ಫಾತಿಮಾ ಸುಝ್ನರ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಸನ್ಮಾನಿಸಿದ ರಫೀಕ್ ಮಾಸ್ಟರ್

ಫಾತಿಮಾ ಸುಝ್ನ ಅವರ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಖ್ಯಾತ ಪ್ರೇರಣಾ ಭಾಷಣಗಾರ ಹಾಗು ಪೋಷಕರ ತಜ್ಞ ರಫೀಕ್ ಮಾಸ್ಟರ್ ಅವರು ತಮ್ಮ ನಿವಾಸಕ್ಕೆ ಆಹ್ವಾನಿಸಿ ಸನ್ಮಾನಿಸಿ ಗೌರವಿಸಿದ್ದಾರೆ.

PUC ಸಮಯದಲ್ಲಿ ರೈಲು ಅಪಘಾತಕ್ಕೆ ಒಳಪಟ್ಟ ಫಾತಿಮಾ ಒಂದು ಕಾಲು ಕಳೆದುಕೊಂಡರೂ, ಅದೆನ್ನೆಲ್ಲ ಹಿಮ್ಮೆಟ್ಟಿ, ಹಲವು ಸಂಕಷ್ಟಗಳನ್ನು ಎದುರಿಸಿ ಬಿ.ಕಾಂ ಹಾಗು ಎಂ.ಕಾಂ ಪದವಿಗಳನ್ನು ಪೂರೈಸುವ ಮೂಲಕ ಸಾಧನೆ ಮೆರೆದಿದ್ದಾರೆ. ಫಾತಿಮಾ ಸುಝ್ನ ಅವರು ಅಬ್ದುಲ್ ಸಮದ್ ಜೆಪ್ಪು ಮತ್ತು ರಮ್ಲತ್ ಅವರ ಪುತ್ರಿಯಾಗಿದ್ದಾರೆ.