ಮಂಗಳೂರು: ಇನ್ಸ್ಟಿಟ್ಯೂಟ್ ಆಫ್ ಕರಾಟೆ-ಅಲೈಡ್ ಆರ್ಟ್ಸ್ ಆಯೋಜಿಸಿದ ಪರೀಕ್ಷೆಯಲ್ಲಿ ಉನ್ನತ ಬ್ಲ್ಯಾಕ್ ಬೆಲ್ಟ್

ಮಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ಮೇ 9 ಮತ್ತು 10 ರಂದು ಬುಡೊಕಾನ್ ಕರಾಟೆ ಡು - ಇಂಟರ್ ನ್ಯಾಷನಲ್ ಇದರ ಅಂಗ ಸಂಸ್ಥೆಯಾದ ಇನ್ಸ್ಟಿಟ್ಯೂಟ್ ಆಫ್ ಕರಾಟೆ ಮತ್ತು ಅಲೈಡ್ ಆರ್ಟ್ಸ್ ಆಯೋಜಿಸಿದ ಉನ್ನತ ಬ್ಲ್ಯಾಕ್ ಬೆಲ್ಟ್ ಪರೀಕ್ಷೆಯಲ್ಲಿ  ಕಾಪುವಿನ ಕರಂದಾಡಿ ಶಾಖೆಯ ವಿದ್ಯಾರ್ಥಿಗಳಾದ ಶಿವಾನಿ ಭಾಸ್ಕರ ಪೂಜಾರಿ, ಮಾನ್ವಿ ಡಿ.ಎಮ್.ಪೂಜಾರಿ ಬ್ಲ್ಯಾಕ್ ಬೆಲ್ಟ್ ಮತ್ತು ಕೃಷ್ಣ ಪ್ರಸಾದ್ ಮತ್ತು ಮೊಹಮ್ಮದ್ ಆದಿಲ್ ಅತ್ಯುತ್ತಮ ಅಂಕ ಗಳಿಸಿ ಸತತ ಮೂರನೇ ಬ್ಲ್ಯಾಕ್ ಬೆಲ್ಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇವರು ಅಂತಾರಾಷ್ಟ್ರೀಯ ಕರಾಟೆ ಪಟು ಹಾಗೂ ಮುಖ್ಯ ಕೋಚ್ ಕರಾಟೆ ಟೈಗರ್ ಅಬ್ದುಲ್ ಖಾದರ್ ಹುಸೈನ್ ಪಡುಬಿದ್ರಿ ಇವರಿಂದ ತರಬೇತಿ ಪಡೆದಿದ್ದಾರೆ.