ಸಭೆಯಲ್ಲಿ ನಡೆಯಿತು.
ಸೀತಾರ್ ಮಜೀದ್ ಹಾಜಿ ಅವರನ್ನು ಅಧ್ಯಕ್ಷ ರನ್ನಾಗಿ ಆಯ್ಕೆ ಮಾಡಲಾಯಿತು. ಅಬ್ದುಲ್ ಖಾದರ್ ಹುಸೈನ್ ಪಡುಬಿದ್ರಿ ಅವರು ಪ್ರಧಾನ ಕಾರ್ಯದರ್ಶಿಯಾಗಿಯೂ, ಅಬೂಬಕರ್ ರವರನ್ನು ಉಪಾಧ್ಯಕ್ಷರನ್ನಾಗಿಯೂ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಸದಸ್ಯರಾದ ಶಾಹಿನ್, ಗಣೇಶ್ ಪ್ರಸಾದ್ ಮತ್ತು ಮೊಹಮ್ಮದ್ ಇಕ್ಬಾಲ್ ಸೇರಿದಂತೆ ಸಭೆಯಲ್ಲಿ ಮತ್ತಿತರರು ಉಪಸ್ಥಿತರಿದ್ದರು. ಅಬ್ದುಲ್ ಹಮೀದ್ ಕೈಕಂಬ ರವರು ವಿಶೇಷ ಆಹ್ವಾನಿತಾರಾಗಿ ಉಪಸ್ಥಿತರಿದ್ದರು.
