ನನ್ನ ಉಸಿರಿನಲಿ ಹೊಸ ರಾಗ ತಂದವಳು ನೀನು,
ನನ್ನ ಅಂದದ ಬದುಕಿಗೆ ಬಣ್ಣ ತುಂಬಿದ ಚಿನ್ನ ನೀನು.
ಕಣ್ಣ ರೆಪ್ಪೆಯಂತೆ ನಿನ್ನ ಕಾಯುವೆನು ಪ್ರತಿಕ್ಷಣ,
ನನ್ನ ಪುಟ್ಟ ಪ್ರಪಂಚವೇ ನೀನು, ನನ್ನ ಜೀವನದ ಒಡವೆ ನೀನು.
ಹೆಣ್ಣು ಮಗುವಲ್ಲ ನೀನು, ನನ್ನ ಮನೆಬೆಳಗುವ ನಂದಾದೀಪ,
ನಿನ್ನ ಆ ಮುಗ್ಧ ನಗು ಅಳಿಸುವುದು ಮನದ ಎಲ್ಲ ತಾಪ.
ನೂರಾರು ಕನಸುಗಳ ಹೊತ್ತು ಹರಸುವೆನು ನಿನ್ನನು,
ನನ್ನ ಅರಿವಿನಲಿ, ಹರಕೆಯಲಿ ಸದಾ ಇರುವವಳು ನೀನು.
ಒಬ್ಬಳೇ ಮಗಳಾದರೂ, ನೂರು ಸುಖದ ಗಣಿ ನೀನು,
ನನ್ನ ಹೆಮ್ಮೆ, ನನ್ನ ಶಕ್ತಿ, ನನ್ನ ಉಸಿರು ನೀನು.
ಆಕಾಶದ ಎತ್ತರಕ್ಕೆ ಬೆಳೆಯಲಿ ನಿನ್ನ ಸಾಧನೆಯ ಹಾದಿ,
ನಿನ್ನ ಬೆನ್ನ ಹಿಂದೆ ನಾನಿರುವೆ, ಪ್ರೀತಿಯ ಈ ತಾಯಿ.
✒️ಜುವೈರಾ ಮುನಾವರ
ಸಂತ ಅಲೋಶಿಯಸ್ ಸ್ಕೂಲ್ ಆಫ್ ಎಜುಕೇಶನ್, ಮಂಗಳೂರು
