ಮಂಗಳೂರು; 'ಬ್ಯಾರಿವಾರ್ತೆ ಗೌರವ ಪ್ರಶಸ್ತಿ'ಗೆ ಪಾತ್ರರಾದ ಅಬ್ದುಲ್ ಸಲಾಮ್ ದೇರಳಕಟ್ಟೆ

ಮಂಗಳೂರು:  ಬ್ಯಾರಿ ವಾರ್ತೆ ಮಾಸಪತ್ರಿಕೆಯ ಹತ್ತನೇ ವರ್ಷದ ನೆನಪಿಗಾಗಿ ಆಯೋಜಿಸಿರುವ ‘ಪತ್ತಾಂಡ್ ಜಲ್ಸ್ ಗೌರವ ಪ್ರಶಸ್ತಿ -2026’ ಪುರಸ್ಕೃತರಲ್ಲಿ ಓರ್ವರಾದ ಬ್ಯಾರಿ ಸಾಹಿತಿ, ಪತ್ರಕರ್ತ ಅಬ್ದುಲ್ ಸಲಾಮ್ ದೇರಳಕಟ್ಟೆಯವರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಗರದ ಹಿದಾಯತ್ ಸೆಂಟರಿನಲ್ಲಿ ಇತ್ತೀಚೆಗೆ ನಡೆಯಿತು.

ಸನ್ಮಾರ್ಗ ವಾರಪತ್ರಿಕೆಯ ಪ್ರಧಾನ ಸಂಪಾದಕ ಎ. ಕೆ. ಕುಕ್ಕಿಲ ಪ್ರಶಸ್ತಿ ಪ್ರದಾನ ಮಾಡಿದರು.

ಬ್ಯಾರಿವಾರ್ತೆ ಸಂಪಾದಕ ಬಶೀರ್ ಬೈಕಂಪಾಡಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಹಿರಿಯ ಸಾಹಿತಿ ಮುಹಮ್ಮದ್ ಕುಳಾಯಿ ಭಾಗವಹಿಸಿದ್ದರು.

ಬ್ಯಾರಿವಾರ್ತೆ ಸಹ ಸಂಪಾದಕ ಮುಹಮ್ಮದ್ ಅಲಿ ಕಮ್ಮರಡಿ ಕಾರ್ಯಕ್ರಮ ನಿರೂಪಿಸಿದರು.