ಕಟಪಾಡಿ: ಉಡುಪಿಯ ಮಣಿಪುರದ ಹಝ್ರತ್ ಮುಯೀನುದ್ದೀನ್ ಹಿಫ್ಝುಲ್ ಕುರುಆನ್ ಅಕಾಡೆಮಿಯಲ್ಲಿ ಫೆಬ್ರವರಿ 7ರಂದು 'ರೌದತುಲ್ ಕುರುಆನ್' ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಸಂಸ್ಥೆಯಲ್ಲಿ ಇಂಗ್ಲಿಷ್ ಮಾಧ್ಯಮ ಶಿಕ್ಷಣದ ಜೊತೆಗೆ ಪವಿತ್ರ ಕುರುಆನ್ ಹಿಫ್ಝ್ ಅಧ್ಯಯನವನ್ನು ನಡೆಸುತ್ತಿದ್ದು, ಎರಡು ವಿದ್ಯಾರ್ಥಿಗಳು ಪವಿತ್ರ ಕುರುಆನ್ ಹಿಫ್ಝ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಅವರ ಈ ಸಾಧನೆಯ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಸಮಾರಂಭದಲ್ಲಿ ವಿದ್ಯಾರ್ಥಿಗಳ ವಿವಿಧ ಕಾರ್ಯಕ್ರಮಗಳು, ಉಲಮಾಗಳಿಂದ ಪ್ರೇರಣಾದಾಯಕ ಭಾಷಣಗಳು, ಶಾಲಾ ವಿದ್ಯಾಭ್ಯಾಸದ ಜೊತೆಗೆ ಕುರುಆನ್ ಹಿಫ್ಝ್ ಪೂರ್ಣಗೊಳಿಸಿದ ಮಕ್ಕಳಿಗೆ ಸನ್ಮಾನ ಸಮಾರಂಭ ನಡೆಯಲಿದೆ. ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
