ಪಿಯುಸಿ ಫಲಿತಾಂಶ: ಫಾತಿಮಾ ರಿಶಾ, ಆಯಿಷಾ ಶಿರೀನ್, ಅರ್ಮಾನ್ ಯೂಸುಫ್ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ

ಮಂಗಳೂರಿನ ಸೇಂಟ್ ಆಗ್ನೆಸ್ ಪಿಯು ಕಾಲೇಜಿನ ಫಾತಿಮಾ ರಿಶಾ ವಿಜ್ಞಾನ ವಿಭಾಗದಲ್ಲಿ 523/600 ಅಂಕ ಗಳಿಸುವ ಮೂಲಕ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಇವರು ಬಳಕುಂಜ ಪಲಿಮಾರಿನ ಮೊಹಮ್ಮದ್ ಶೇಖಬ್ಬ ಹಾಗು ರಹ್ಮತ್ ಅವರ ಪುತ್ರಿಯಾಗಿದ್ದಾರೆ. 

ಮಂಗಳೂರಿನ ಬಬ್ಬುಕಟ್ಟೆಯ ಹಿರಾ ಪಿಯು ಕಾಲೇಜಿನ ಆಯಿಷಾ ಶಿರೀನ್ ವಾಣಿಜ್ಯ ವಿಭಾಗದಲ್ಲಿ 519/600 ಅಂಕ ಗಳಿಸುವ ಮೂಲಕ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಇವರು ಮೂಳೂರಿನ ಮೊಹಮ್ಮದ್ ಸಿದ್ದಿಕ್ ಹಾಗು ಸಬೀನಾ ಅವರ ಪುತ್ರಿಯಾಗಿದ್ದಾರೆ.

ಉಡುಪಿಯ ವಿದ್ಯೋದಯ ಪಿಯು ಕಾಲೇಜಿನ ಅರ್ಮಾನ್ ಯೂಸುಫ್ ಹ್ಯಾರಿಸ್ ವಿಜ್ಞಾನ ವಿಭಾಗದಲ್ಲಿ 519/600 ಅಂಕ ಗಳಿಸುವ ಮೂಲಕ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಇವರು ಮೂಳೂರಿನ ಹ್ಯಾರಿಸ್ ಯೂಸುಫ್ ಚಿಕ್ಕಮಗಳೂರು ಹಾಗು ದಿಲ್ಶಾದ್ ಮೂಳೂರು ಅವರ ಪುತ್ರರಾಗಿದ್ದಾರೆ.