ಬೆಂಗಳೂರು: ಕರ್ನಾಟಕದ ನೂತನ ಸಿಎಂ ಆಗಿ ಡಿಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸುತ್ತಿದ್ದು ಡಿಕೆಶಿ ಜೊತೆಯಲ್ಲಿ 13 ಪ್ರಭಾವಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ.
ಡಿಕೆಶಿ ಪ್ರಮಾಣ ವಚನಕ್ಕೆ ಲೋಕಭವನದ ಗಾಜಿನ ಮನೆಯಲ್ಲಿ ಸಕಲ ಸಿದ್ಧತೆ ನಡೆದಿದೆ. ವೇದಿಕೆಯಲ್ಲಿ 20 ಆಸನಗಳ ವ್ಯವಸ್ಥೆ ಮಾಡಲಾಗಿದೆ. ಸ್ವಾಮೀಜಿ, ಫಾದರ್ ಹಾಗೂ ಮೌಲ್ವಿ ಸೇರಿದಂತೆ ಸರ್ವಧರ್ಮಗಳ 55 ಸ್ವಾಮೀಜಿಗಳಿಗೆ ಆಹ್ವಾನ ನೀಡಲಾಗಿದ್ದು, ಅವರ ಸಮ್ಮುಖದಲ್ಲಿ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ರಾಹುಲ್ ಗಾಂಧಿ, ಪ್ರಿಯಾಂಕಗಾಂಧಿ, ವೇಣುಗೋಪಾಲ್, ಸುರ್ಜೇವಾಲಾ ಸೇರಿದಂತೆ ಹಲವು ಗಣ್ಯರಿಗೆ ಪ್ರಮಾಣವಚನಕ್ಕೆ ಆಹ್ವಾನ ನೀಡಲಾಗಿದೆ. ಈಗಾಗಲೇ ಕೇರಳ ಸಿಎಂ ಸತೀಶನ್ ಬೆಂಗಳೂರಿಗೆ ಬಂದಿದ್ದಾರೆ. 80ರ ದಶಕದಿಂದ ಸುದೀರ್ಘ ರಾಜಕೀಯ ಜೀವನ, ರಾಜಕಾರಣ ಆಳ-ಅಗಲದ ಅನುಭವ, ಐಟಿ-ಇಡಿ ತನಿಖೆ ಹಾಗೂ ಜೈಲುವಾಸದ ನಂತರ ಮುಖ್ಯಮಂತ್ರಿ ಪಟ್ಟ ಅಲಂಕರಿಸುತ್ತಿದ್ಧಾರೆ.
ಡಿ.ಕೆ. ಶಿವಕುಮಾರ್ ಜೊತೆ 13 ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ. ಮಂಗಳವಾರ ಬೆಳಗ್ಗೆ 11 ಗಂಟೆಗೆ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಸಭೆ ಸೇರಿದ್ದ ರಾಹುಲ್ ಗಾಂಧಿ, ವೇಣುಗೋಪಾಲ್, ಸುರ್ಜೇವಾಲ, ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಸಚಿವರ ಪಟ್ಟಿಯನ್ನು ಫೈನಲ್ ಮಾಡಿದ್ದಾರೆ.
ಸಂಜೆ ಎಐಸಿಸಿ ಸಂಘಟನಾ ಕಾರ್ಯದರ್ಶಿ ವೇಣುಗೋಪಾಲ್ ನಿವಾಸದಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಸಿದ್ದ ಕೈ ನಾಯಕರು ಪಟ್ಟಿ ಅಂತಿಮಗೊಳಿಸಿದ್ದಾರೆ. ಹೈಕಮಾಂಡ್ ಭೇಟಿ ಬಳಿಕ ಬೆಂಗಳೂರಿಗೆ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಒಟ್ಟಿಗೆ ಆಗಮಿಸುತ್ತಿದ್ದು, ಇಂದು ಬಹುತೇಕ 13 ಮಂದಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಸಚಿವರ ಪಟ್ಟಿ ಈ ಕೆಳಗಿನಂತಿವೆ :
ಡಾ.ಜಿ.ಪರಮೇಶ್ವರ್ – ಉಪಮುಖ್ಯಮಂತ್ರಿ
ಕೆ.ಎಚ್. ಮುನಿಯಪ್ಪ – ಸಚಿವರು
ಕೆ.ಜೆ. ಜಾರ್ಜ್ – ಸಚಿವರು
ಎಂ.ಬಿ. ಪಾಟೀಲ್ – ಸಚಿವರು
ರಾಮಲಿಂಗಾರೆಡ್ಡಿ – ಸಚಿವರು
ಸತೀಶ್ ಜಾರಕಿಹೊಳಿ – ಸಚಿವರು
ಕೃಷ್ಣಬೈರೇಗೌಡ – ಸಚಿವರು
ಪ್ರಿಯಾಂಕ್ ಖರ್ಗೆ – ಸಚಿವರು
ಯು.ಟಿ. ಖಾದರ್ – ಸಚಿವರು
ಈಶ್ವರ್ ಖಂಡ್ರೆ – ಸಚಿವರು
ಯತೀಂದ್ರ ಸಿದ್ದರಾಮಯ್ಯ – ಸಚಿವರು
ಭೈರತಿ ಸುರೇಶ್ – ಸಚಿವರು
ಶರಣಪ್ರಕಾಶ್ ಪಾಟೀಲ್–ಸಚಿವರು
