ಉಚ್ಚಿಲ: ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ 'ಉಡುಪಿ ಉಚ್ಚಿಲ ದಸರಾ'ಕ್ಕೆ ಗುರುವಾರ ಪತ್ನಿ ಸಮೇತ ಭೇಟಿ ನೀಡಿದ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖಾ ಸಚಿವ ಕೆ.ಎಚ್.ಮುನಿಯಪ್ಪ ಅವರು ದೇವರ ದರ್ಶನ ಪಡೆದರು.
ಈ ಸಂದರ್ಭದಲ್ಲಿ ಕೆ.ಎಚ್.ಮುನಿಯಪ್ಪ ಅವರಿಗೆ ಶ್ರೀ ಕ್ಷೇತ್ರದ ವತಿಯಿಂದ ಶಾಲು ಹೊದಿಸಿ, ದೇವರ ಪ್ರಸಾದ ನೀಡಿ ದ. ಕ ಮೊಗವೀರ ಸಂಘದ ಅಧ್ಯಕ್ಷರಾದ ಜಯ ಸಿ. ಕೋಟ್ಯಾನ್ ಗೌರವಿಸಿದರು.
ಪ್ರಸಾದ್ ಕಾಂಚನ್, ವಿನಯ್ ಕರ್ಕೇರ ಮಲ್ಪೆ, ಶರಣ್ ಕುಮಾರ್ ಮಟ್ಟು, ಗಿರಿಧರ್ ಸುವರ್ಣ, ದಯಾನಂದ ಕೆ. ಸುವರ್ಣ ಮಲ್ಪೆ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ದಿನಕರ್ ಹೇರೂರು, ರತ್ನಾಕರ್ ಸಾಲ್ಯಾನ್, ಯಜ್ನೇಶ್ ಕರ್ಕೇರ ಹೆಜಮಾಡಿ, ಸತೀಶ್ ಸಾಲ್ಯಾನ್, ದಿನೇಶ್ ಎರ್ಮಾಳ್ ಮುಂತಾದವರು ಉಪಸ್ಥಿತರಿದ್ದರು.

