ಪರ್ಕಳ: ಹೆದ್ದಾರಿಯಲ್ಲಿ ಕಂಟೇನರ್ ಪಲ್ಟಿ; ತಪ್ಪಿದ ಭಾರೀ ಅನಾಹುತ

ಉಡುಪಿ: ಪರ್ಕಳದ ಕೆಳಪರ್ಕಕಳ ಹೆದ್ದಾರಿಯಲ್ಲಿ (NH169A) ಕೆನರಾ ಬ್ಯಾಂಕಿನ ತಿರುವಿನಲ್ಲಿ ಕಂಟೇನ‌ರ್ ಲಾರಿಯೊಂದು ಪಲ್ಟಿಯಾದ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.

ಆತ್ರಾಡಿಯಿಂದ ಪೇಪರ್ ಬಾಕ್ಸ್ ಗಳನ್ನು ತುಂಬಿ ಹುಬ್ಬಳ್ಳಿ ಕಡೆ ಪ್ರಯಾಣ ಬೆಳೆಸಿದ್ದ ಲಾರಿ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಪರ್ಕಳದ ಈ ಪ್ರದೇಶದಲ್ಲಿ ಬೃಹತ್ ವಾಹನಗಳು ಕೆಟ್ಟು ನಿಲ್ಲುವುದು, ಅಪಘಾತಗಳು ನಡೆಯುತ್ತಿರುವುದು ಸರ್ವೇಸಾಮಾನ್ಯವಾಗಿದೆ.


ಲಾರಿಯಿಂದ ಡೀಸೆಲ್ ಸೋರಿಕೆಯಾಗಿದೆ. ತತ್ ಕ್ಷಣ ಕಾರ್ಯಾಚರಣೆ ನಡೆಸಿ ಲಾರಿಯನ್ನು ಮೇಲಕ್ಕೆತ್ತಲಾಗಿದೆ. ಯಾವುದೇ ಪ್ರಾಣಹಾನಿಯಾದ ಬಗ್ಗೆ ವರದಿಯಾಗಿಲ್ಲ. ಎರಡು ದಿನಗಳ ಹಿಂದಷ್ಟೇ ಏರು ರಸ್ತೆಯಲ್ಲಿ ಲಾರಿಯೊಂದು ಕೆಟ್ಟು ನಿಂತು ವಾಹನ ಸವಾರರು ಪರದಾಡಬೇಕಾಗಿತ್ತು.

ರಸ್ತೆಯಲ್ಲಿ ಚೆಲ್ಲಿದ ರೆಡಿ ಮಿಕ್ಸ್- ಸವಾರರ ಪರದಾಟ

ಈ ರಸ್ತೆಯಲ್ಲಿ ನಿತ್ಯವೂ ರೆಡಿ ಮಿಕ್ಸರ್ ವಾಹನಗಳು ಸಂಚರಿಸುತ್ತಿದು ಏರಿನ ರಸ್ತೆಯಲ್ಲಿ ರೆಡಿ ಮಿಕ್ಸ್ ಜೆಲ್ಲಿ ನಿತ್ಯವೂ ಬೀಳುತ್ತಿದ್ದು ವಾಹನ ಸವಾರ ರಿಗೆ ಸಂಕಷ್ಟ ತಂದೊಡ್ಡುತ್ತಿದೆ.

ಸಾರ್ವಜನಿಕರ ಆಕ್ರೋಶ

ಜನಪ್ರತಿನಿಧಿಗಳು, ಜಿಲ್ಲಾಡಳಿತ ವಾಹನ ಚಾಲಕರಿಗೆ, ಮಾಲಕರಿಗಾಗುವ ನಷ್ಟವನ್ನು ಮನಗಂಡು ಶೀಘ್ರ ಹಳೆ ರಸ್ತೆಯನ್ನಾದರೂ ಅಭಿವೃದ್ಧಿಗೊಳಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.