ಕಾಪು: ಮೂಳೂರು ಭಾಗದಲ್ಲಿ ಯಶಸ್ವಿಯಾಗಿ ಪೂರ್ಣಗೊಂಡ SIR

 

ಕಾಪು: ರಾಜ್ಯಾದ್ಯಂದ ನಡೆಯುತ್ತಿರುವ SIR (ವಿಶೇಷ ಮತದಾರರ ಪಟ್ಟಿಯ ಪರಿಷ್ಕರಣೆ)ಯ ಅಂಗವಾಗಿ ಕಾಪು ಪುರಸಭೆ ವ್ಯಾಪ್ತಿಯ ಸದಸ್ಯರು ಹಾಗೂ BLA -2 ಆದಂತಹ ಮುಹಮ್ಮದ್ ಆಸೀಫ್, ಸತೀಶ್ಚಂದ್ರ, ಹಮೀದ್ ಯೂಸುಫ್ ಹಾಗೂ  BLOಗಳು ಸೇರಿ ಸಾರ್ವಜನಿಕರಿಗೆ  SIR ಪ್ರಕ್ರಿಯೆಯನ್ನು ಬಹಳ ಯಶಸ್ವಿಯಾಗಿ ಪೂರ್ತಿಗೊಳಿಸುವಲ್ಲಿ ಸಹಕರಿಸಿದ್ದಾರೆ. 


ಮೂಳೂರು ಮಂಗಳಪೇಟೆ, ತೊಟ್ಟಂ, ದುಗ್ಗಂತೋಟ ವಾರ್ಡಿನಲ್ಲಿ ಮನೆಮನೆಗೆ ತೆರಳಿ SIR ಫಾರಂಗಳನ್ನು ನೀಡಿ, ಪ್ರಜಾಪ್ರಭುತ್ವದ ಸುಭದ್ರತೆಗೆ ಮತದಾರರ ಪಟ್ಟಿಯ ಪರಿಷ್ಕರಣೆ ಅತ್ಯಂತ ಮಹತ್ವದ ಪ್ರಕ್ರಿಯೆಯಾಗಿದ್ದು, ಅರ್ಹ ಪ್ರತಿಯೊಬ್ಬ ಮತದಾರರು ಯಾವುದೇ ಅಸಡ್ಡೆ ತೋರದೆ ಈ ಕಾರ್ಯದಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು. ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು, ವಿಳಾಸ ಹಾಗೂ ಇತರ ವಿವರಗಳನ್ನು ಪರಿಶೀಲಿಸಿ, ಅಗತ್ಯವಿರುವ ತಿದ್ದುಪಡಿಗಳು, ಸೇರ್ಪಡೆ ಅಥವಾ ಬದಲಾವಣೆಗಳನ್ನು ನಿಗದಿತ ಅವಧಿಯೊಳಗೆ ಮಾಡಿಸಿಕೊಳ್ಳುವ ಮೂಲಕ ಪರಿಷ್ಕರಣೆ ಕಾರ್ಯಕ್ಕೆ ಸಹಕರಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಯಿತು.