ಉಡುಪಿ: ಇಲ್ಲಿನ ಮಣಿಪಾಲದ ಪೆರಂಪಳ್ಳಿಯಲ್ಲಿರುವ ಪ್ರತಿಷ್ಠಿತ 'ಅಲ್ ಇಬಾದ ಇಂಡಿಯನ್ ಸ್ಕೂಲ್' 2025-26ನೇ ಸಾಲಿನ ಸಿಬಿಎಸ್ಇ 10ನೇ ತರಗತಿ ವಾರ್ಷಿಕ ಪರೀಕ್ಷೆಯಲ್ಲಿ 100 ಶೇ. ಫಲಿತಾಂಶ ದಾಖಲಿಸಿದೆ.
ಝೈದ್ ಅಕಾಡೆಮಿ(Zaid Academy)ಯಿಂದ ನಡೆಯುತ್ತಿರುವ ಈ ಶಾಲೆಯ ಈ ಬಾರಿಯ ವಾರ್ಷಿಕ ಪರೀಕ್ಷೆಯಲ್ಲಿ ಅಫ್ಸಾ ಅಸ್ಮತುಲ್ಲಾ ಅಸ್ಸಾದಿ – 93% ಹಾಗು ಮಿಶಾಲ್ ಉಬೈದುಲ್ಲಾ (ಹಾಫಿಜ್-ಎ-ಖುರಾನ್) – 91% ಅಂಗ ಗಳಿಸುವ ಮೂಲಕ ಸಾಧನೆ ಮೆರೆದಿದ್ದಾರೆ.
ಶಾಲೆಯ ಅಲಿಷಾ ಝೈನಬ್, ಲುಕ್ಮಾನ್ ಬಿಲಾಲ್ ಇಬ್ರಾಹಿಂ, ಆಯಿಷಾ ಸಯ್ಯದ್, ಅನೈನ್ ಅಝ್ಗರ್, ಹಿಮಾಸ್ ಮೊಹಮ್ಮದ್, ಸಿಮ್ರಾನ್, ಸೈಮಾ ಮೊಹಮ್ಮದ್ ಬಿಲಾಲ್, ಮಹೀನ್ ಮರಿಯಂ, ಮುಹಮ್ಮದ್ ಮೊಯಿದೀನ್ ಶಫಾತ್, ಝೈನಬ್ ಖಾನ್ ವಿಶಿಷ್ಟ ಶ್ರೇಣಿ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.
