ಮಂಗಳೂರು ಬ್ಯಾರೀಸ್ ಫೆಸ್ಟಿವಲ್ 2.0 ಫ್ಲಿಯಾ ಮಾರ್ಕೆಟ್‌ನಲ್ಲಿ 'ಮಿಸ್ಬಾಹ್ ಫ್ರಾಗ್ರನ್ಸ್' ಸುಗಂಧದ ವಿಶೇಷ ಮೆರುಗು

Beary’s Festival 2.0 Flea Market ಅಂಗವಾಗಿ ಮಂಗಳೂರಿನ ಎಮ್ಮೆಕೆರೆ ಮೈದಾನದಲ್ಲಿ ನಡೆಯಲಿರುವ ಫ್ಲಿಯಾ ಮಾರ್ಕೆಟ್‌ನಲ್ಲಿ ಪ್ರತಿಷ್ಠಿತ 'Misbah Fragrance ' ತನ್ನ ವಿಶೇಷ ಸುಗಂಧ ದ್ರವ್ಯಗಳು ಹಾಗೂ ಆಯ್ದ ಅಗರ್ಬತ್ತಿಗಳೊಂದಿಗೆ ಜನರ ಗಮನ ಸೆಳೆಯಲು ಸಜ್ಜಾಗಿದೆ.

ಮಂಗಳೂರಿನ ಎಮ್ಮೆಕೆರೆ ಮೈದಾನದಲ್ಲಿ ಮೇ 8, 9 ಹಾಗೂ 10 ರಂದು ನಡೆಯಲಿರುವ ಈ ಮೇಳದಲ್ಲಿ ಸ್ಟಾಲ್ ಸಂಖ್ಯೆ 09ರಲ್ಲಿ “Misbah Fragrance” ತನ್ನ ವೈವಿಧ್ಯಮಯ ಸುಗಂಧ ಉತ್ಪನ್ನಗಳನ್ನು ಪ್ರದರ್ಶಿಸಲಿದೆ.

ಆಧುನಿಕ ಹಾಗೂ ಐಷಾರಾಮಿ ಪರಿಮಳಗಳನ್ನು ಒಳಗೊಂಡಿರುವ “Aura” ಬ್ರ್ಯಾಂಡ್ ನ ಫರ್ಫ್ಯೂಮ್ ಸೇರಿದಂತೆ ಹಲವು ವಿಶೇಷ ಪರ್ಫ್ಯೂಮ್‌ಗಳು, ಹಾಗೂ ವಿಶಿಷ್ಟ ಗುಣಮಟ್ಟದ ಅಗರ್ಬತ್ತಿಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಯುವಜನತೆ ಹಾಗೂ ಸುಗಂಧಾಸಕ್ತರನ್ನು ಗಮನದಲ್ಲಿಟ್ಟುಕೊಂಡು ವಿಶೇಷ ವಿನ್ಯಾಸ ಮತ್ತು ಗುಣಮಟ್ಟದ ಉತ್ಪನ್ನಗಳನ್ನು ಪರಿಚಯಿಸಲಾಗುತ್ತಿದೆ ಎಂದು ಸಂಸ್ಥೆಯ ಮುಖ್ಯಸ್ಥರಾದ ಮಕ್ದೂಮ್ ರಾಝಿ ರವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಈ ಫ್ಲಿಯಾ ಮಾರ್ಕೆಟ್‌ನಲ್ಲಿ ಸ್ಥಳೀಯ ಉದ್ಯಮಿಗಳಿಗೆ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗಿದ್ದು, “Misbah Fragrance” ಕೂಡ ತನ್ನ ಹೊಸ ಪರಿಮಳ ಸಂಗ್ರಹವನ್ನು ಜನರಿಗೆ ಪರಿಚಯಿಸುವ ಮೂಲಕ ಗಮನ ಸೆಳೆಯುತ್ತಿದೆ.

ಸುಗಂಧ ಪ್ರಿಯರು, ಕುಟುಂಬ ಸಮೇತ ಮೇಳಕ್ಕೆ ಭೇಟಿ ನೀಡಿ ವಿಭಿನ್ನ ಪರಿಮಳಗಳ ಅನುಭವ ಪಡೆಯುವಂತೆ ಸಂಸ್ಥೆ ಮನವಿ ಮಾಡಿದೆ.