ಬೆಂಗಳೂರು: ವಿಜಯ ದಶಮಿಗೆ ಒಂದು ದಿನ ಚಡ್ಡಿ ಪ್ಯಾಂಟ್ ಹಾಕೋದು ಬಿಟ್ಟರೆ ಬಿಜೆಪಿಯ ಯಾವೊಬ್ಬ ನಾಯಕನ ಮಗನೂ ಆರ್.ಎಸ್.ಎಸ್ ನಲ್ಲಿ ಪೂರ್ಣ ಪ್ರಚಾರಕರಾಗಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಷ್ಟು ದಿನ ನಾನು ಹೇಳ್ತಾ ಇದ್ದೆ. ಈಗ ಅವರೇ ಹೇಳ್ತಾ ಇದ್ದಾರಾ? ನಾನು ಮುಂಚೆ ಇಂದ ಇದೇ ಹೇಳ್ತಾ ಇದ್ದೀನಿ. ಗೋಶಾಲೆಗೆ ಹೋಗಬೇಕು ಅನ್ನೋದು, ಧರ್ಮ ರಕ್ಷಣೆ, ಗೋ ರಕ್ಷಣೆಗೆ ಬಿಡೋದು ಬಡವರ ಮಕ್ಕಳನ್ನು ಮಾತ್ರ. ಇವರ ಮಕ್ಕಳ ಏನ್ ಮಾಡ್ತಾ ಇದ್ದಾರೆ. ಒಬ್ಬ ಬಿಜೆಪಿ ಲೀಡರ್ ಮಗ RSS ನ ಪೂರ್ಣ ಪ್ರಚಾರಕರು ಇದ್ದರೆ ತೋರಿಸಿ ನೋಡೋಣ ಅಂತ ಸವಾಲು ಹಾಕಿದರು.
ವಿಜಯ ದಶಮಿಗೆ ಒಂದು ದಿನ ಚಡ್ಡಿ ಪ್ಯಾಂಟ್ ಹಾಕೋದು ಅಷ್ಟೇ ಅವರ ಕೆಲಸ. ಒಬ್ಬ ಬಿಜೆಪಿ ನಾಯಕರ ಮಗ ಫುಲ್ ಟೈಂ ಪ್ರಚಾರಕರನಾಗಿರುವುದನ್ನು ತೋರಿಸಿ. ಕೋಮು ಗಲಭೆಯಲ್ಲಿ ಯಾರು ಸಾಯ್ತಾ ಇದ್ದಾರೆ. ಇವರು ಮಕ್ಕಳ ಹೋಗ್ತಾರಾ? ಪರೇಶ್ ಮೆಸ್ತಾ ಹೆಸರಲ್ಲಿ ಚುನಾವಣೆ ಗೆದ್ದರು, ಆದರೆ ಅವರ ಮನೆಗೆ ಇವರು ಹೋಗಿದ್ದಾರಾ? ಈಗಲಾದರೂ ಯುವಕರು ಜಾಗೃತರಾಗಿ ಉದ್ಯೋಗ ಹುಡುಕಿ ಕುಟುಂಬಕ್ಕೆ ನೆರವಾಗಿ ಎಂದು ಪ್ರಿಯಾಂಕ್ ಸಲಹೆ ನೀಡಿದರು.
ಕೋಮು ಗಲಭೆಗೆ ನಿಮ್ಮನ್ನ ಉಪಯೋಗ ಮಾಡಿಕೊಳ್ತಿದ್ದಾರೆ. ದಲಿತರು, ಹಿಂದುಳಿದವರನ್ನ ಬಳಕೆ ಮಾಡಿಕೊಳ್ತಾ ಇದ್ದಾರೆ. RSS ಅವರು ರೈತರ ಪರ ಪ್ರತಿಭಟನೆ ಮಾಡಿದ್ದಾರಾ? ನಿರುದ್ಯೋಗ, ಬೆಲೆ ಏರಿಕೆ ಬಗ್ಗೆ ಮಾತಾಡಿದ್ದಾರಾ? ಇಂತಹದ್ದಕ್ಕೆ ಮಾತ್ರ ಪ್ರಚೋದನೆ ಕೊಡ್ತಾರೆ.
ಯುವಕರಿಗೆ ಹೇಳ್ತೀನಿ ಆ ತಂಟೆಗೆ ಹೋಗಬೇಡಿ. ಬಿಜೆಪಿ, ಸಂಘ ಪರಿವಾರದ ಮಕ್ಕಳು ಅದರಲ್ಲಿ ಇಲ್ಲ. ನಿಮ್ಮನ್ನ ಈ ನರಕಕ್ಕೆ ತಳ್ಳುತ್ತಾರೆ. ನರಕಕ್ಕೆ ತಳ್ಳಿದ ಮೇಲೆ ನಿಮ್ಮ ಸಹಾಯಕ್ಕೆ ಯಾರು ಬರಲ್ಲ.
ನನಗೆ ಬೆದರಿಗೆ ಹಾಕಿದ ಯುವಕನಿಗೆ ಲಾಯರ್ ಕೂಡಾ ಇವರು ಕೊಟ್ಟಿಲ್ಲ. ಅವರ ತಾಯಿ ಫೋನ್ ಮಾಡಿದ್ದಕ್ಕೆ ಬಿಟ್ಟೆ. ರಾಜಕೀಯ ಬೇಳೆ ಬೇಯಿಸಿಕೊಳ್ಳೋಕೆ ಯುವಕರು ಬೇಕು. ಮಹೇಂದ್ರ ಕುಮಾರ್ ಹೇಳ್ತಾ ಇದ್ದರು ರಕ್ತಪಿಪಾಸುಗಳು ಅಂತಿದ್ದರು. ಇದನ್ನ ಎಷ್ಟು ಬೇಗ ತಿಳಿದಿಕೊಳ್ತೀವಿ ಅಷ್ಟು ಒಳ್ಳೆಯದು ಅಂತ ಯುವಕರಿಗೆ ಸಲಹೆ ನೀಡಿದ್ದಾರೆ.
