ಉಚ್ಚಿಲ: ಇಲ್ಲಿನ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ ‘ಉಡುಪಿ ಉಚ್ಚಿಲ ದಸರಾ’ದಲ್ಲಿ ಬುಧವಾರ ಹಲವರಿಗೆ ಸನ್ಮಾನ, ಧಾರ್ಮಿಕ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಪತ್ರಕರ್ತ ರಾಕೇಶ್ ಕುಂಜೂರು, ಮಲ್ಪೆಯ ಸುಭಾಷ್ ಮೆಂಡನ್, ಯುವರಾಜ್ ಸಾಲ್ಯಾನ್ ಮಸ್ಕತ್ ಹಾಗು ಅವರ ಧರ್ಮ ಪತ್ನಿ ಮಲ್ಲಿಕಾ, ಯಜ್ಞೆಶ್ ಕರ್ಕೇರ, ರಮೇಶ್ ಕೋಟ್ಯಾನ್, ವೀಡಿಯೊ ಗ್ರಾಫರ್ ಸುರೇಂದ್ರ, ವಸ್ತು ಪ್ರದರ್ಶನದಲ್ಲಿ ತಮ್ಮ ಕೌಶಲ್ಯ ಪ್ರದರ್ಶಿಸಿರುವ ವೆಂಕಿ ಪಲಿಮಾರ್, ಶಂಕರ್ ಕುಲಾಲ್, ಹರೇಶ್ ಸಾಗ ಮಣಿಪಾಲ, ರಾಮ ಅಜೆಕಾರ್, ಬಾಬು ಕೊರಗ ಕರ್ತಲ, ನಿತ್ಯಾನಂದ ಕರ್ಕೇರ, ಶಂಕರ್ ಸಾಲ್ಯಾನ್ ನಾರಾಯಣ ಕುಂದರ್ ಕಲ್ಮಾಡಿ, ಮಂಜುನಾಥ ಸುವರ್ಣ ಬ್ರಹ್ಮಾವರ, ಸತೀಶ್ ಅಮೀನ್ ಬಾರ್ಕುರು ಅವರನ್ನು ನಾಡೋಜ ಡಾ.ಜಿ.ಶಂಕರ್, ಅಧ್ಯಕ್ಷ ಜಯ ಸಿ.ಕೋಟ್ಯಾನ್, ಪದ್ಮಾಕರ್, ಸಂಧ್ಯಾ ದೀಪ ಸುನಿಲ್, ಉಷಾ ರಾಣಿ ಸನ್ಮಾನಿಸಿದರು. ದೇವಳದ ಪ್ರಧಾನ ವ್ಯವಸ್ಥಾಪಕ ಸತೀಶ್ ಅಮೀನ್ ಪಡುಕರೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಇದಕ್ಕೂ ಮೊದಲು ಮುಂಬೈಯ ಭವಾನಿ ಶಿಪ್ಪಿಂಗ್ ಪ್ರೈವೇಟ್ ಲಿಮಿಟೆಡ್‌ನ ಚೇರ್ಮೆನ್ ಕುಸುಮಧರ ಶೆಟ್ಟಿ ಹಾಗು ಕುಂಬ್ಳೆ ರಾಜರಾಜೇಶ್ವರಿ ದೇವಸ್ಥಾನದ ಟ್ರಸ್ಟಿ ಕೃಷ್ಣ ಕುಮಾರ್ ಶೆಟ್ಟಿ ಪುಣೆ ದಸರಾಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಅಕ್ಷತಾ ದೇವಾಡಿಗ ಬೈಲೂರು ಅವರಿಂದ ಸ್ಯಾಕ್ಸೋಫೋನ್ ವಾದನ, ಮಹಿಳೆಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, “Swara the band” ರಾಜ್ಯದ ರಿಯಾಲಿಟಿ ಶೋ ಖ್ಯಾತಿಯ ಯುವ ಗಾಯಕ ಗಾಯಕಿಯರಿಂದ ಸಂಗೀತ ಕಾರ್ಯಕ್ರಮ ಜನರ ಮನಸೂರೆಗೊಳಿಸಿತು.

